'ಮಹಾ ಭಾರತ' ಧಾರಾವಾಹಿಯಲ್ಲಿ ಅರ್ಜುನನ ಪಾತ್ರ ಮಾಡಿ ಜನರ ಮನ್ನಣೆ ಗಳಿಸಿದ್ದ ನಟ ಶಾಹೀರ್ ಶೇಖ್ ಅವರಿಗೆ ಗಣೇಶ ಚತುರ್ಥಿ (ಸೆ 10)ಯಂದು ಹೆಣ್ಣು ಮಗು ಜನನವಾಗಿದೆ. ರುಚಿಕಾ ಕಪೂರ್ ಹಾಗೂ ಶಾಹೀರ್ ಶೇಖ್ ಅವರು ಪಾಲಕರಾಗಿ ಬಡ್ತಿ ಪಡೆದಿದ್ದಾರೆ. ಸೆ.10ರ ರಾತ್ರಿ ರುಚಿಕಾ ಮಗುವಿಗೆ ಜನ್ಮ ನೀಡಿದ್ದಾರೆ. ಶಾಹೀರ್ ಶೇಖ್ ಅವರ ವೈಯಕ್ತಿಕ ಜೀವನದ ಕುರಿತಾಗಿ ಅಷ್ಟಾಗಿ ಹೇಳಿಕೊಳ್ಳುವುದಿಲ್ಲ, ಇನ್ನು ಸೋಶಿಯಲ್ ಮೀಡಿಯಾದಲ್ಲಿಯೂ ಅವರು ಬಹಳ ವಿರಳವಾಗಿ ಫೋಟೋ ಹಾಕಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ರುಚಿಕಾ ಅವರ ಬೇಬಿ ಶೋವರ್ ಫೋಟೋಗಳನ್ನು ಹಂಚಿಕೊಂಡಿದ್ದರು. ಅನೇಕರು ಈ ಜೋಡಿಗೆ ಶುಭಾಶಯ ತಿಳಿಸಿದ್ದರು.
ಪ್ರೇಯಸಿ ಪರಿಚಯ ಮಾಡಿಕೊಟ್ಟ 'ಮಹಾಭಾರತ' ಧಾರಾವಾಹಿ ಅರ್ಜುನ ಪಾತ್ರಧಾರಿ ಶಾಹೀರ್ ಶೇಖ್!
ಶಾಹೀರ್ ಆತ್ಮೀಯರು ಮಾಧ್ಯಮದ ಜೊತೆ ಮಾತನಾಡಿ, "ಶಾಹೀರ್ ಅಷ್ಟಾಗಿ ವೈಯಕ್ತಿಕ ಜೀವನವನ್ನು ಸಾರ್ವಜನಿಕವಾಗಿ ತೆಗೆದಿಡಲು ಬಯಸೋದಿಲ್ಲ. ವೈಯಕ್ತಿಕ ಬದುಕಿನ ಬಗ್ಗೆ ಅವನಿಗೆ ಮಾತನಾಡಲು ಇಷ್ಟವೂ ಇಲ್ಲ. ದೇಶದಲ್ಲಿ ಇಂದು ಇರುವ ಪರಿಸ್ಥಿತಿ ನೋಡಿ ಅವರು ಇನ್ನಷ್ಟು ಮೌನ ತಾಳಿದ್ದಾರೆ. ಹೊಸ ಜೀವನದ ಹಂತಕ್ಕೆ ಕಾಲಿಡಲು ಅವರಿಬ್ಬರು ಉತ್ಸುಕರಾಗಿದ್ದಾರೆ" ಎಂದು ಹೇಳಿದ್ದರು.
ಶಾಹೀರ್ ಶೇಖ್ ಹಾಗೂ ರುಚಿಕಾ ಕಪೂರ್ ಅವರು ನಿರ್ಮಾಪಕಿ ಏಕ್ತಾ ಕಪೂರ್ ಅವರ 'ಜಡ್ಜ್ಮೆಂಟಲ್ ಹೇ ಕ್ಯಾ' ಸಿನಿಮಾ ಸೆಟ್ನಲ್ಲಿ ಭೇಟಿಯಾಗಿದ್ದರು. ಏಕ್ತಾ ಕಪೂರ್ ಅವರ ಪ್ರೊಡಕ್ಷನ್ಸ್ ಹೌಸ್ನಲ್ಲಿ ರುಚಿಕಾ ರುಚಿಕಾ ಕಪೂರ್ ಕ್ರಿಯೇಟಿವ್ ಪ್ರೊಡ್ಯುಸರ್, ಎಕ್ಸಿಕ್ಯೂಟಿವ್ ವಾಯ್ಸ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರಿಬ್ಬರ ಭೇಟಿ ಪದೇ ಪದೇ ಆಗುತ್ತಲಿತ್ತು. ಅನೇಕ ಸಿನಿಮಾ ಪ್ರೀಮೀಯರ್ ಶೋಗಳು ಹಾಗೂ ಪಾರ್ಟಿಗಳಲ್ಲಿ ಶಾಹೀರ್ ಮತ್ತು ರುಚಿಕಾ ಒಟ್ಟಾಗಿ ಭಾಗವಹಿಸಿದ್ದು, ಆಗ ತೆಗೆದಿರುವ ಫೋಟೋಗಳು ವೈರಲ್ ಆಗಿತ್ತು.
ನಾನೊಬ್ಬ ಹುಚ್ಚ, ನಾನು ಅವಳನ್ನೇ ಪತ್ನಿಯಾಗಿ ಸ್ವೀಕರಿಸಲು ಕಾರಣವಿತ್ತು: ಮಹಾಭಾರತ ಧಾರಾವಾಹಿ ನಟ!
ಒಂದೂವರೆ ವರ್ಷಗಳ ಕಾಲ ಡೇಟ್ ಮಾಡಿದ ನಂತರದಲ್ಲಿ ಈ ಜೋಡಿ 2020ರ ನವೆಂಬರ್ನಲ್ಲಿ ಕೋರ್ಟ್ ಮ್ಯಾರೇಜ್ ಆಗಿದ್ದರು. ಆನಂತರದಲ್ಲಿ ಸಂಪ್ರದಾಯಬದ್ಧವಾಗಿ ಮದುವೆಯಾಗುವ ಪ್ಲ್ಯಾನ್ ಮಾಡಿದ್ದರೂ ಕೂಡ ಕೊರೊನಾದಿಂದ ಸಾಧ್ಯವಾಗಿಲ್ಲ.
ಶಾಹೀರ್ ಮದುವೆ ವಿಚಾರ ಗೊತ್ತಾದಾಗ ಅಭಿಮಾನಿಗಳು ಥ್ರಿಲ್ ಆಗಿದ್ದರು. ಈ ಹಿಂದೆ ಆಯು ಟಿಂಗ್ ಟಿಂಗ್ ಜೊತೆ ಶಾಹೀರ್ ಶೇಖ್ ಅವರು ಡೇಟ್ ಮಾಡುತ್ತಿದ್ದರು. ಆನಂತರದಲ್ಲಿ ಈ ಜೋಡಿ ಬ್ರೇಕಪ್ ಮಾಡಿಕೊಂಡಿತ್ತು. ಇಂಡೋನೇಶ್ಯಾದಲ್ಲಿ ನಡೆದ ಒಂದು ಸಮಾರಂಭದಲ್ಲಿ ಶಾಹೀರ್ ಶೇಖ್ ಅವರು ಮಾಜಿ ಗೆಳತಿ ಆಯು ಟಿಂಗ್ ಟಿಂಗ್ ಜೊತೆ ವೇದಿಕೆ ಹಂಚಿಕೊಂಡು, ರೊಮ್ಯಾಂಟಿಕ್ ಹಾಡಿಗೆ ಡಾನ್ಸ್ ಮಾಡಿದ್ದರು. ಸಾರ್ವಜನಿಕವಾಗಿಯೇ ಬ್ರೇಕಪ್ ಬಗ್ಗೆ ಮಾತನಾಡಿ, ತಾನು ಮಾಡಿದ ತಪ್ಪಿಗೆ ಕ್ಷಮೆ ಕೇಳಿದ್ದರು.
ಶಾಹೀರ್ ಶೇಖ್ ಅವರು 'ಕ್ಯಾ ಮಸ್ತ್ ಹೇ ಲೈಫು' ಶೋ ಮೂಲಕ 2009ರಲ್ಲಿ ಕಿರುತೆರೆ ಪ್ರವೇಶಿಸಿದರು. ಹಿಂದಿಯಲ್ಲಿ ಅವರು ಅನೇಕ ಶೋಗಳನ್ನು ಮಾಡಿದರು. 'ಕುಚ್ ರಂಗ್ ಪ್ಯಾರ್ ಕೆ ಏಸೇ ಬಿ' ಧಾರಾವಾಹಿ ಅವರಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿದೆ, ಸದ್ಯ ಅವರು 'ಪವಿತ್ರ ರಿಷ್ತಾ 2' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.