ಆ್ಯಪ್ನಗರ

ಶೀಘ್ರದಲ್ಲೇ ಮುಕ್ತಾಯವಾಗುತ್ತಿದೆ ಕನ್ನಡದ ಪ್ರಖ್ಯಾತ ಧಾರಾವಾಹಿ

ಇತ್ತೀಚೆಗೆ ಕನ್ನಡ ಧಾರಾವಾಹಿಗಳು ಮುಕ್ತಾಯವಾಗುತ್ತಿವೆ. ಬೇರೆ ಬೇರೆ ಕಾರಣಗಳಿಂದಾಗಿ ಧಾರಾವಾಹಿಗಳು ಅಂತ್ಯವಾಗಿ ಹೊಸ ಧಾರಾವಾಹಿ ಶುರುವಾಗುತ್ತಿವೆ. ಈಗ ಖಾಸಗಿ ವಾಹಿನಿಯ ಇನ್ನೊಂದು ಧಾರಾವಾಹಿ ಮುಕ್ತಾಯವಾಗುತ್ತಿದೆ. ಯಾವುದು?

Vijaya Karnataka Web 24 Oct 2019, 4:48 pm
ಇತ್ತೀಚೆಗೆ 6ರಿಂದ 7 ಕನ್ನಡ ಧಾರಾವಾಹಿಗಳು ಅಂತ್ಯವಾಗಿವೆ. ಬಿಗ್ ಬಾಸ್‌ ಬಂದ ಕಾರಣಕ್ಕಾಗಿ ಎರಡು ಧಾರಾವಾಹಿಗಳು ಅಂತ್ಯವಾಗಿತ್ತು. ಕಥೆ ಮುಗಿದಿದ್ದರಿಂದ, ಟಿಆರ್‌ಪಿ ಮುಕ್ತಾಯವಾದದ್ದರಿಂದಲೂ ಕೆಲ ಧಾರಾವಾಹಿಗಳು ಅಂತ್ಯವಾಗಿದ್ದವು.
Vijaya Karnataka Web tv


ಮದುವೆಯಾಗುತ್ತಿದ್ದಾರೆ 'ರಾಧಾ ರಮಣ' ಖ್ಯಾತಿಯ ದೀಪಿಕಾ; ಗಾಸಿಪ್‌ಗಳಿಗೆ ತೆರೆ ಎಳೆದ ಅನುಷಾ

ಈಗ ಮತ್ತೊಂದು ಧಾರಾವಾಹಿ ತನ್ನ ಪ್ರಸಾರವನ್ನು ಅಂತ್ಯಗೊಳಿಸುತ್ತಿದೆ. ಅದೇ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬಿಳಿ ಹೆಂಡ್ತಿ' ಧಾರಾವಾಹಿ. 2018 ರ ಜುಲೈನಲ್ಲಿ ಈ ಧಾರಾವಾಹಿ ಆರಂಭವಾಗಿತ್ತು. ಈ ಧಾರಾವಾಹಿಯಲ್ಲಿ ಪೋಲ್ಯಾಂಡ್ ನಟಿ ಕ್ರಿಸ್ಟಿನಾ ಡೆವಿನಾ ನಟಿಸಿದ್ದರು.
ಎಲ್ಲರೂ ಮೆಚ್ಚುವಂಥ ಅರ್ಥಪೂರ್ಣ ಕೆಲಸ ಮಾಡಿದ 'ಪಾರು' ಧಾರಾವಾಹಿಯ ನಟಿ ಮೋಕ್ಷಿತಾ ಪೈ

ಅಜಿತ್ ಎಂಬ ಭಾರತೀಯ ಯುವಕ ಮನೆಯವರ ಒಪ್ಪಿಗೆಯಿಲ್ಲದೆ ವಿದೇಶಿ ಹುಡುಗಿಯನ್ನು ಮದುವೆಯಾಗುತ್ತಾನೆ. ಈಕೆ ಬಹುಬೇಗ ಭಾರತೀಯ ಸಂಪ್ರದಾಯ, ಆಚಾರ-ವಿಚಾರ, ಭಾಷೆ, ಸಂಸ್ಕೃತ ಶ್ಲೋಕಗಳನ್ನೂ ಕಲಿತು ಭಾರತೀಯ ಹುಡುಗಿ ಎನ್ನುವಷ್ಟರ ಮಟ್ಟಿಗೆ ಬದಲಾಗುತ್ತಾಳೆ. ಅಜಿತ್ ವಿದೇಶಿ ಹುಡುಗಿಯನ್ನು ಮದುವೆಯಾಗಿದ್ದರಿಂದ ಅಜಿತ್ ತಮ್ಮನಿಗೆ ನಿಕ್ಕಿಯಾಗಿದ್ದ ಮದುವೆ ಮುರಿಯಿತು. ಮಾಹಿತಿ ಪ್ರಕಾರ ಟಿಆರ್‌ಪಿ ಕಡಿಮೆ ಇದ್ದಿದ್ದಕ್ಕೆ ಧಾರಾವಾಹಿ ಮುಕ್ತಾಯವಾಯಿತಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ