ಆ್ಯಪ್ನಗರ

ಈ ಬಾರಿಯ ಬಿಗ್ ಬಾಸ್ ಸ್ಪರ್ಧಿ ಬಗ್ಗೆ ಸೈಬರ್ ಕ್ರೈಂನಲ್ಲಿ ದೂರು ದಾಖಲು; ಕಾರಣ ಏನು?

ಬಿಗ್ ಬಾಸ್ ಮನೆಯಲ್ಲಂತೂ ಜಗಳ ಇದ್ದೇ ಇರುತ್ತದೆ, ಆದರೆ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಕೂಡ ಜಗಳ ಮುಂದುವರಿದಿದೆ. ಅಷ್ಟೇ ಅಲ್ಲದೆ ಇದು ಸೈಬರ್ ಕ್ರೈಂ ಠಾಣೆಯವರೆಗೂ ಹೋಗಿ ಮುಟ್ಟಿದೆ. ಯಾರು ಆ ಸ್ಪರ್ಧಿಗಳು? ಯಾಕೆ ಹಾಗೆ ಮಾಡಿದರು? ಇಲ್ಲಿದೆ ವರದಿ

Vijaya Karnataka Web 28 May 2020, 10:38 pm
ಡೆವೊಲಿನಾ ಭಟ್ಟಾಚಾರ್ಯ ಹಿಂದಿಯ ಬಿಗ್ ಬಾಸ್ 13ರಲ್ಲಿ ಕಾಣಿಸಿಕೊಂಡಿದ್ದರು. ಈ ಶೋ ಮುಗಿದನಂತರ ಡೆವೊಲಿನಾ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಸಿದ್ದಾರ್ಥ್ ಶುಕ್ಲಾ ಮತ್ತು ಶೆಹನಾಜ್ ಗಿಲ್ ಅವರು 'ಭುಲಾ ಡುಂಗಾ' ಹಾಡಿನಲ್ಲಿ ನಟಿಸಿದ್ದರು. ಇದು ಚೆನ್ನಾಗಿಲ್ಲ ಎಂದು ಡೆವೊಲಿನಾ ಅಭಿಮಾನಿಗಳು ಹೇಳಿದ್ದರು.
Vijaya Karnataka Web 123ದ್fgio (3)


'ಮುಜಸೇ ಶಾದಿ ಕರೋಗಿ' ಶೋನಲ್ಲಿ ಶೆಹನಾಜ್ ಮತ್ತು ಮಯೂರ್ ವರ್ಮ ಸ್ಪರ್ಧಿಗಳಾಗಿದ್ದರು. ಇವರಿಬ್ಬರ ಜೋಡಿಯನ್ನು ಟ್ರೋಲ್ ಮಾಡಲಾಗುತ್ತಿದೆ. ಇದು ಡೆವೊಲಿನಾ ಅಧಿಕೃತ ಖಾತೆಯಿಂದ ಲೈಕ್ ಆಗಿದೆ. ಹೀಗಾಗಿ ಮಯೂರ್ ಇದನ್ನಿಟ್ಟು ಸೈಬರ್ ಕ್ರೈಂ ದೂರು ಸಲ್ಲಿಸಿದ್ದಾರೆ.

'ಈ ಹಿಂದೆಯೂ ಡೆವೊಲಿನಾ ಅವರು ನನ್ನ ಇಮೇಜ್ ಹಾಳು ಮಾಡುವಂತೆ ಪ್ರೋತ್ಸಾಹ ನೀಡಿದ್ದರು. ಈ ಬಾರಿಯೂ ಕೂಡ ಅವರು ಫ್ಯಾನ್‌ ಪೇಜ್‌ಗಳಲ್ಲಿ ನನ್ನ ಫೋಟೋ ಇಟ್ಟುಕೊಂಡು ಟ್ರೋಲ್ ಮಾಡಿರುವ ಪೋಸ್ಟ್‌ ಲೈಕ್ ಮಾಡಿ ಪ್ರೋತ್ಸಾಹಿಸುತ್ತಿದ್ದಾರೆ. ಇದರಿಂದ ನನಗೆ ತುಂಬ ತೊಂದರೆಯಾಗುತ್ತಿದೆ. ನಾನು ತುಂಬ ಸಲ ಟ್ರೋಲ್ ಆಗಿದ್ದೇನೆ. ಹೀಗಾಗಿ ನಾನು ಸೈಬರ್ ಕ್ರೈಂಗೆ ದೂರು ನೀಡಿದ್ದೇನೆ' ಎಂದು ಮಯೂರ್ ಹೇಳಿದ್ದಾರೆ. ಡಿಜಿಟಲ್ ಕಾಪಿಯನ್ನು ಅವರ ಟ್ವಿಟರ್ ಖಾತೆಯಲ್ಲಿ ಮಯೂರ್ ಶೇರ್ ಮಾಡಿಕೊಂಡಿದ್ದಾರೆ.

ಡೆವೊಲಿನಾ ಅವರು ಈ ಬಗ್ಗೆ ಮಾತನಾಡಿದ್ದು, 'ಪ್ರಾಮಾಣಿಕವಾಗಿ ಈ ಮಯೂರ್ ವರ್ಮ ಯಾರು ಎಂದು ನನಗೆ ತಿಳಿದಿಲ್ಲ. ಯಾರು ಈ ಮಯೂರವರ್ಮ, ಯಾಕೆ ಅವರು ಎಲ್ಲ ಕಡೆ ನನ್ನ ಹೆಸರು ಬಳಸುತ್ತಿದ್ದಾರೆ ಎಂದು ಗೊತ್ತಿಲ್ಲ. ಇದೊಂದು ರೀತಿಯ ಪಬ್ಲಿಸಿಟಿ ಆಗಿರಬಹುದು. ಇದನ್ನು ಇಗ್ಲೋರ್ ಮಾಡುವುದು ಒಳ್ಳೆಯದು ಎಂದುಕೊಂಡಿದ್ದೇನೆ. ನನಗೆ ಈ ವ್ಯಕ್ತಿ ಬಗ್ಗೆಯಾಗಲೀ, ಸೈಬರ್ ದೂರಿನ ಬಗ್ಗೆಯಾಗಲೀ ತಿಳಿದಿಲ್ಲ' ಎಂದು ಹೇಳಿದ್ದಾರೆ. ಇನ್ನೇನು ತನಿಖೆ ನಡೆಯಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ