ಆ್ಯಪ್ನಗರ

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದೇನೆ, ವಿಶ್ರಾಂತಿ ಬೇಕಿದೆ ಎಂದ 'ಜೊತೆ ಜೊತೆಯಲಿ' ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್!

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಜೊತೆ ಜೊತೆಯಲಿ' ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್ ಅವರು ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರಂತೆ. ಅವರ ಆರೋಗ್ಯ ಈಗ ಹೇಗಿದೆ?

Vijaya Karnataka Web 3 Aug 2020, 12:41 pm
ಕೆಲ ದಿನಗಳ ಹಿಂದೆ 'ಜೊತೆ ಜೊತೆಯಲಿ' ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಜನ್ಮದಿನಕ್ಕೆ ಶುಭಕೋರಲು ಮೆಸೇಜ್, ಕಾಲ್ ಮಾಡಿದವರಿಗೆ ಆರೂರು ಜಗದೀಶ್ ಅವರ ಅನಾರೋಗ್ಯದ ಬಗ್ಗೆ ಗೊತ್ತಾಗಿ ಬಹಳ ಬೇಸರವಾಗಿತ್ತು. ಈಗ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರಂತೆ.
Vijaya Karnataka Web jothe jotheyali kannada serial director aroor jagadish discharged from hospital
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದೇನೆ, ವಿಶ್ರಾಂತಿ ಬೇಕಿದೆ ಎಂದ 'ಜೊತೆ ಜೊತೆಯಲಿ' ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್!


ಆರೂರು ಜಗದೀಶ್ ಆರೋಗ್ಯಕ್ಕೆ ಏನಾಗಿತ್ತು?
ನಿರ್ದೇಶಕ ಆರೂರು ಜಗದೀಶ್ ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ಕುರಿತು ಅವರ ಪತ್ನಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಜಗದೀಶ್ ಅಂಗಾಂಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಹಲವು ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. 'ಜೋಡಿಹಕ್ಕಿ', 'ಅಶ್ವಿನಿ ನಕ್ಷತ್ರ', 'ಶುಭವಿವಾಹ', 'ಅರುಂಧತಿ', 'ಗುಪ್ತಗಾಮಿನಿ' ಮುಂತಾದ ಪ್ರಖ್ಯಾತ ಧಾರಾವಾಹಿಗಳನ್ನು ಆರೂರು ಜಗದೀಶ್ ನಿರ್ದೇಶನ ಮಾಡಿದ್ದಾರೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಗ್ಗೆ ಮಾಹಿತಿ ನೀಡಿದ ಆರೂರು ಜಗದೀಶ್

'ನಾನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದೇನೆ. ಮನೆಯಲ್ಲಿ ಈಗ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೇನೆ. ದಿನದಿಂದ ದಿನಕ್ಕೆ ನನ್ನ ಆರೋಗ್ಯ ಚೇತರಿಸಿಕೊಳ್ಳುತ್ತಿದೆ. ನಿಮ್ಮೆಲ್ಲರ ಹಾರೈಕೆಗಳಿಗೆ ಧನ್ಯವಾದಗಳು. ನಿಮ್ಮೆಲ್ಲರ ಹಾರೈಕೆಯಿಂದ ನನ್ನ ಹೃದಯ ತುಂಬಿದೆ. ನಿಮ್ಮೆಲ್ಲರ ಹೃದಯಪೂರ್ವಕ ಹಾರೈಕೆಗಳು ನನ್ನಲ್ಲಿ ಸಕಾರಾತ್ಮಕ ಸಂಚಲನ ಮೂಡಿಸುತ್ತಿದೆ. ನಿಮ್ಮೆಲ್ಲರಿಗೂ ಧನ್ಯವಾದಗಳು. ಸ್ವಲ್ಪ ಸುಸ್ತಿದೆ. ಮತ್ತೆ ಕೆಲ ದಿನಗಳ ನಂತರ ನಿಮ್ಮೆಲ್ಲರ ಜೊತೆ ಮಾತನಾಡುತ್ತೇನೆ. ನಿಮ್ಮ ಮತ್ತು ನಿಮ್ಮ ಕುಟುಂಬದ ಸುರಕ್ಷತೆ ಕಾಪಾಡಿಕೊಳ್ಳಿ. ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ' ಎಂದು ಸೋಶಿಯಲ್ ಮೀಡಿಯಾದಲ್ಲಿ ನಿರ್ದೇಶಕ ಆರೂರು ಜಗದೀಶ್ ಮಾಹಿತಿ ನೀಡಿದ್ದಾರೆ.

Also Read-'ಜೊತೆ ಜೊತೆಯಲಿ' ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್ ಆಸ್ಪತ್ರೆಗೆ ದಾಖಲು!

ಮತ್ತೆ ನಂಬರ್ 1 ಸ್ಥಾನದಲ್ಲಿ 'ಜೊತೆ ಜೊತೆಯಲಿ'
ಆರೂರು ಜಗದೀಶ್ ಅವರನ್ನು ಇಷ್ಟಪಡುವ ಸಾಕಷ್ಟು ಮಂದಿಯಿದ್ದಾರೆ. ಇವರ ಅನಾರೋಗ್ಯದ ಬಗ್ಗೆ ತಿಳಿಯುತ್ತಿದ್ದಂತೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಇವರ ಸ್ವಭಾವ, ಗುಣದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದರು. ಬೇಗ ಇವರ ಆರೋಗ್ಯ ಸುಧಾರಿಸಿಕೊಳ್ಳಲಿ ಎಂದು ಹಲವರು ದೇವರ ಬಳಿ ಪ್ರಾರ್ಥಿಸಿದ್ದಾರೆ. 'ಜೊತೆ ಜೊತೆಯಲಿ' ಧಾರಾವಾಹಿ ಹಲವು ವಾರಗಳಿಂದ ಟಿಆರ್‌ಪಿಯಲ್ಲಿ ಟಾಪ್ 2 ಸ್ಥಾನದಲ್ಲಿತ್ತು, ಈ ವಾರ ಟಾಪ್ 1 ಸ್ಥಾನಕ್ಕೆ ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ