ಆ್ಯಪ್ನಗರ

'ಮುದ್ದುಗುಮ್ಮ ಅಂಜಲಿ', 'ಮಹಾದೇವಿ' ಧಾರಾವಾಹಿಯ ಬಾಲನಟಿ ಶ್ರೀತಾ ಈಗ ಏನು ಮಾಡುತ್ತಿದ್ದಾಳೆ?

'ಮುದ್ದುಗುಮ್ಮ ಅಂಜಲಿ' ಧಾರಾವಾಹಿಯಲ್ಲಿ ಪುಟ್ಟ ಬಾಲಕಿ ಶ್ರೀತಾ ನಟಿಸಿದ್ದಳು. ಆಮೇಲೆ ಅವಳು ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಳು. ಈಗ ಶ್ರೀತಾ ಏನು ಮಾಡುತ್ತಿದ್ದಾಳೆ? ಎಷ್ಟನೇ ತರಗತಿ ಓದುತ್ತಿದ್ದಾಳೆ? ಎಂಬ ಬಗ್ಗೆ ಇಲ್ಲಿದೆ ಮಾಹಿತಿ

Vijaya Karnataka Web 7 Oct 2020, 3:12 pm
4 ವರ್ಷಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಹಾರರ್ ಥ್ರಿಲ್ಲರ್ ಕಥೆ ಹೊಂದಿದ್ದ 'ಮುದ್ದುಗುಮ್ಮ ಅಂಜಲಿ' ಧಾರಾವಾಹಿ ಪ್ರಸಾರವಾಗುತ್ತಿತ್ತು. ಇದರಲ್ಲಿ ಅಂಜಲಿ ಪಾತ್ರದಲ್ಲಿ ಪುಟ್ಟ ಬಾಲಕಿ ಶ್ರೀತಾ ಅಭಿನಯಿಸುತ್ತಿದ್ದಳು. ಅವಳ ನಟನೆ ನೋಡಿ ನಿಜಕ್ಕೂ ಎಲ್ಲರೂ ಆಶ್ಚರ್ಯಪಟ್ಟಿದ್ದರು. ಮುದ್ದು ಮುದ್ದಾಗಿ, ಮುಗ್ಧತೆಯಿಂದ ನಟಿಸುವ ಶ್ರೀತಾ ಬಹುಬೇಗ ಜನರ ಮನಸ್ಸು ಕದ್ದಿದ್ದಳು. ಈಗ ಅವಳು ಏನು ಮಾಡುತ್ತಿದ್ದಾಳೆ?
Vijaya Karnataka Web muddu gumma anjali and mahadevi serial actress shreeta focusing education
'ಮುದ್ದುಗುಮ್ಮ ಅಂಜಲಿ', 'ಮಹಾದೇವಿ' ಧಾರಾವಾಹಿಯ ಬಾಲನಟಿ ಶ್ರೀತಾ ಈಗ ಏನು ಮಾಡುತ್ತಿದ್ದಾಳೆ?


ಡಾನ್ಸ್ ಕರ್ನಾಟಕ ಡಾನ್ಸ್' ದಲ್ಲಿ ಭಾಗವಹಿಸಿದ್ದ ಶ್ರೀತಾ!

ಪ್ರಸ್ತುತ ಶ್ರೀತಾ ಬೆಂಗಳೂರಿನ ಮಹಿಳಾ ಸೇವಾ ಸಮಜಾ ಶಾಲೆಯಲ್ಲಿ 4ನೇ ತರಗತಿಯಲ್ಲಿ ತುಂಬ ಚೆನ್ನಾಗಿ ಓದುತ್ತಿದ್ದಾಳೆ. 'ಮುದ್ದುಗುಮ್ಮ ಅಂಜಲಿ' ಧಾರಾವಾಹಿ ನಂತರದಲ್ಲಿ 'ಮಹಾದೇವಿ' ಧಾರಾವಾಹಿಯಲ್ಲಿ ನಟಿಸಿದ್ದಳು. ಆನಂತರ 'ಡಾನ್ಸ್ ಕರ್ನಾಟಕ ಡಾನ್ಸ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಳು. ಇವಳಿಗೆ ಇಲ್ಲಿ ನಿಹಾಲ್ ಸಾಗರ್ ವಿಷ್ಣು ಜೊತೆಯಾಗಿದ್ದನು. ಶ್ರೀತಾ ಡಾನ್ಸ್, ಎಕ್ಸ್‌ಪ್ರೆಶನ್‌ನ್ನು 'ಡಾನ್ಸ್ ಕರ್ನಾಟಕ ಡಾನ್ಸ್' ರಿಯಾಲಿಟಿ ಶೋ ನಿರ್ಣಾಯಕರಾಗಿದ್ದ ವಿಜಯ್ ರಾಘವೇಂದ್ರ, ಅರ್ಜುನ್ ಜನ್ಯ, ರಕ್ಷಿತಾ ಪ್ರೇಮ್ ತುಂಬ ಇಷ್ಟಪಟ್ಟಿದ್ದರು.

ತೆಲುಗು, ತಮಿಳಿನಿಂದ ಆಫರ್ ಬಂದ್ರೂ ಶ್ರೀತಾ ನಟಿಸಲಿಲ್ಲ!
ಉದಯ ಟಿವಿಯ 'ನಾನು ನನ್ನ ಕನಸು' ಧಾರಾವಾಹಿಯಲ್ಲಿ ಅನು ಪಾತ್ರದಲ್ಲಿ 4 ತಿಂಗಳುಗಳ ಕಾಲ ಶ್ರೀತಾ ನಟಿಸಿದ್ದಳು. ಇದೇ ಧಾರಾವಾಹಿಯನ್ನು ತೆಲುಗು ಭಾಷೆಯಲ್ಲಿ ಮಾಡಲಾಗಿತ್ತು. ಇದರಲ್ಲಿ ಕೂಡ ನಟಿಸುವಂತೆ ಶ್ರೀತಾಗೆ ಆಫರ್ ಬಂದಿತ್ತು. ತೆಲುಗಿನಲ್ಲಿ ನಟಿಸಿದರೆ ವಾರದಲ್ಲಿ 4 ದಿನ ಹೈದರಾಬಾದ್ ಹಾಗೂ 4 ದಿನ ಬೆಂಗಳೂರಿನಲ್ಲಿ ಇರಬೇಕಾಗುತ್ತದೆ. 'ನಾನು ನನ್ನ ಕನಸು' ಸೀರಿಯಲ್‌ನಲ್ಲಿ ತಮಿಳು ಭಾಷೆಯಲ್ಲಿಯೂ ಮಾಡಲಾಗಿದ್ದು, ಅದಕ್ಕೂ ಕೂಡ ಶ್ರೀತಾಗೆ ನಟಿಸಲು ಆಫರ್ ಬಂದಿತ್ತಂತೆ. ಆದರೆ ಅವಳ ಶಿಕ್ಷಣದ ದೃಷ್ಟಿಯಿಂದ ಶ್ರೀತಾ ಪಾಲಕರು ಸದ್ಯ ಅವಳನ್ನು ಧಾರಾವಾಹಿಯಿಂದ ದೂರವಿಟ್ಟಿದ್ದಾರೆ.

Also Read-ಮಹಾದೇವಿ ಧಾರಾವಾಹಿ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ
ಶ್ರೀತಾ ತಾಯಿ ಹೇಳೋದೇನು?

'ಸದ್ಯ ಶ್ರೀತಾ ಡಾನ್ಸ್ ಕೂಡ ಕಲಿಯುತ್ತಿಲ್ಲ. ಎಜುಕೇಶನ್ ಹಾಳಾಗಬಾರದು ಅಂತ ಈಗ ಸದ್ಯ ಅವಳಿಗೆ ಯಾವ ಪ್ರಾಜೆಕ್ಟ್ ಬಂದರೂ ಕೂಡ ನಾವು ಒಪ್ಪಿಕೊಳ್ಳುತ್ತಿಲ್ಲ. ಅವಳ ಮನಸ್ಸು ಬೇರೆಡೆಗೆ ವಾಲಬಾರದು ಎಂದು ನಾವು ಸದ್ಯ ಅವಳ ಶಿಕ್ಷಣಕ್ಕೆ ಮಾತ್ರ ಒತ್ತು ನೀಡುತ್ತಿದ್ದೇವೆ. ಅಬಾಕಸ್ ಕಲಿಯುತ್ತಿದ್ದಾಳೆ. ಕೊರೊನಾ ವೈರಸ್ ಸೋಂಕು ಕಡಿಮೆಯಾದಮೇಲೆ ಅವಳು ಕರಾಟೆ ಕ್ಲಾಸ್‌ಗೆ ಸೇರಲಿದ್ದಾಳೆ' ಎಂದು ಶ್ರೀತಾ ತಾಯಿ ಶಿಲ್ಪಾ ಮಧುಸೂದನ್ ಅವರು 'ವಿಜಯ ಕರ್ನಾಟಕ'ಕ್ಕೆ ಮಾಹಿತಿ ನೀಡಿದ್ದಾರೆ.
Also Read-ದೇವಿಯಾಗಿ ವೀಣಾ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ