ಆ್ಯಪ್ನಗರ

Bhagya Lakshmi: ಹಿಂದಿಗೆ ಡಬ್ ಆಗುತ್ತಿದೆ ಕನ್ನಡದ ‘ಭಾಗ್ಯಲಕ್ಷ್ಮೀ’ ಧಾರಾವಾಹಿ

ಕನ್ನಡದ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಹಿಂದಿಗೆ ರೀಮೇಕ್ ಆಗುತ್ತಿದೆ. ಸದ್ಯದಲ್ಲೇ ಹಿಂದಿಯ ವಾಹಿನಿಯೊಂದರಲ್ಲಿ ‘ಭಾಗ್ಯಲಕ್ಷ್ಮೀ’ ಡಬ್ಬಿಂಗ್ ವರ್ಷನ್ ಟೆಲಿಕಾಸ್ಟ್ ಆಗಲಿದೆ.

Authored byಹರ್ಷಿತಾ ಎನ್ | Vijaya Karnataka Web 15 Feb 2023, 10:12 pm

ಹೈಲೈಟ್ಸ್‌:

  • ‘ಭಾಗ್ಯಲಕ್ಷ್ಮೀ’ ಸೀರಿಯಲ್ ಪ್ರಿಯರಿಗೆ ಗುಡ್ ನ್ಯೂಸ್
  • ‘ಭಾಗ್ಯಲಕ್ಷ್ಮೀ’ ಸೀರಿಯಲ್‌ ಹಿಂದಿ ಭಾಷೆಗೆ ಡಬ್ ಆಗ್ತಿದೆ
  • ಸದ್ಯದಲ್ಲೇ 100 ಸಂಚಿಕೆಗಳನ್ನು ಪೂರೈಸಲಿದೆ ‘ಭಾಗ್ಯಲಕ್ಷ್ಮೀ’ ಸೀರಿಯಲ್

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web kannada serial bhagyalakshmi to get dubbed in hindi language
Bhagya Lakshmi: ಹಿಂದಿಗೆ ಡಬ್ ಆಗುತ್ತಿದೆ ಕನ್ನಡದ ‘ಭಾಗ್ಯಲಕ್ಷ್ಮೀ’ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಭಾಗ್ಯಲಕ್ಷ್ಮೀ’. ನಟ ಸುದರ್ಶನ್ ರಂಗಪ್ರಸಾದ್, ಶಮಂತ್ ಬ್ರೋ ಗೌಡ, ಸುಷ್ಮಾ ಕೆ ರಾವ್, ಪದ್ಮಜಾ ರಾವ್ ಮುಂತಾದವರು ಅಭಿನಯಿಸುತ್ತಿರುವ ‘ಭಾಗ್ಯಲಕ್ಷ್ಮೀ’ ಸೀರಿಯಲ್‌ ಕಥೆ ವೇಗವಾಗಿ ಸಾಗುತ್ತಿದೆ. ‘ಭಾಗ್ಯಲಕ್ಷ್ಮೀ’ ಸೀರಿಯಲ್ ಕಥೆ ಇದೀಗ ರೋಚಕ ಹಂತ ತಲುಪಿದೆ. ಹೀಗಿರುವಾಗಲೇ, ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ಅಭಿಮಾನಿಗಳಿಗೆ ಇದೋ ಇಲ್ಲಿದೆ ಒಂದು ಗುಡ್ ನ್ಯೂಸ್. ಕನ್ನಡ ಕಿರುತೆರೆ ವೀಕ್ಷಕರನ್ನು ಹಿಡಿದು ಕೂರಿಸುತ್ತಿರುವ ‘ಭಾಗ್ಯಲಕ್ಷ್ಮೀ’ ಸೀರಿಯಲ್ ಇದೀಗ ಹಿಂದಿಗೆ ಡಬ್ ಆಗುತ್ತಿದೆ.
ಹೌದು… ‘ಭಾಗ್ಯಲಕ್ಷ್ಮೀ’ ಸೀರಿಯಲ್‌ ಶುರುವಾಗಿದ್ದು ಕೆಲವೇ ತಿಂಗಳುಗಳ ಹಿಂದೆಯಷ್ಟೇ. ಅಷ್ಟು ಬೇಗ ‘ಭಾಗ್ಯಲಕ್ಷ್ಮೀ’ ಸೀರಿಯಲ್‌ಗೆ ಜನಪ್ರಿಯತೆ ಸಿಗುತ್ತಿದೆ. ಪರಿಣಾಮ, ‘ಭಾಗ್ಯಲಕ್ಷ್ಮೀ’ ಸೀರಿಯಲ್‌ ಅನ್ನು ಹಿಂದಿಗೆ ಡಬ್ ಮಾಡಲಾಗುತ್ತಿದೆ. ಸದ್ಯದಲ್ಲೇ ಹಿಂದಿಯ ವಾಹಿನಿಯೊಂದರಲ್ಲಿ ‘ಭಾಗ್ಯಲಕ್ಷ್ಮೀ’ಯ ಡಬ್ಡ್ ವರ್ಷನ್ ಪ್ರಸಾರವಾಗಲಿದೆ.

Bhagya Lakshmi: ಅಂತೂ ನಡೆದೇ ಹೋಯ್ತು ವೈಷ್ಣವ್ - ಲಕ್ಷ್ಮೀ ನಿಶ್ಚಿತಾರ್ಥ!

ದೊಡ್ಡ ತಾರಾಬಳಗ
‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಭಾಗ್ಯ ಆಗಿ ಸುಷ್ಮಾ ಕೆ ರವ್, ಲಕ್ಷ್ಮೀ ಆಗಿ ಭೂಮಿಕಾ ರಮೇಶ್, ತಾಂಡವ್ ಆಗಿ ಸುದರ್ಶನ್ ರಂಗಪ್ರಸಾದ್, ವೈಷ್ಣವ್ ಆಗಿ ಶಮಂತ್ ಬ್ರೋ ಗೌಡ, ಕುಸುಮಾ ಆಗಿ ಪದ್ಮಜಾ ರಾವ್, ಕಾವೇರಿ ಆಗಿ ಸುಷ್ಮಾ ನಾಣಯ್ಯ ಅಭಿನಯಿಸುತ್ತಿದ್ದಾರೆ. ‘ಭಾಗ್ಯಲಕ್ಷ್ಮೀ’ ಧಾರಾವಾಹಿಗೆ ‘ಕನ್ನಡತಿ’ ಖ್ಯಾತಿಯ ಯಶವಂತ್ ಪಾಂಡು ನಿರ್ದೇಶನ ಮಾಡುತ್ತಿದ್ದಾರೆ.

Bhagya Lakshmi: ಹುಟ್ಟುಹಬ್ಬದ ದಿನವೇ ಮಗ ವೈಷ್ಣವ್‌ಗೆ ಶಾಕ್ ಕೊಟ್ಟ ಕಾವೇರಿ

100 ಸಂಚಿಕೆಗಳು
ಈಗಾಗಲೇ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ 93 ಸಂಚಿಕೆಗಳು ಪ್ರಸಾರವಾಗಿದೆ. ಸದ್ಯದಲ್ಲೇ 100ನೇ ಸಂಚಿಕೆ ಟೆಲಿಕಾಸ್ಟ್ ಆಗಲಿದೆ. ‘ಭಾಗ್ಯಲಕ್ಷ್ಮೀ’ ಸೀರಿಯಲ್‌ನಲ್ಲಿ ಸದ್ಯ ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಮಹಾಸಂಚಿಕೆಗಳು ಪ್ರಸಾರವಾಗುತ್ತಿವೆ. ವೈಷ್ಣವ್ - ಲಕ್ಷ್ಮೀ ನಿಶ್ಚಿತಾರ್ಥದ ವಿಶೇಷ ಎಪಿಸೋಡ್‌ಗಳು ಟೆಲಿಕಾಸ್ಟ್ ಆಗುತ್ತಿವೆ.

Bhagya Lakshmi: ಪತ್ರ ಓದಿ ಕಣ್ಣೀರು ಹಾಕಿದ ಲಕ್ಷ್ಮೀ: ಲಡ್ಡು ಜೊತೆ ನಡೆಯುತ್ತಾ ವೈಷ್ಣವ್ ಮದುವೆ?

ರೋಚಕ ಹಂತದಲ್ಲಿ ‘ಭಾಗ್ಯಲಕ್ಷ್ಮೀ’ ಧಾರಾವಾಹಿ
‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಸದ್ಯ ವೈಷ್ಣವ್ ಹಾಗೂ ಲಕ್ಷ್ಮೀ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾರೆ. ವೈಷ್ಣವ್ ಹಾಗೂ ಲಕ್ಷ್ಮಿಗೆ ಮದುವೆ ಫಿಕ್ಸ್ ಆಗಿದೆ. ಆದರೆ ಈ ಮದುವೆ ವೈಷ್ಣವ್‌ಗೆ ಇಷ್ಟವಿಲ್ಲ. ಕೀರ್ತಿಯನ್ನೇ ಮದುವೆಯಾಗಬೇಕು ಅನ್ನೋದು ವೈಷ್ಣವ್ ಬಯಕೆ. ಇತ್ತ ಲಕ್ಷ್ಮೀಯೇ ತನ್ನ ಸೊಸೆಯಾಗಬೇಕು ಅನ್ನೋದು ಕಾವೇರಿ ಆಸೆ.

ಆದಾಗಲೇ, ವೈಷ್ಣವ್ - ಕೀರ್ತಿ ಎಂಗೇಜ್ಮೆಂಟ್‌ ಬ್ರೇಕಪ್ ಆಯ್ತು. ಹೀಗಿದ್ದರೂ, ಕೀರ್ತಿ ಮೇಲೆ ವೈಷ್ಣವ್‌ಗೆ ಮನಸ್ಸಿದೆ. ಆದಷ್ಟು ಬೇಗ ವೈಷ್ಣವ್‌ಗೂ ಲಕ್ಷ್ಮೀಗೂ ಮದುವೆಯಾಗಿಬಿಟ್ಟರೆ, ಕೀರ್ತಿ ದೂರ ಸರಿಯುತ್ತಾಳೆ ಅನ್ನೋದು ಕಾವೇರಿ ಪ್ಲಾನ್. ಹೀಗಾಗಿ ಆತುರಾತುರವಾಗಿ ಲಕ್ಷ್ಮೀಗೆ ಹೂವ ಮುಡಿಸುವ ಶಾಸ್ತ್ರ ಮತ್ತು ನಿಶ್ಚಿತಾರ್ಥವನ್ನ ಕಾವೇರಿ ನೆರವೇರಿಸಿಬಿಟ್ಟಿದ್ದಾರೆ. ಅಷ್ಟೇ ತರಾತುರಿಯಲ್ಲಿ ವೈಷ್ಣವ್ - ಲಕ್ಷ್ಮೀ ಮದುವೆ ನಡೆಯುತ್ತಾ? ವೈಷ್ಣವ್ - ಲಕ್ಷ್ಮೀ ಮದುವೆಗೆ ಯಾವುದೇ ಅಡ್ಡಿಯುಂಟಾಗಲ್ವಾ? ಎಂಬಿತ್ಯಾದಿ ಪ್ರಶ್ನೆಗಳಿಗೆ ಮುಂದಿನ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ.
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ