ಆ್ಯಪ್ನಗರ

Chandan Shetty: ಕಣ್ಣೀರಿಡುತ್ತ ಶ್ರುತಿಗೆ ಕ್ಷಮೆ ಕೇಳಿದ ಚಂದನ್‌ ಶೆಟ್ಟಿ

ಇತ್ತ ನಮಗೆಲ್ಲ ಈ ಬಾರಿಯ ಬಿಗ್‌ಬಾಸ್‌ ವಿನ್ನರ್‌ ಯಾರಾಗ್ತಾರೆ ಎಂಬ ಪ್ರಶ್ನೆ ಕಾಡುತ್ತಿದ್ದರೆ ಅತ್ತ ಸ್ಪರ್ಧಿಗಳಿಗೆ ಬಿಗ್‌ಬಾಸ್‌ ಮನೆಯ ನೆನಪುಗಳು ಒಂದೊಂದಾಗಿ ಕಣ್ಮುಂದೆ ಬಂದು ಭಾವುಕರಾಗುತ್ತಿದ್ದಾರೆ.

Vijaya Karnataka Web 28 Jan 2018, 9:47 pm
ಇನ್ನೇನು ಬಿಗ್‌ಬಾಸ್‌ ಸೀಸನ್‌ 5 ಮುಗಿದು ಹೋಗುತ್ತೆ. ಇತ್ತ ನಮಗೆಲ್ಲ ಈ ಬಾರಿಯ ಬಿಗ್‌ಬಾಸ್‌ ವಿನ್ನರ್‌ ಯಾರಾಗ್ತಾರೆ ಎಂಬ ಪ್ರಶ್ನೆ ಕಾಡುತ್ತಿದ್ದರೆ ಅತ್ತ ಸ್ಪರ್ಧಿಗಳಿಗೆ ಬಿಗ್‌ಬಾಸ್‌ ಮನೆಯ ನೆನಪುಗಳು ಒಂದೊಂದಾಗಿ ಕಣ್ಮುಂದೆ ಬಂದು ಭಾವುಕರಾಗುತ್ತಿದ್ದಾರೆ. ಇಷ್ಟುದಿನ ಜತೆಯಾಗಿ ನೋವು-ನಲಿವುಗಳನ್ನು ಹಂಚಿಕೊಂಡ ಸ್ಪರ್ಧಿಗಳು ಇನ್ನು ಬಿಗ್‌ ಮನೆಯನ್ನು ಬಿಟ್ಟು ಹೋಗಬೇಕಲ್ಲಾ ಎಂದು ಚಡಪಡಿಸುತ್ತಿದ್ದರು.
Vijaya Karnataka Web kannada bigg boss 5 chandan shetty break down
Chandan Shetty: ಕಣ್ಣೀರಿಡುತ್ತ ಶ್ರುತಿಗೆ ಕ್ಷಮೆ ಕೇಳಿದ ಚಂದನ್‌ ಶೆಟ್ಟಿ


ಶನಿವಾರ ಬಿಗ್‌ಬಾಸ್‌ ಫಿನಾಲೆ ಎಪಿಸೋಡ್‌ ಪ್ರಾರಂಭಕ್ಕೆ ಮುನ್ನ ಚಂದನ್‌ ಶೆಟ್ಟಿ ತುಂಬಾನೇ ಭಾವುಕರಾಗಿದ್ದರು. ಉಳಿದ ನಾಲ್ಕು ಸ್ಪರ್ಧಿಗಳು ಸಪ್ಪೆ ಮುಖ ಮಾಡಿದ್ದರೆ, ಚಂದನ್‌ ಶೆಟ್ಟಿ ಭಾವುಕರಾಗಿ ಕಣ್ಣೀರಿಟ್ಟ ಪ್ರಸಂಗ ನಡೆಯಿತು. ಚಂದನ್‌ ಅಳುವುದನ್ನು ಕಂಡ ಶ್ರುತಿ, ಅವರನ್ನ ಅಪ್ಪಿಕೊಂಡು ಸಮಾಧಾನಪಡಿಸಿದರು. ಈ ಸಂದರ್ಭದಲ್ಲಿ ಶ್ರುತಿ ಜತೆ ಮಾತನಾಡಿದ ಚಂದನ್‌, 'ಏನಾದ್ರು ಹರ್ಟ್‌ ಮಾಡಿದ್ರೆ ಸಾರಿ' ಎಂದರು.

Kannada Bigg Boss Winner

ಇದಾದ ಬಳಿಕ ಕೆಲ ವಿಚಾರಗಳನ್ನು ಭಾವುಕತೆಯಿಂದ ನಿವೇದಿತಾ ಮುಂದೆ ಹಂಚಿಕೊಂಡರು ಚಂದನ್‌. 'ತುಂಬ ಖುಷಿ ಆಗುತ್ತಿದೆ. ನಾನ್‌ ಯಾರು? ಎಲ್ಲಿಂದ ಬಂದೆ? ಇಲ್ಲಿದೀನಿ ಇವತ್ತು. ಹೆಂಗೆಲ್ಲಾ ನನಗೆ ಅವಮಾನ ಮಾಡಿದ್ರು. ಬಿಗ್‌ಬಾಸ್‌ ನನ್ನ ಸಾಂಗ್‌ನ್ನೇ ನನಗೆ ಡ್ಯಾನ್ಸ್‌ ಮಾಡೋಕೆ ಕೊಟ್ಟಿದಾರೆ' ಎಂದು ಭಾವುಕತೆಯಿಂದ ಮಾತನಾಡಿದರು.

Bigg Boss Kannada Finale

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ