ಆ್ಯಪ್ನಗರ

ಹಿಂದು, ಮುಸ್ಲಿಂ ಸೆಲೆಬ್ರಿಟಿಗಳು ಮದುವೆಯಾಗಿದ್ದಕ್ಕೆ ಜನರು ಇಂಥ ಪ್ರಶ್ನೆಗಳನ್ನು ಕೇಳೋದಾ! ಯಪ್ಪಾ...!

ಕಿರುತೆರೆ ರಿಯಲ್ ಲೈಫ್ ಜೋಡಿಗಳಿಗೆ ಪ್ರಶ್ನೆ ಹಾಕಿದ ನೆಟ್ಟಿಗರು

Vijaya Karnataka Web 20 May 2020, 8:02 pm
ಟಿವಿ ಸೆಲೆಬ್ರಿಟಿಗಳು ಜನಕ್ಕೆ ತುಂಬ ಹತ್ತಿರವಾಗಿರುತ್ತಾರೆ, ಅವರ ಬಗ್ಗೆ ಜನರು ತುಂಬ ಯೋಚನೆ ಮಾಡುತ್ತಿರುತ್ತಾರೆ. ಅವರ ವೈಯಕ್ತಿಕ ವಿಚಾರಗಳನ್ನು ಕೇಳಲು ಕೂಡ ಒಮ್ಮೊಮ್ಮೆ ಹಿಂದೆ-ಮುಂದೆ ನೋಡೋದಿಲ್ಲ. ಹೀಗಾಗಿ ಇಂತ ಸಂದರ್ಭಗಳು ಬಂದಾಗ ಸೆಲೆಬ್ರಿಟಿಗಳು ಮುಜುಗರಕ್ಕೆ ಒಳಗಾಗೋದುಂಟು. ಹಾಗೆಯೇ ಇಂತ ಸಂದರ್ಭ ನಟ ಶೋಯೆಬ್ ಮತ್ತು ದೀಪಿಕಾಗೆ ಎದುರಾಗಿದೆ.
Vijaya Karnataka Web jhalak dikhhla jaa fame dipika kakar husband shoaib ibrahim answer to trolls
ಹಿಂದು, ಮುಸ್ಲಿಂ ಸೆಲೆಬ್ರಿಟಿಗಳು ಮದುವೆಯಾಗಿದ್ದಕ್ಕೆ ಜನರು ಇಂಥ ಪ್ರಶ್ನೆಗಳನ್ನು ಕೇಳೋದಾ! ಯಪ್ಪಾ...!


ಶೋಯೆಬ್ ಮತ್ತು ದೀಪಿಕಾ ಹಲವು ವರ್ಷಗಳ ಕಾಲ ಪ್ರೀತಿಸಿದ್ದರು. ಶೋಯೆಬ್ ಊರಿನಲ್ಲಿ ಇವರಿಬ್ಬರ ಮದುವೆ ನಡೆದಿತ್ತು. 2010ರಲ್ಲಿ ದೀಪಿಕಾ ಮೊದಲ ಬಾರಿಗೆ ಧಾರಾವಾಹಿಯೊಂದರಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ದೀಪಿಕಾ ಡಾನ್ಸ್ ರಿಯಾಲಿಟಿ ಶೋನಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಹತ್ತು ವರ್ಷಗಳಿಂದ ದೀಪಿಕಾ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಶೋಯೆಬ್ ಕೂಡ ಕಂಪ್ಯೂಟರ್ ಇಂಜಿನಿಯರಿಂಗ್ ಮುಗಿಸಿ 2019ರಲ್ಲಿ ಧಾರಾವಾಹಿ ಲೋಕಕ್ಕೆ ಪ್ರವೇಶ ಪಡೆದರು.

ಶೋಯೆಬ್ ಮತ್ತು ದೀಪಿಕಾ ಹೆಸರು ಕೇಳಿದರೆ ಇವರಿಬ್ಬರೂ ಬೇರೆ ಬೇರೆ ಧರ್ಮದವರು ಎಂದು ಗೊತ್ತಾಗುತ್ತದೆ. ಹೀಗಾಗಿ ಟ್ರೋಲಿಗರು ಇವರನ್ನು ವಿಧ ವಿಧವಾದ ರೀತಿಯಲ್ಲಿ ಟ್ರೋಲ್ ಮಾಡಿದ್ದರು. ಇದಕ್ಕೆ ಶೋಯೆಬ್ ಉತ್ತರ ನೀಡಿದ್ದಾರೆ.

ದೀಪಿಕಾರಿಗೆ ಇದು ಎರಡನೇ ಮದುವೆ

ನಿಮ್ಮ ಪತ್ನಿ ಹಿಂದು ಅಥವಾ ಮುಸ್ಲಿಂ? ಎಂದು ನೆಟ್ಟಿಗನೊಬ್ಬ ಪ್ರಶ್ನೆ ಮಾಡಿದ್ದನು.

ವ್ಯಕ್ತಿ ಚೆನ್ನಾಗಿದ್ರೆ ಸಾಕು, ಬೇರೆ ಯಾವುದು ಬೇಡ ಎಂದು ಶೋಯೆಬ್ ಉತ್ತರಿಸಿದ್ಧಾರೆ.

ದೀಪಿಕಾ ಹುಟ್ಟುತ್ತಲೇ ಹಿಂದು ಧರ್ಮಕ್ಕೆ ಸೇರಿದವರು. ಮೂಲತಃ ಇವರು ಪುಣೆಯವರು. ಗಗನಸಖಿಯಾಗಿ 3 ವರ್ಷ ಮುಂಬೈನಲ್ಲಿ ಕೆಲಸ ಮಾಡಿದ್ದ ದೀಪಿಕಾ ಆಮೇಲೆ ನಟನೆಯತ್ತ ಮುಖ ಮಾಡಿದರು. 2011ರಲ್ಲಿ ರೋನಕ್ ಸ್ಯಾಮ್ಸನ್ ಮದುವೆಯಾಗಿದ್ದ ದೀಪಿಕಾ 2015ರಲ್ಲಿ ಇವರಿಂದ ವಿಚ್ಛೇದನ ಪಡೆದರು. ಶೋಯೆಬ್ ಅವರ ಎರಡನೇ ಗಂಡ. ಬಿಗ್ ಬಾಸ್ ಹಿಂದಿ 12 ರಲ್ಲಿ ಭಾಗವಹಿಸಿ ದೀಪಿಕಾ ವಿಜೇತರಾಗಿದ್ದರು. 'ಸಸುರಾಲ್ ಸಿಮರ್‌ ಕಾ' ಧಾರಾವಾಹಿಯಲ್ಲಿ ಶೋಯೆಬ್ ಕೂಡ ದೀಪಿಕಾ ಜೊತೆಗೆ ನಟಿಸಿದ್ದರು. 2018ರಲ್ಲಿ ಈ ಜೋಡಿ ಮದುವೆಯಾಗಿದೆ.

ಅಂತ್ಯವಾಯ್ತು 'ರಂಗನಾಯಕಿ' ಧಾರಾವಾಹಿ: ಕಾರಣ ಬೇರೆ ಇದೆ ಎಂದ ನಟ ಮಿಥುನ್!

ಸಾಂಪ್ರದಾಯಿಕ ಡ್ರೆಸ್ ಹೆಚ್ಚು ಧರಿಸುವ ದೀಪಿಕಾ

ದೀಪಿಕಾ ಯಾಕೆ ಯಾವಾಗಲೂ ಸಲ್ವಾರ್ (ಚುಡಿದಾರ) ಹಾಕುತ್ತಾರೆ? ನಿಮ್ಮ ಮನೆಯಲ್ಲಿ ನಿರ್ಭಂದವಿದೆಯೇ?

ನಾನು ಇದಕ್ಕೆ ಉತ್ತರ ಕೊಡಬೇಕು ಎಂದೆನಿಸುತ್ತಿಲ್ಲ. ಇದರ ಸತ್ಯ ನನ್ನ ಪತ್ನಿಗೆ ಗೊತ್ತಿದೆ, ಅಷ್ಟು ಸಾಕು. ನಿಮ್ಮ ಪ್ರಶ್ನೆ ನಿಮ್ಮ ಯೋಚನೆಯನ್ನು ತೋರಿಸುತ್ತದೆ ಎಂದು ಶೋಯೆಬ್ ಹೇಳಿದ್ದಾರೆ.

ದೀಪಿಕಾ ಮತ್ತು ಶೋಯೆಬ್ ಈಗ ರಂಜಾನ್ ಹಬ್ಬ ಒಟ್ಟಾಗಿ ಆಚರಿಸುತ್ತಿದ್ದಾರೆ. ಹೀಗಾಗಿ ಈ ಜೋಡಿ ಇತ್ತೀಚೆಗೆ ಟ್ರೆಡಿಶನಲ್ ಡ್ರೆಸ್‌ಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಹೀಗಾಗಿ ದೀಪಿಕಾ ಯಾಕೆ ಯಾವಾಗಲೂ ಸಾಂಪ್ರದಾಯಿಕ ಉಡುಗೆಯಲ್ಲಿಯೇ ಇರುತ್ತಾರೆ ಎಂಬ ಸಂದೇಹ ಕೆಲವರಿಗೆ ಬಂದಿರಬಹುದು. ಅಷ್ಟೇ ಅಲ್ಲದೆ ದೀಪಿಕಾಗೂ ವಯಸ್ಸಾಗಿರೋದರಿಂದ ಅವರು ಹೆಚ್ಚಾಗಿ ಗೃಹಿಣಿ ಪಾತ್ರಗಳಲ್ಲಿಯೇ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ನಟಿ ದೀಪಿಕಾ ದಾಸ್ ಅವರಿಗೆ ಸ್ಪರ್ಧೆ ಕೊಟ್ಟು ಗೆದ್ದ 'ನಾಗಿಣಿ 2' ಹೀರೋಯಿನ್ ನಮ್ರತಾ ಗೌಡ!

ಶೋಯೆಬ್ ಸ್ಟೈಲಿಸ್ಟ್ ದೀಪಿಕಾ ಅಂತೆ!

ಟ್ರೋಲ್ಸ್‌ಗಳನ್ನು ಹೇಗೆ ಹ್ಯಾಂಡಲ್‌ ಮಾಡ್ತೀರಾ? ಎಂದು ವ್ಯಕ್ತಿಯೊಬ್ಬರು ಪ್ರಶ್ನೆ ಮಾಡಿದ್ದಾರೆ

ಟ್ರೋಲ್‌ ಮಾಡುವವರಿಗೆ ಬೇರೆ ಕೆಲಸ ಇರೋದಿಲ್ಲ. ಅಷ್ಟೇ ಅಲ್ಲದೆ ಬೇರೆಯವರ ಲೈಫ್‌ನಲ್ಲಿರುವ ಖುಷಿಯನ್ನು ಅವರ ಬಳಿ ನೋಡಲು ಆಗೋದಿಲ್ಲ. ಅವರನ್ನು ಇಗ್ನೋರ್ ಮಾಡುವುದು ತುಂಬ ಒಳ್ಳೆಯ ಕೆಲಸ. ಹೀಗೆ ಹ್ಯಾಂಡಲ್‌ ಮಾಡಬೇಕು ಎಂದಿದ್ದಾರೆ ಶೋಯೆಬ್.

ಅವರು ವಿಚ್ಛೇದನ ಪಡೆದವರು. ನಿಮ್ಮ ನಿರ್ಧಾರ ಹಲವರಿಗೆ ಸ್ಫೂರ್ತಿ ನೀಡುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಶೋಯೆಬ್ ಧನ್ಯವಾದ ತಿಳಿಸಿದ್ದಾರೆ.

ಶೋಯೆಬ್ ಸ್ಟೈಲಿಶ್‌ನೆಸ್ ಗುಟ್ಟೇನು, ಕುರ್ತಾ ಎಲ್ಲಿಂದ ತಂದಿರಿ? ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ. 'ಕುರ್ತಾ ಡಿಪಾರ್ಟ್‌ಮೆಂಟ್ ದೀಪಿಕಾ ನೋಡಿಕೊಳ್ಳುತ್ತಾಳೆ. ದೀಪಿಕಾಳೇ ನನ್ನ ಕುರ್ತಾ ಆಯ್ಕೆ ಮಾಡಿ, ಸ್ಟಿಚ್ ಮಾಡಿಸುತ್ತಾಳೆ' ಎಂದು ಉತ್ತರ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ