ನಟಿ ಸುಪ್ರಿಯಾ ಶುಕ್ಲಾ ಅವರು 'ಕುಂಡಲಿ ಭಾಗ್ಯ' ಧಾರಾವಾಹಿಯಿಂದ ಹೊರಗಡೆ ಬರುವ ನಿರ್ಧಾರ ಮಾಡಿದ್ದಾರಂತೆ. ಈ ಮೂಲಕ ಅವರು ಜನಪ್ರಿಯ 'ಕುಂಡಲಿ ಭಾಗ್ಯ', 'ಕುಂಕುಮ ಭಾಗ್ಯ' ಧಾರಾವಾಹಿಗಳ ಸರಳಾ ಪಾತ್ರಕ್ಕೆ ಗುಡ್ಬೈ ಹೇಳುತ್ತಿದ್ದಾರೆ. 'ಕುಂಡಲಿ ಭಾಗ್ಯ' ಧಾರಾವಾಹಿಯಲ್ಲಿ ಸುಪ್ರಿಯಾ ಅವರು ಕಳೆದ 4 ವರ್ಷಗಳಿಂದ ಸರಳಾ ಪಾತ್ರ ಮಾಡುತ್ತಿದ್ದರು. ಈ ಹಿಂದೆ ಅವರು 'ಕುಂಕುಮ ಭಾಗ್ಯ' ಧಾರಾವಾಹಿಯಲ್ಲಿ 8 ವರ್ಷಗಳ ಕಾಲ ಸರಳಾ ಪಾತ್ರ ಮಾಡಿದ್ದರು. ಒಟ್ಟಿನಲ್ಲಿ ಹೀರೋಯಿನ್ ತಾಯಿ ಪಾತ್ರ ಮಾಡುತ್ತಿರುವ ಅವರು ಈಗ ಧಾರಾವಾಹಿಯಿಂದ ಸ್ವಲ್ಪ ಬ್ರೇಕ್ ಪಡೆಯುವ ನಿರ್ಧಾರ ಮಾಡಿದ್ದಾರಂತೆ. "ನನಗೆ ಕುಂಕುಮ ಭಾಗ್ಯ ಧಾರಾವಾಹಿಗೆ ಸರಳಾ ಪಾತ್ರಕ್ಕೆ ಆಫರ್ ನೀಡಿದಾಗ ತುಂಬ ಆಸಕ್ತಿಕರವಾಗಿತ್ತು. ನಟಿಯರಾದ ಶ್ರೀತಿಜಾ, ಮೃಣಾಲ್ ಠಾಕೂರ್ ಅವರ ತಾಯಿ ಪಾತ್ರ ಮಾಡುವಾಗ ನಾನು ತುಂಬ ಎಂಜಾಯ್ ಮಾಡಿದ್ದೆ. ಆಮೇಲೆ ಆ ಶೋಗೆ ನಾನು ಅಷ್ಟು ಕೊಡುಗೆ ನೀಡಿಲ್ಲ ಅನಿಸಿತು. ಅದೃಷ್ಟವಶಾತ್, 'ಕುಂಡಲಿ ಭಾಗ್ಯ' ಧಾರಾವಾಹಿಯಲ್ಲಿ ಸರಳಾ ಪಾತ್ರ ಮಾಡುವ ಅವಕಾಶ ಸಿಕ್ಕಿತು. 'ಕುಂಡಲಿ ಭಾಗ್ಯ' ಧಾರಾವಾಹಿಯಲ್ಲಿಯೂ ನಾನು ಇಬ್ಬರು ಹೆಣ್ಣು ಮಕ್ಕಳ ತಾಯಿಯಾದರೂ ಕೂಡ ಕಥೆ ತುಂಬ ಆಸಕ್ತಿಕರವಾಗಿತ್ತು. ಹೀಗಾಗಿ ನಾನು 4 ವರ್ಷ 'ಕುಂಡಲಿ ಭಾಗ್ಯ' ಧಾರಾವಾಹಿಯಲ್ಲಿ ನಟಿಸಿದೆ" ಎಂದು ಸುಪ್ರಿಯಾ ಮಾಧ್ಯಮಕ್ಕೆ ಹೇಳಿದ್ದಾರೆ.
"'ಮೊಲ್ಕಿ' ಶೋನಲ್ಲಿ ನಟಿಸಲು ಆರಂಭಿಸಿದೆ. ಕೊರೊನಾ ಬಂದಾದಮೇಲೆ ಕುಟುಂಬದ ಜೊತೆ ನಾನು ಎಲ್ಲಿಯೂ ಹೋಗಿಲ್ಲ. ಈಗ ನಾನು ಏನಾದರೂ ಹೊಸತಾಗಿ ಮಾಡಲು ಆರಂಭಿಸಿದ್ದೇನೆ. ಒಂದೇ ಸಮಯಕ್ಕೆ 'ಮೊಲ್ಕಿ' ಹಾಗೂ 'ಕುಂಡಲಿ ಭಾಗ್ಯ' ಧಾರಾವಾಹಿಯಲ್ಲಿ ನಟಿಸುತ್ತಿರುವುದರಿಂದ ಸಮಯವೇ ಸಿಗುತ್ತಿಲ್ಲ. ಹೀಗಾಗಿ ಬ್ರೇಕ್ ಪಡೆಯಲು ನಿರ್ಧಾರ ಮಾಡಿದೆ' ಎಂದು ಸುಪ್ರಿಯಾ ಹೇಳಿದ್ದಾರೆ.
ನಿಶ್ಚಿತಾರ್ಥ ಆಗಿ 7 ವರ್ಷದ ನಂತರ ಈಗ ಮದುವೆ ಪ್ಲ್ಯಾನ್ಲ್ಲಿದ್ದಾರೆ ಈ ಜನಪ್ರಿಯ ಧಾರಾವಾಹಿ ನಟಿ!
"ನಾನು ಧಾರಾವಾಹಿಯಲ್ಲಿ ನಟಿಸುವಾಗ ಗ್ಲಿಸರಿನ್ ಬಳಸಿಲ್ಲ. ದೃಶ್ಯ ಸಿಕ್ಕಾಪಟ್ಟೆ ಅತಿರೇಕ ಇದ್ದಾಗ ಅಳಬೇಕಾಗಿ ಬರುತ್ತದೆ. ಭಾವನಾತ್ಮಕವಾಗಿರುವುದರಿಂದ ಸರಳಾ ಪಾತ್ರದಲ್ಲಿ ಅಳಬೇಕಾಗುತ್ತದೆ. ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಕ್ಕೂ ಮಹತ್ವ ಇರುತ್ತದೆ ಎಂದು ನಾನು ಭಾವಿಸುತ್ತೇನೆ. ಹೀಗಾಗಿ ಭವಿಷ್ಯದಲ್ಲಿ ನಾನು ಮತ್ತೆ ಧಾರಾವಾಹಿಗೆ ಮರಳಬಹುದು" ಎಂದು ನಟಿ ಸುಪ್ರಿಯಾ ಹೇಳಿದ್ದಾರೆ.
ಹೆಣ್ಣು ಮಗುವಿಗೆ ಜನ್ಮ ನೀಡಿದ 'ಕುಂಕುಮ ಭಾಗ್ಯ' ಧಾರಾವಾಹಿ ನಟಿ ಶಿಖಾ ಸಿಂಗ್!
'ಮೊಲ್ಕಿ' ಶೋನಲ್ಲಿ ತಮ್ಮ ಪಾತ್ರದ ಬಗ್ಗೆ ಸುಪ್ರಿಯಾಗೆ ಖುಷಿಯಿದೆಯಂತೆ. ಈಗಾಗಲೇ ಸಾಕಷ್ಟು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಸುಪ್ರಿಯಾ ಶುಕ್ಲಾ ನಟಿಸಿದ್ದಾರೆ. 'ತ್ರಿ ಈಡಿಯಟ್ಸ್', 'ಪರಿಣಿತಾ' ಸಿನಿಮಾಗಳಲ್ಲಿ ಸುಪ್ರಿಯಾ ನಟಿಸಿದ್ದಾರೆ. "ಏಕ್ತಾ ಕಪೂರ್ ನಿರ್ಮಾಣ ಸಂಸ್ಥೆಯ ಸಿನಿಮಾಗಳಿರಲೀ, ಬೇರೆ ಶೋ, ಸಿನಿಮಾಗಳಿರಲೀ, ಪಾತ್ರಗಳನ್ನು ಪಡೆಯುತ್ತಿರುವುದಕ್ಕೆ ತುಂಬ ಖುಷಿಯಾಗುತ್ತಿದೆ. ಆಯೋಜಕರು ತಾಯಿ, ಪತ್ನಿಯಾಗಿ ನನ್ನ ಕರ್ತವ್ಯವನ್ನು ಅರ್ಥ ಮಾಡಿಕೊಂಡಿದ್ದಾರೆ. ಈ ಬ್ರೇಕ್ ಪಡೆಯಲು ಪುಣ್ಯ ಮಾಡಿದ್ದೇನೆ" ಎಂದು ಸುಪ್ರಿಯಾ ಅಭಿಪ್ರಾಯ ಪಟ್ಟಿದ್ದಾರೆ.
'ಕುಂಕುಮ ಭಾಗ್ಯ' ಧಾರಾವಾಹಿ 2014ರಿಂದ ಪ್ರಸಾರ ಆಗುತ್ತಿದೆ. ನಟಿ ಶ್ರೀತಿಜಾ, ಶಬೀರ್ ಅಹ್ಲುವಾಲಿಯಾ, ಲೀನಾ ಜುಮಾನಿ, ಮುಗ್ಧಾ ಛಪೇಕರ್ ಮುಂತಾದವರು ಈ ಸೀರಿಯಲ್ನಲ್ಲಿ ನಟಿಸಿದ್ದಾರೆ. 'ಕುಂಡಲಿ ಭಾಗ್ಯ' ಧಾರಾವಾಹಿಯಲ್ಲಿ 2017ರಿಂದ ಪ್ರಸಾರ ಆಗುತ್ತಿದ್ದು, ಶ್ರದ್ಧಾ ಆರ್ಯ, ಧೀರಜ್ ಧೂಪರ್ ನಟಿಸುತ್ತಿದ್ದಾರೆ.