ಆ್ಯಪ್ನಗರ

'ಕಿನ್ನರಿ' ಧಾರಾವಾಹಿ ನಟಿ ದಿಶಾ ಈಗ ಹೇಗಾಗಿದ್ದಾಳೆ? ಏನು ಮಾಡುತ್ತಿದ್ದಾಳೆ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಿನ್ನರಿ' ಧಾರಾವಾಹಿಯ ಮಣಿ ಪಾತ್ರವನ್ನು ಆರಂಭದಲ್ಲಿ ಪುಟ್ಟ ಹುಡುಗಿ ದಿಶಾ ನಿರ್ವಹಿಸುತ್ತಿದ್ದಳು. ಈಗ ಅವಳು ಹೇಗಿದ್ದಾಳೆ? ಏನು ಮಾಡುತ್ತಿದ್ದಾಳೆ? ಇಲ್ಲಿದೆ ಮಾಹಿತಿ.

Vijaya Karnataka Web 17 Sep 2020, 5:00 pm
ಸರಿಯಾಗಿ ನಾಲ್ಕು ವರ್ಷಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಕಿನ್ನರಿ' ಧಾರಾವಾಹಿ ಪ್ರಸಾರವಾಗುತ್ತಿತ್ತು. ಈ ಧಾರಾವಾಹಿಯಲ್ಲಿ ಮಣಿ ಪಾತ್ರದ ಬಾಲ್ಯ ಹಾಗೂ ಯೌವ್ವನವನ್ನು ತೋರಿಸಲಾಗಿತ್ತು. ಮಣಿ ಬಾಲ್ಯದ ಪಾತ್ರದಲ್ಲಿ ಪುಟ್ಟ ಹುಡುಗಿ ದಿಶಾ ನಟಿಸಿದ್ದಳು. ಈಗ ಅವಳು ಹೇಗಿದ್ಧಾಳೆ? ಏನು ಮಾಡುತ್ತಿದ್ದಾಳೆ? ಇಲ್ಲಿದೆ ಮಾಹಿತಿ
Vijaya Karnataka Web kinnari kannada serial mani actress disha present life
'ಕಿನ್ನರಿ' ಧಾರಾವಾಹಿ ನಟಿ ದಿಶಾ ಈಗ ಹೇಗಾಗಿದ್ದಾಳೆ? ಏನು ಮಾಡುತ್ತಿದ್ದಾಳೆ?


'ಕಿನ್ನರಿ' ಧಾರಾವಾಹಿಗೆ ದಿಶಾ ಆಯ್ಕೆಯಾಗಿದ್ದು ಹೇಗೆ?
ಮೈಸೂರಿನಲ್ಲಿ ಒಂದನೇ ತರಗತಿ ಓದುತ್ತಿದ್ದಾಗಲೇ ದಿಶಾ 'ಕಿನ್ನರಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಳು. ಓದಿನಲ್ಲಿಯೂ ಮುಂದಿದ್ದ ದಿಶಾಗೆ ಮುಂದೆ ಡಾಕ್ಟರ್ ಆಗುವ ಆಸೆಯಿತ್ತು. ದಿಶಾ ಅಮ್ಮನಿಗೆ ತನ್ನ ಮಗಳು ಟಿವಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆಯಿತ್ತು. ಅದೇ ಸಮಯಕ್ಕೆ 'ಕಿನ್ನರಿ' ಧಾರಾವಾಹಿ ಕೂಡ ಆರಂಭವಾಗುತ್ತಿತ್ತು, ಸೀರಿಯಲ್ ತಂಡ ಮಣಿ ಎಂಬ ಪಾತ್ರಕ್ಕೆ ಪುಟ್ಟ ಹುಡುಗಿಯನ್ನು ಹುಡುಕುತ್ತಿದ್ದರು. ಆಗ ದಿಶಾ ಆಡಿಶನ್‌ಗೆ ಹೋಗಿ ಆಯ್ಕೆಯಾಗಿದ್ದಳು. ಬೆಂಗಳೂರಿನಲ್ಲಿ ನಡೆದ ಈ ಆಡಿಶನ್‌ನಲ್ಲಿ ಸುಮಾರು 200 ಮಂದಿ ಮಕ್ಕಳು ಇದ್ದರು. ನಟನೆಯ ಬಗ್ಗೆ ಏನೂ ಗೊತ್ತಿಲ್ಲದಿದ್ದರೂ ಕೂಡ ದಿಶಾ ಮಣಿ ಪಾತ್ರಕ್ಕೆ ಆಯ್ಕೆಯಾಗಿದ್ದಳು.

ದಿಶಾ ಈಗ ಏನು ಮಾಡುತ್ತಿದ್ದಾಳೆ?
ಬಿಗ್ ಬಾಸ್ ಕನ್ನಡ ಸೀಸನ್ 3 ನಡೆಯುವಾಗ ಅವಳು ಒಂದು ದಿನ ಆ ಮನೆಯಲ್ಲಿ ಇದ್ದಿದ್ದಳು, ಅಷ್ಟೇ ಅಲ್ಲ ಆ ಮನೆಯಲ್ಲಿಯೇ ಇರ್ತೀನಿ ಅಂತ ಕೂಡ ಹಠ ಮಾಡಿದ್ದಳಂತೆ. ಸುದೀಪ್ ಅಂದರೆ ದಿಶಾಗೆ ತುಂಬ ಇಷ್ಟವಂತೆ. 'ಮಜಾ ಟಾಕೀಸ್‌'ನಲ್ಲಿಯೂ ದಿಶಾ ಭಾಗವಹಿಸಿದ್ದಳು. ದಿಶಾ ವೆಸ್ಟರ್ನ್ ಡಾನ್ಸ್ ಹಾಗೂ ಭರತನಾಟ್ಯ ಕಲಿಯುತ್ತಿದ್ದಾಳೆ. 'ಚಿತ್ರಾಲಿ', 'ಹ್ಯಾಪಿ ಬರ್ತಡೇ' ಸಿನಿಮಾದಲ್ಲಿ ದಿಶಾ ನಟಿಸಿದ್ದಾಳೆ. ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ಕಿನ್ನರಿ ದಿಶಾ ಹೆಸರಿನಲ್ಲಿ ಅವಳ ಅಕೌಂಟ್ ಇದೆ, ಇದರಲ್ಲಿ ದಿಶಾ ಬಗ್ಗೆ ಇತ್ತೀಚಿನ ಮಾಹಿತಿಗಳು ಸಿಗುತ್ತವೆ. ಪ್ರಸ್ತುತ ದಿಶಾ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳಂತೆ.

Also Read-'ಇಕ್ಕಟ್' ಮೂಲಕ ನಾಯಕಿಯಾದ 'ಕಿನ್ನರಿ' ಭೂಮಿ ಶೆಟ್ಟಿ! ಈ ಸಿನಿಮಾಗೆ ಹೀರೋ ಯಾರು?

ಕಿನ್ನರಿಯಾಗಿ ಕಾಣಿಸಿಕೊಂಡ ಭೂಮಿ ಶೆಟ್ಟಿ!
'ಕಿನ್ನರಿ' ಧಾರಾವಾಹಿಯಲ್ಲಿ ಮಣಿಯ ಬಾಲ್ಯದ ಪಾತ್ರದ ನಂತರದಲ್ಲಿ ಭೂಮಿ ಶೆಟ್ಟಿ ಅವರು ಮಣಿಯಾಗಿ ಕಾಣಿಸಿಕೊಂಡಿದ್ದರು. ಕಿರಣ್ ರಾಜ್, ಪವನ್ ಕುಮಾರ್, ಜ್ಯೋತಿ ರೈ ಈ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿಯನ್ನು ಅನೇಕರು ಮೆಚ್ಚಿಕೊಂಡಿದ್ದರು. ಪ್ರಸ್ತುತ ಭೂಮಿ ಶೆಟ್ಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಿರಣ್ ರಾಜ್ ಅವರು 'ಕನ್ನಡತಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

Also Read-ಉದಯ ಟಿವಿಯ 'ಆಕೃತಿ' ಧಾರಾವಾಹಿಯಲ್ಲಿ ನಟಿಸಲಿದ್ದಾರೆ 'ಕಿನ್ನರಿ' ಖ್ಯಾತಿಯ ನಟ ಪವನ್ ಕುಮಾರ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ