ಆ್ಯಪ್ನಗರ

ಜೊತೆ ಜೊತೆಯಲಿ ಧಾರಾವಾಹಿ; ಅನು ಸಿರಿಮನೆ ಜೊತೆ ನೀಲ್ ಮದುವೆ! ಅನುಳನ್ನು ದೂರಮಾಡ್ತಾನಾ ಆರ್ಯ?

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರ್ಯ, ಫಿಜ್ಜಾ ಬಾಯ್‌ ಆಗಿದ್ದಾನೆ. ಅನುಳನ್ನು ಭೇಟಿ ಮಾಡಲೇಬೇಕು ಎಂಬ ಕಾರಣಕ್ಕೆ ಆತ ಪಿಜ್ಜಾ ಬಾಯ್ ವೇಷ ಧರಿಸಿ ಅನುಳನ್ನು ಮೀಟ್ ಮಾಡುತ್ತಾನೆ. ಇದು ಜಲಂಧರ್ ಕಣ್ಣಿಗೆ ಬೀಳೋದಿಲ್ವಾ? ಜೇಂಢೇ ಇದನ್ನೆಲ್ಲ ನೋಡಿ ಸುಮ್ಮನಿರುತ್ತಾನಾ? ನೀಲ್, ಆರ್ಯ ಎಲ್ಲಿದ್ದಾನೆ? ಎಂಬುದನ್ನು ಕಂಡುಹಿಡಿಯುತ್ತಾನಾ? ಎಂಬ ಪ್ರಶ್ನೆ ಪ್ರೇಕ್ಷಕರಿಗೆ ಕಾಡಬಹುದು. ಮುಂದಿನ ಎಪಿಸೋಡ್‌ನಲ್ಲಿ ಏನಾಗಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

Vijaya Karnataka Web 20 Feb 2020, 12:57 pm
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರ್ಯ, ಫಿಜ್ಜಾ ಬಾಯ್‌ ಆಗಿದ್ದಾನೆ. ಅನುಳನ್ನು ಭೇಟಿ ಮಾಡಲೇಬೇಕು ಎಂಬ ಕಾರಣಕ್ಕೆ ಆತ ಪಿಜ್ಜಾ ಬಾಯ್ ವೇಷ ಧರಿಸಿ ಅನುಳನ್ನು ಮೀಟ್ ಮಾಡುತ್ತಾನೆ. ಇದು ಜಲಂಧರ್ ಕಣ್ಣಿಗೆ ಬೀಳೋದಿಲ್ವಾ? ಜೇಂಢೇ ಇದನ್ನೆಲ್ಲ ನೋಡಿ ಸುಮ್ಮನಿರುತ್ತಾನಾ? ನೀಲ್, ಆರ್ಯ ಎಲ್ಲಿದ್ದಾನೆ? ಎಂಬುದನ್ನು ಕಂಡುಹಿಡಿಯುತ್ತಾನಾ? ಎಂಬ ಪ್ರಶ್ನೆ ಪ್ರೇಕ್ಷಕರಿಗೆ ಕಾಡಬಹುದು. ಮುಂದಿನ ಎಪಿಸೋಡ್‌ನಲ್ಲಿ ಏನಾಗಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
Vijaya Karnataka Web jothe jotheyali kannada serial written updates 21 february 2020 aryavardhan turns as pizza boy for anu
ಜೊತೆ ಜೊತೆಯಲಿ ಧಾರಾವಾಹಿ; ಅನು ಸಿರಿಮನೆ ಜೊತೆ ನೀಲ್ ಮದುವೆ! ಅನುಳನ್ನು ದೂರಮಾಡ್ತಾನಾ ಆರ್ಯ?


ಇನ್ಮುಂದೆ ಸುಮ್ನಿರೋದಿಲ್ಲ ಆರ್ಯ !

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಹೇಡಿಯಂತೆ ಇಷ್ಟು ದಿನ ಆರ್ಯನನ್ನು ಗೃಹಬಂಧನದಲ್ಲಿಟ್ಟುಕೊಂಡಿದ್ದ ಜೇಂಢೇ. ಆದರೆ ಆರ್ಯ ಇದನ್ನು ಎಷ್ಟು ದಿನ ಸಹಿಸುತ್ತಾನೆ? ಇಂದು ಪಿಜ್ಜಾ ಬಾಯ್ ಆಗಿ ಅನುಳನ್ನು ನೋಡಲು ಹೋಗಿರುವ ಆರ್ಯ, ಮುಂದೆ ಸುಮ್ಮನಿರಲು ಸಾಧ್ಯವೇ ಇಲ್ಲ. ಜಲಂಧರ್‌ನನ್ನು ಮಟ್ಟ ಹಾಕಲು ಬೇರೆ ಏನಾದರೂ ಪ್ಲ್ಯಾನ್ ಮಾಡಿಯೇ ಮಾಡುತ್ತಾನೆ. ಈ ಎಪಿಸೋಡ್‌ಗಳು ನಿಜಕ್ಕೂ ರೋಚಕವಾಗಿರಲಿದೆ. ಆರ್ಯ ಏನು ಯೋಜನೆ ಹಾಕುತ್ತಾನೆ? ಜಲಂಧರ್ ಏನು ಮಾಡುತ್ತಾನೆ? ನೀಲ್ ನಿಜ ಬಣ್ಣ ಬಯಲಾಗೋದು ಯಾವಾಗ? ಮುಂತಾದ ಪ್ರಶ್ನೆಗಳು ಉದ್ಭವವಾಗೋದು ಸಹಜ.

ಅಳಿಯ ಅನಿರುದ್ಧ್ ಹುಟ್ಟುಹಬ್ಬಕ್ಕೆ ಭರ್ಜರಿ ಸ್ಟೆಪ್ ಹಾಕಿದ್ರು ಭಾರತಿ ವಿಷ್ಣುವರ್ಧನ್ ; ಬರ್ತಡೇ ಪಾರ್ಟಿಯಲ್ಲಿ ಪುನೀತ್, ಗಣೇಶ್ ಪತ್ನಿ ಭಾಗಿ

ಬೇರೆಯವರೊಂದಿಗೆ ಅನು ಮದುವೆ ನಡೆಯತ್ತಾ?

ಇತ್ತೀಚಿನ ದಿನಗಳಲ್ಲಿ ಅನು ನಡವಳಿಕೆ ನೋಡಿ ಸುಬ್ರಹ್ಮಣ್ಯ ಸಿರಿಮನೆ, ಪುಷ್ಪಾಗೆ ಸ್ವಲ್ಪ ಡೌಟ್ ಬಂದಿದೆ. ಮಗಳು ಯಾಕೆ ಈ ರೀತಿ ವರ್ತಿಸುತ್ತಿದ್ದಾಳೆ ಎಂಬುದು ಅವರಿಗೆ ತಿಳಿಯುತ್ತಿಲ್ಲ. ಹೀಗಾಗಿ ಅನುಳನ್ನು ಆದಷ್ಟು ಬೇಗ ಬೇರೆ ಹುಡುಗನೊಂದಿಗೆ ಅಂದ್ರೆ 25 ವರ್ಷ ವಯಸ್ಸಿನೊಳಗಿನ ಹುಡುಗನಿಗೆ ಕೊಟ್ಟು ಮದುವೆ ಮಾಡುವ ಪ್ಲ್ಯಾನ್‌ನಲ್ಲಿದ್ದಾರೆ ಅವರು. ಅನು ಮತ್ತು ಆರ್ಯ ಪ್ರೀತಿ ಇನ್ನಷ್ಟು ಗಟ್ಟಿಯಾದರೆ ಅನು ನಡವಳಿಕೆ, ವರ್ತನೆ ಮಿತಿ ಮೀರುತ್ತದೆ. ಆಗ ಅವಳ ಪಾಲಕರು ಇನ್ನಷ್ಟು ಗಡಿಬಿಡಿಯಿಂದ ಅನು ಮದುವೆ ಮಾಡಬಹುದು. ನೀಲ್ ಜೊತೆ ಅನು ಮದುವೆ ಮಾಡಿಸುವ ಸಾಧ್ಯತೆ ಹೆಚ್ಚಿದೆ.

ಬೇರೆ ಹುಡುಗನ ಜೊತೆ ಫಿಕ್ಸ್ ಆಯ್ತು ಅನು ಮದುವೆ ; ಆರ್ಯವರ್ಧನ್‌ಗೋಸ್ಕರ ಅನು ಬಲಿಕೊಡ್ತಾನಾ ಜೇಂಢೇ?

ಅನುಳಿಂದ ದೂರ ಹೋಗ್ತಾನಾ ಆರ್ಯ?

ಅನುಳನ್ನು 25 ವರ್ಷ ವಯಸ್ಸಿನ ಹುಡುಗನ ಜೊತೆ ಮದುವೆ ಮಾಡಿಕೊಡಬೇಕು ಎಂಬುದು ಅನು ಪಾಲಕರ ಆಸೆ ಎಂದು ಗೊತ್ತಾದರೆ ನಿಜಕ್ಕೂ ಆರ್ಯ, ಅನುಳಿಂದ ದೂರಹೋಗ್ತಾನೆ. ಏಕೆಂದರೆ ಅವಳ ಪಾಲಕರ ಮನಸ್ಸನ್ನು ನೋಯಿಸುವ ಇಚ್ಛೆ ಆರ್ಯನಿಗಿಲ್ಲ. ಅದರ ಜೊತೆಗೆ ಸಮಾಜಕ್ಕೆ ಆರ್ಯ ಅಂಜುತ್ತಾನೆ. ತನ್ನಿಂದಾಗಿ ಚಿಕ್ಕ ಹುಡುಗಿಯ ಬಾಳು ಹಾಳಾಗಬಾರದು ಎಂಬ ಚಿಂತನೆ ಆರ್ಯನದ್ದು. ಹೀಗಾಗಿ ಆರ್ಯ, ಅನುಳಿಂದ ದೂರವಾಗಬಹುದು.

ಬೇರೆ ಹುಡುಗನ ಜೊತೆ ಫಿಕ್ಸ್ ಆಯ್ತು ಅನು ಮದುವೆ ; ಆರ್ಯವರ್ಧನ್‌ಗೋಸ್ಕರ ಅನು ಬಲಿಕೊಡ್ತಾನಾ ಜೇಂಢೇ?

Video-ದರ್ಶನ್ 'ರಾಜವೀರ ಮದಕರಿ ನಾಯಕ' ಸಿನಿಮಾಕ್ಕೂ ಮುಂಚೆ ಚಿತ್ರದುರ್ಗದ ಕಥೆ ಹೇಳುವ ಇನ್ನೊಂದು ಸಿನಿಮಾ ರಿಲೀಸ್ !

Video-ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ಜೊತೆ ಸ್ಪರ್ಧೆಗಿಳಿಯೋಕೆ ಸಾಧ್ಯವೇ ಇಲ್ಲ ; ರಾಜವರ್ಧನ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ