ಆ್ಯಪ್ನಗರ

ಪ್ರೇಕ್ಷಕರಿಗೆ ಸಿಹಿ ಸುದ್ದಿ ನೀಡಿದ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನಟಿ ನೇಹಾ ಗೌಡ!

'ಲಕ್ಷ್ಮೀ ಬಾರಮ್ಮ' ಖ್ಯಾತಿಯ ನಟಿ ನೇಹಾ ಗೌಡ ಅವರಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ಅವರು ತೆರೆ ಮೇಲೆ ಕಾಣಿಸಿಕೊಳ್ಳದೆ ಹಲವು ದಿನಗಳಾಯ್ತು. ಈಗ ಅವರು ಪ್ರೇಕ್ಷಕರಿಗೆ ಸಿಹಿಸುದ್ದಿ ನೀಡಿದ್ದಾರೆ.

Vijaya Karnataka 17 Dec 2020, 2:50 pm
'ಲಕ್ಷ್ಮೀ ಬಾರಮ್ಮ' ಎಂಬ ಯಶಸ್ವಿ ಧಾರಾವಾಹಿ ಆರು ವರ್ಷಗಳಿಗೂ ಅಧಿಕ ಕಾಲ ಪ್ರಸಾರವಾಗಿತ್ತು. ಆ ಸೀರಿಯಲ್ ಕಲಾವಿದರು ಈಗ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಗೊಂಬೆ ಪಾತ್ರದ ಮೂಲಕ ಮನೆಮಾತಾದ ನಟಿ ನೇಹಾ ಗೌಡ ಅವರು 'ಮೂರುಗಂಟು' ಸೀರಿಯಲ್‌ನಲ್ಲಿ ಅತಿಥಿ ಪಾತ್ರದಲ್ಲಿ ಕೆಲವೇ ಕೆಲವು ದಿನ ಕಾಣಿಸಿಕೊಂಡಿದ್ದು ಬಿಟ್ಟರೆ ಅವರು ಮತ್ತೆ ತೆರೆ ಮೇಲೆ ಕಾಣಿಸಿರಲಿಲ್ಲ. ಈಗ ಅವರು ಮತ್ತೆ ಕಿರುತೆರೆಗೆ ಕಂಬ್ಯಾಕ್‌ ಮಾಡಲಿದ್ದಾರೆ.
Vijaya Karnataka Web lakshmi baramma kannada serial actress neha gowda play paavam ganesan serial
ಪ್ರೇಕ್ಷಕರಿಗೆ ಸಿಹಿ ಸುದ್ದಿ ನೀಡಿದ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನಟಿ ನೇಹಾ ಗೌಡ!


ಧಾರಾವಾಹಿಯಲ್ಲಿ ನಟನೆ
ನೇಹಾ ಗೌಡ ಕನ್ನಡದಲ್ಲಿ ನಟಿಸುತ್ತಿಲ್ಲ, ತಮಿಳಿನ 'ಪಾವಂ ಗಣೇಶನ್' ಧಾರಾವಾಹಿಯ ನಾಯಕಿಯಾಗಿ ಬಣ್ಣಹಚ್ಚಲಿದ್ದಾರೆ. ಈ ಪಾತ್ರದ ಬಗ್ಗೆ 'ವಿಜಯ ಕರ್ನಾಟಕ'ದ ಜೊತೆಗೆ ಮಾತನಾಡಿರುವ ನೇಹಾ ಗೌಡ, 'ದೊಡ್ಡ ಗ್ಯಾಪ್ ನಂತರ ನಟಿಸುತ್ತಿದ್ದೇನೆ. ಪ್ರಖ್ಯಾತ ನಿರ್ದೇಶಕ ತಾಯಿಸೆಲ್ವಂ ಜೊತೆ ಕೆಲಸ ಮಾಡಬೇಕು ಅಂತ ಅನೇಕರು ಅಂದುಕೊಂಡಿರುತ್ತಾರೆ, ನನ್ನ ಅರಸಿ ಈ ಅವಕಾಶ ಬಂದಾಗ ಖುಷಿಯಿಂದ ಒಪ್ಪಿಕೊಂಡೆ. ಸರಳವಾಗಿ ಇರುವ ಹುಡುಗಿ ಪಾತ್ರ, ಅವಳು ತುಂಬ ಜವಾಬ್ದಾರಿಯುತಳಾಗಿರುತ್ತಾಳೆ, ಕ್ಯಾರೆಕ್ಟರ್ ತುಂಬ ಗಟ್ಟಿಯಾಗಿದೆ' ಎಂದು ಹೇಳಿದ್ದಾರೆ.

ಧಾರಾವಾಹಿ ಕಥೆ ಏನು?

'ಧಾರಾವಾಹಿಯಲ್ಲಿ ನನ್ನ ತಂದೆ ಹಾಗೂ ಹೀರೋ ತಂದೆ ಸ್ನೇಹಿತರಾಗಿರುತ್ತಾರೆ. ಇಬ್ಬರೂ ಸೇರಿಕೊಂಡು ಮನೆ ಖರೀದಿ ಮಾಡಿರುತ್ತಾರೆ. ಅವರು ತೀರಿಕೊಂಡ ನಂತರ ಆ ಮನೆ ಹೀರೋಯಿನ್‌ಗೆ ಸೇರತ್ತೋ ಅಥವಾ ಹೀರೋಗೆ ಸೇರತ್ತೋ ಎಂಬುದೇ ಕಥೆ. ನಾಯಕಿಗೆ ಹೀರೋ ಕಂಡರೆ ಆಗೋದಿಲ್ಲ. ಗೊಂಬೆ ಪಾತ್ರದಂತೆ ಇದು ಕೂಡ ತುಂಬ ಗಟ್ಟಿ ಪಾತ್ರವಾಗಿದೆ. ಸರಳವಾಗಿ ಡ್ರೆಸ್ ಮಾಡಿಕೊಳ್ಳುವ ನಾಯಕಿ ಹುಡುಗರ ತರ ವರ್ತಿಸುತ್ತಾಳೆ. ಧಾರಾವಾಹಿ ತಂಡ ತುಂಬ ಚೆನ್ನಾಗಿದೆ' ಎಂದು ಹೇಳಿದ್ದಾರೆ ನೇಹಾ ಗೌಡ

Also Read-ಶಾಶ್ವತವಾಗಿ ಪ್ರಸಾರ ನಿಲ್ಲಿಸಲಿದೆ ಕನ್ನಡದ ಜನಪ್ರಿಯ 'ಮೂರುಗಂಟು' ಧಾರಾವಾಹಿ!

ನೇಹಾ ಗೌಡ ಕನ್ನಡದಲ್ಲಿ ನಟಿಸೋದು ಯಾವಾಗ?

'ಮಾರ್ಚ್‌ ನಂತರ ಯಾವುದೇ ಪ್ರಾಜೆಕ್ಟ್ ಮಾಡಿರಲಿಲ್ಲ ನನಗೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಗೊಂಬೆ ಪಾತ್ರಕ್ಕೆ ನಾನು ಹೊಂದಿಕೊಂಡಂತೆ ಜನರು ಕೂಡ ಅದಕ್ಕೆ ಹೊಂದಿಕೊಂಡಿದ್ದರು. ಕನ್ನಡದಲ್ಲಿ ಒಳ್ಳೆಯ ಅವಕಾಶ ಸಿಕ್ಕರೆ ಖಂಡಿತ ನಟಿಸುತ್ತೇನೆ. ಮೊದಲು ಜನರು ಗೊಂಬೆಯನ್ನು ಮರೆಯಬೇಕು. ಆಮೇಲೆ ನಾನು ಬೇರೆ ಪಾತ್ರ ಮಾಡಿದರೆ ಅವರಿಗೂ ಕೂಡ ಸ್ವೀಕರಿಸಲು ಸಹಾಯವಾಗುತ್ತದೆ. ಹೀರೋಯಿನ್ ಅಥವಾ ಬೇರೆ ಪಾತ್ರ ಅಂತಲ್ಲ, ವಿಭಿನ್ನವಾದ ಕ್ಯಾರೆಕ್ಟರ್ ಮಾಡಬೇಕು ಎಂದುಕೊಂಡಿದ್ದೇನೆ. ಒಳ್ಳೆಯ ಅವಕಾಶ ಬಂದರೆ ಸಿನಿಮಾ, ವೆಬ್ ಸಿರೀಸ್ ಮಾಡಲು ರೆಡಿಯಿದ್ದೇನೆ' ಎಂದು ನೇಹಾ ಗೌಡ ಹೇಳಿದ್ದಾರೆ.

Also Read-'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ 'ಲಕ್ಷ್ಮೀ ಬಾರಮ್ಮ ಸೀರಿಯಲ್' ತಂಡ: ಏನು ವಿಶೇಷ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ