ಆ್ಯಪ್ನಗರ

ಇದೇ ಜೂ.25ರಿಂದ ಕನ್ನಡದ ಕೋಟ್ಯಧಿಪತಿ ಆರಂಭ

ಕನ್ನಡ ಕಿರುತೆರೆ ವೀಕ್ಷಕರು ಕಾತುರದಿಂದ ನಿರೀಕ್ಷಿಸುತ್ತಿರುವ ’ಕನ್ನಡದ ಕೋಟ್ಯಧಿಪತಿ’ ಗೇಮ್ ಶೋ ಇದೇ ಜೂನ್ 25ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 8ಕ್ಕೆ ಪ್ರಸಾರವಾಗಲಿದೆ. ಇದೇ ಮೊದಲ ಬಾರಿಗೆ ಈ ಶೋವನ್ನು ರಮೇಶ್ ಅರವಿಂದ್ ನಡೆಸಿಕೊಡಲಿದ್ದಾರೆ.

Vijaya Karnataka Web 16 Jun 2018, 2:42 pm
ಕನ್ನಡ ಕಿರುತೆರೆ ವೀಕ್ಷಕರು ಕಾತುರದಿಂದ ನಿರೀಕ್ಷಿಸುತ್ತಿರುವ ’ಕನ್ನಡದ ಕೋಟ್ಯಧಿಪತಿ’ ಗೇಮ್ ಶೋ ಇದೇ ಜೂನ್ 25ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 8ಕ್ಕೆ ಪ್ರಸಾರವಾಗಲಿದೆ. ಇದೇ ಮೊದಲ ಬಾರಿಗೆ ಈ ಶೋವನ್ನು ರಮೇಶ್ ಅರವಿಂದ್ ನಡೆಸಿಕೊಡಲಿದ್ದಾರೆ.
Vijaya Karnataka Web ramesh-aravind


ಈ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಶೋನ ಎರಡು ಸೀಸನ್ ನಡೆಸಿಕೊಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳು 1 ಕೋಟಿ ರೂ. ಗಳಿಸಬೇಕಾದರೆ ಒಟ್ಟು 15 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಈ ಕಾರ್ಯಕ್ರಮದಲ್ಲಿ ಸ್ಪರ್ಧಿಸುವರಿಗೆ ಕನಿಷ್ಠ 18 ವರ್ಷ ತುಂಬಿರಬೇಕು.

ಹಲವಾರು ಹಂತಗಳ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಹಿಂದೆಲ್ಲಾ ಚೆನ್ನೈನಲ್ಲಿ ಈ ಶೋ ಚಿತ್ರೀಕರಿಸಲಾಗುತ್ತಿತ್ತು. ಆದರೆ ಸ್ಪರ್ಧಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈಗ ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯಲಿದೆ. ಈಗಾಗಲೆ ಕಾರ್ಯಕ್ರಮದ ಪ್ರೊಮೋಗೆ ವೀಕ್ಷಕರಿಂದ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗಿದೆ.

ಈ ಶೋನ ಭಾಗವಾಗಿ ಸ್ಪರ್ಧಿಗಳಿಗೆ 18 ವರ್ಷ ವಯಸ್ಸಾಗಿರಬೇಕು. ವಿದ್ಯಾರ್ಹತೆಯ ವಿಚಾರದಲ್ಲಿ ಯಾವುದೇ ಮಾನದಂಡಗಳಿಲ್ಲದಿದ್ದರೂ ಸ್ಪರ್ಧಿಗಳ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರಬಾರದು.

ಹಾಟ್ ಸೀಟ್‌ ಮೇಲೆ ಕುಳಿತ ಬಳಿಕ 15 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದರೆ 1 ಕೋಟಿ ರೂ. ಗೆಲ್ಲುವ ಅವಕಾಶ ಇದೆ. ಈ ಸಲ ಇಡೀ ಕಾರ್ಯಕ್ರಮವನ್ನು ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬೆಂಗಳೂರಿನಲ್ಲೇ ಚಿತ್ರೀಕರಿಸಲಾಗುತ್ತಿದೆ.

ಈ ಜನಪ್ರಿಯ ಕಾರ್ಯಕ್ರಮ ಈಗಾಗಲೆ 120 ದೇಶಗಳಲ್ಲಿ 80 ಭಾಷೆಗಳಲ್ಲಿ ಪ್ರಸಾರವಾಗಿದ್ದು, ಇಂತಹ ಕಾರ್ಯಕ್ರಮವನ್ನು ಕನ್ನಡದಲ್ಲಿ ನಡೆಸಿಕೊಡುತ್ತಿರುವ ಬಗ್ಗೆ ಹೆಮ್ಮೆ ಅನ್ನಿಸುತ್ತಿದೆ ಎಂದಿದ್ದಾರೆ ರಮೇಶ್ ಅರವಿಂದ್. ಮೊದಲು ರಾಕಿಂಗ್ ಸ್ಟಾರ್ ಯಶ್ ಅವರನ್ನು ನಿರೂಪಕರಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿತ್ತು. ಕೊನೆಗೆ ರಮೇಶ್ ಅರವಿಂದ್ ಅವರ ಪಾಲಾಗಿದೆ ಕನ್ನಡದ ಕೋಟ್ಯಧಿಪತಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ