ಆ್ಯಪ್ನಗರ

'ರೋಜಾ' ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಖ್ಯಾತಿಯ ನಟಿ ನೇಹಾ ಗೌಡ!

ನಟಿ ನೇಹಾ ಗೌಡ ಅವರು ಪ್ರೇಕ್ಷಕರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಮತ್ತೆ ಅವರು ತೆರೆ ಮೇಲೆ ಬರಲಿದ್ದಾರಂತೆ. ಯಾವುದು ಆ ಹೊಸ ಪ್ರಾಜೆಕ್ಟ್? ಇದರ ಬಗ್ಗೆ ನೇಹಾ ಏನು ಹೇಳುತ್ತಾರೆ?

Vijaya Karnataka Web 12 Jul 2020, 11:14 am
'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ನಟಿ ಖ್ಯಾತಿಯ ನಟಿ ನೇಹಾ ಗೌಡ ಅವರು ಗೊಂಬೆ ಪಾತ್ರದ ಮೂಲಕ ಕರ್ನಾಟಕದ ಮನೆ ಮಾತಾಗಿದ್ದಾರೆ. ಈ ಸೀರಿಯಲ್ ಮುಗಿದು ಹಲವು ತಿಂಗಳುಗಳು ಕಳೆದಿವೆ. ನೇಹಾ ಗೌಡ ಅವರ ಮಾತು, ಡ್ರೆಸ್ಸಿಂಗ್ ಸೆನ್ಸ್, ನಡೆ ಎಲ್ಲವೂ ಕನ್ನಡಿಗರಿಗೆ ತುಂಬ ಇಷ್ಟ. ಇವರನ್ನು ಇಷ್ಟಪಡುವ ಸಾಕಷ್ಟು ಜನರಿದ್ದಾರೆ. ಸಿನಿಮಾ ಆಫರ್‌ಗಳು ಬರುತ್ತಿದ್ದರೂ ಕೂಡ ನೇಹಾ ಎಲ್ಲವನ್ನು ಒಪ್ಪಿಕೊಳ್ಳುತ್ತಿಲ್ಲ. ಪಾತ್ರ, ಕಥೆ ಆಯ್ಕೆ ವಿಚಾರದಲ್ಲಿ ತುಂಬ ಮುತುವರ್ಜಿ ವಹಿಸಿ ನೇಹಾ ಧಾರಾವಾಹಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ವಾರದಲ್ಲಿ 5 ದಿನ ಟಿವಿಯಲ್ಲಿ ಬರುತ್ತಿದ್ದ ನೇಹಾ ಕೆಲದಿನಗಳ ಕಾಲ 'ಮೂರು ಗಂಟು' ಧಾರಾವಾಹಿಯಲ್ಲಿ ನಟಿಸಿದ್ದರು. ಆಮೇಲೆ ಲಾಕ್‌ಡೌನ್‌ ಶುರುವಾಯ್ತು. ಈಗ ನೇಹಾ ಏನು ಮಾಡುತ್ತಿದ್ದಾರೆ? ಯಾವ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ? ಮುಂತಾದ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ.
Vijaya Karnataka Web lakshmi baramma serial actress neha gowda will act in tamil roja serial
'ರೋಜಾ' ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಖ್ಯಾತಿಯ ನಟಿ ನೇಹಾ ಗೌಡ!


ಮತ್ತೆ ತೆರೆ ಮೇಲೆ ಬಂದಿದ್ದಾರೆ. ನೇಹಾ ತಮಿಳಿನ 'ರೋಜಾ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದರ ಬಗ್ಗೆ ನೇಹಾ ಗೌಡ, 'ವಿಜಯ ಕರ್ನಾಟಕ'ದ ಸೋದರ ಪತ್ರಿಕೆ 'ಟೈಮ್ಸ್ ಆಫ್ ಇಂಡಿಯಾ' ಜೊತೆಗೆ ಮಾತನಾಡಿದ್ದಾರೆ.

ರೋಜಾ ಧಾರಾವಾಹಿಯಲ್ಲಿ ನೇಹಾ ಪಾತ್ರವೇನು?

'ಲಾಕ್‌ಡೌನ್‌ನಲ್ಲಿ ನಾನು ನಟನೆಯನ್ನು ಎಷ್ಟು ಇಷ್ಟಪಡ್ತೀನಿ ಅಂತ ತಿಳಿಯಿತು. ಮತ್ತೆ ಕೆಲಸ ಮಾಡಬೇಕು ಅಂತ ನನ್ನ ಮನಸ್ಸು ಹೇಳುತ್ತಿತ್ತು. ಮನೆಯಲ್ಲಿ ಬೋರ್ ಆಗಬಾರದು ಅಂತ ನಾನು ಕೆಲಸವನ್ನು ಮಿಸ್ ಮಾಡಿಕೊಳ್ಳುತ್ತಿಲ್ಲ ಎಂದು ಪದೇ ಪದೇ ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ. ಲಾಕ್‌ಡೌನ್ ನಂತರದಲ್ಲಿ ಜೂನ್ 23ರಂದು ಮತ್ತೆ ಕೆಲಸ ಆರಂಭಿಸುವ ಹಿಂದಿನ ದಿನ ಮಧ್ಯ ರಾತ್ರಿಯೇ ಎದ್ದು ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ಉತ್ಸುಕಳಾಗಿದ್ದೆ. 'ರೋಜಾ' ಧಾರಾವಾಹಿಯಲ್ಲಿ ನಾನು ಅತಿಥಿ ಪಾತ್ರ ಮಾಡುತ್ತಿದ್ದೇನೆ. 10 ರಿಂದ 15 ಎಪಿಸೋಡ್‌ಗಳಲ್ಲಿ ನಿಶಾ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳಲಿದ್ದೇನೆ. ಕಥೆಗೆ ನಿಶಾ ಪಾತ್ರ ತುಂಬ ಮುಖ್ಯವಾದುದು. ಈ ಧಾರಾವಾಹಿಯಲ್ಲಿ ಇರುವ ಬಹುತೇಕರು ಕನ್ಮಡಿಗರು. ಇದೇ ನನಗೆ ತುಂಬ ಖುಷಿಯಾಗುವ ವಿಷಯ ಎಂದು ನೇಹಾ ಅಭಿಪ್ರಾಯ ಪಟ್ಟಿದ್ದಾರೆ.

Also Read-ಅಕ್ಕ ಸೋನು ಗೌಡ ಅವರಲ್ಲಿ ಇಷ್ಟವಾಗದ ಗುಣ ಬಿಚ್ಚಿಟ್ಟ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಗೊಂಬೆ ಖ್ಯಾತಿಯ ನೇಹಾ ಗೌಡ!

'ರೋಜಾ'ದಲ್ಲಿ ನಟಿಸುತ್ತಿರುವ ಕನ್ನಡಿಗರು ಯಾರು ಯಾರು?

'ಚೆನ್ನೈನಲ್ಲಿ ನಡೆಯುವ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವ ಕಲಾವಿದರು ಹೈದರಾಬಾದ್ ಮತ್ತು ಬೆಂಗಳೂರಿನವರು. ಇದರ ನಿರ್ದೇಶಕರು ಮಾತ್ರ ಚೆನ್ನೈನವರು. ಬೆಂಗಳೂರಿಗೆ ತಲುಪಿದಮೇಲೆ ಮತ್ತೆ ಎಲ್ಲರೂ ಹೋಮ್ ಕ್ವಾರೈಂಟೈನ್ ಆಗುತ್ತೇವೆ, ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುತ್ತೇವೆ. ಶೂಟಿಂಗ್‌ನಲ್ಲಿಯೂ ಕೂಡ ಸಿಕ್ಕಾಪಟ್ಟೆ ಮುಂಜಾಗ್ರತೆ ಕ್ರಮ ಕೈಗೊಳ್ಳುತ್ತಿದ್ದೇವೆ. ಎಲ್ಲರನ್ನು ತಪಾಸಣೆ ಮಾಡಿದ ನಂತರವೇ ಶೂಟಿಂಗ್‌ ಜಾಗದೊಳಕ್ಕೆ ಬಿಡಲಾಗುವುದು. ತಂತ್ರಜ್ಞರು, ಕಲಾವಿದರು ಮಾಸ್ಕ್ ಧರಿಸುತ್ತಾರೆ, ಸ್ಯಾನಿಟೈಸರ್ ಹಾಕಿಕೊಳ್ಳುತ್ತಾರೆ. ನಾನು ಕೂಡ ಹೆದರಿಕೆಯಿಂದಲೇ ಶೂಟಿಂಗ್‌ನಲ್ಲಿ ಮುಂಜಾಗ್ರತೆ ಕ್ರಮ ಕೈಗೊಂಡು ಪಾಲ್ಗೊಳ್ಳುತ್ತಿದ್ದೇನೆ. ವಿನಯಾ ಪ್ರಸಾದ್, ರವಿ ಭಟ್, ತ್ರಿವಿಕ್ರಮ್, ವೀಣಾ ಸುಂದರ್ ಮುಂತಾದವರು ನಟಿಸುತ್ತಿದ್ದಾರೆ. ಚೆನ್ನೈನಲ್ಲಿ ಲಾಕ್‌ಡೌನ್ ತೆಗೆದ ನಂತರ ಈ ಧಾರಾವಾಹಿ ಪ್ರಸಾರವಾಗಲಿದೆ ' ಎಂದು ನೇಹಾ ಗೌಡ ಅಭಿಪ್ರಾಯಪಟ್ಟಿದ್ದಾರೆ.

Also Read-ವೀಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ: ಏನದು?

'ಮೂರು ಗಂಟು'ವಿನಲ್ಲಿ ನೇಹಾ ನಿರೂಪಕಿ!

'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಗೊಂಬೆ ಪಾತ್ರದ ಮೂಲಕ ಸಾಕಷ್ಟು ಖ್ಯಾತಿ ಪಡೆದಿದ್ದ ನಟಿ ನೇಹಾ ಗೌಡ ಕಿರುತೆರೆ ಮಂದಿಗೆ ಸಿಕ್ಕಾಪಟ್ಟೆ ಫೇವರಿಟ್. ಆರು ವರ್ಷಗಳಿಗೂ ಅಧಿಕ ಕಾಲ ಈ ಸೀರಿಯಲ್ ಪ್ರಸಾರವಾಗಿದ್ದು, ಆರಂಭದಿಂದ ಕೊನೆಯವರೆಗೂ ಇದರಲ್ಲಿ ನೇಹಾ ನಟಿಸಿದ್ದರು. ಈ ಧಾರಾವಾಹಿ ಮುಗಿಯುತ್ತಿದ್ದಂತೆ ಅವರು ಕಲರ್ಸ್ ಕನ್ನಡ ವಾಹಿನಿಯ 'ಮೂರುಗಂಟು' ಧಾರಾವಾಹಿಯಲ್ಲಿ ಕೆಲ ದಿನಗಳ ಕಾಲ ಅತಿಥಿ ಪಾತ್ರ ಮಾಡುತ್ತಿದ್ದಾರೆ. ನಿರೂಪಕಿಯಾಗಬೇಕು ಎಂದುಕೊಂಡಿದ್ದ ನೇಹಾ ಆಸೆಯನ್ನು ಈ ಧಾರಾವಾಹಿ ಪೂರೈಸಿತ್ತು. 'ಮೂರುಗಂಟು' ಧಾರಾವಾಹಿಯಲ್ಲಿ ಸ್ವಯಂವರದ ಕಾರ್ಯಕ್ರಮ ನಡೆಯುತ್ತಿರುವಾಗ ಅದಕ್ಕೆ ನೇಹಾ ನಿರೂಪಣೆ ಜವಾಬ್ದಾರಿ ವಹಿಸಿಕೊಂಡಿದ್ದರು. ಇದರಿಂದ ಅವರ ಬಹುದಿನದ ಬೇಡಿಕೆ ನೆರವೇರಿತ್ತು.

ನೇಹಾ ಗಂಡ ಚಂದನ್ ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದಾರೆ!

ನೇಹಾ ಗೌಡ ಪತಿ ಚಂದನ್ ಲಾಕ್‌ಡೌನ್ ಆರಂಭವಾಗುವುದಕ್ಕೂ ಮುನ್ನ ಅಮೆರಿಕದಿಂದ ಭಾರತಕ್ಕೆ ಮರಳಿದ್ದರು. ಚಂದನ್ ಏರ್‌ಪೋರ್ಟ್‌ನಲ್ಲಿ ಕೊರೊನಾ ವೈರಸ್ ತಪಾಸಣೆಗೆ ಒಳಪಟ್ಟಾಗ ನೆಗೆಟಿವ್ ಎಂದು ಬಂದಿತ್ತು. ಆದರೂ ಮನೆಯಲ್ಲಿ ಹಿರಿಯರು ಇರೋದರಿಂದ ಮುಂಜಾಗ್ರತಾ ಕ್ರಮವಾಗಿ ಅವರು ಸೆಲ್ಫ್ ಕ್ವಾರಂಟೈನ್ ಆಗಿದ್ದರು. ಚಂದನ್ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತದಲ್ಲಿರುವ ನೇಹಾ ರಜಾ ಸಿಕ್ಕಿದಾಗ ವಿದೇಶಕ್ಕೆ ತೆರಳುತ್ತಿದ್ದರು. ಎರಡು ವರ್ಷಗಳ ಹಿಂದೆ ಕುಟುಂಬ, ಸ್ಯಾಂಡಲ್‌ವುಡ್ ಕಲಾವಿದರ ಸಾಕ್ಷಿಯಾಗಿ ನೇಹಾ ಗೌಡ ಬಹುಕಾಲದ ಗೆಳೆಯ ಚಂದನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಹಲವು ವರ್ಷಗಳಿಂದ ಈ ಜೋಡಿ ಪ್ರೀತಿಸುತ್ತಲಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ