ಆ್ಯಪ್ನಗರ

ಗಂಡನ ಜೊತೆ ರೊಮ್ಯಾಂಟಿಕ್ ಡೇಟ್ ಮಾಡಿದ 'ನಮ್ಮನೆ ಯುವರಾಣಿ' ಧಾರಾವಾಹಿ ನಟಿ ಕಾವ್ಯಾ ಮಹದೇವ್!

'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಸಾಕೇತ್ ಜೊತೆ ಡಿನ್ನರ್ ಡೇಟ್‌ಗೆ ಹೋಗಿದ್ದ ಅಹಲ್ಯಾ ಪಾತ್ರಧಾರಿ ನಟಿ ಕಾವ್ಯಾ ಮಹದೇವ್ ನಿಜ ಜೀವನದಲ್ಲಿ ಕೂಡ ಗಂಡನ ಜೊತೆ ಡೇಟ್ ಹೋಗಿ ಬಂದಿದ್ದಾರೆ. ಆ ಫೋಟೋಗಳು ಇಲ್ಲಿವೆ ನೋಡಿ!

Vijaya Karnataka Web 21 Sep 2020, 7:47 pm
ಕಲರ್ಸ್ ಕನ್ನಡ ವಾಹಿನಿಯ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಅಹಲ್ಯಾ ಪಾತ್ರದಲ್ಲಿ ನಟಿ ಕಾವ್ಯಾ ಮಹದೇವ್ ನಟಿಸುತ್ತಿದ್ದಾರೆ. ಪ್ರಸ್ತುತ ಸೀರಿಯಲ್‌ನಲ್ಲಿ ಅಹಲ್ಯಾ, ಗಂಡ ಸಾಕೇತ್ ಜೊತೆಗೆ ಡಿನ್ನರ್ ಡೇಟಿಂಗ್‌ಗೆ ಹೋಗಿದ್ದಾರೆ. ಇದರ ಜೊತೆಗೆ ರಿಯಲ್ ಲೈಫ್‌ನಲ್ಲಿ ಕೂಡ ಕಾವ್ಯಾ ಅವರ ಗಂಡನ ಜೊತೆ ಇತ್ತೀಚೆಗೆ ಕೂರ್ಗ್‌ನಲ್ಲಿ ಡೇಟ್ ಮಾಡಿದ್ದಾರೆ. ಕಾರಣ ಏನು?
Vijaya Karnataka Web nammane yuvarani kannada serial actress kavya mahadev celebrate wedding anniversary at coorg
ಗಂಡನ ಜೊತೆ ರೊಮ್ಯಾಂಟಿಕ್ ಡೇಟ್ ಮಾಡಿದ 'ನಮ್ಮನೆ ಯುವರಾಣಿ' ಧಾರಾವಾಹಿ ನಟಿ ಕಾವ್ಯಾ ಮಹದೇವ್!


ಕೂರ್ಗ್‌ನಲ್ಲಿ ಗಂಡನ ಜೊತೆ ಕಾವ್ಯಾ ಡೇಟಿಂಗ್!

ಕಾವ್ಯಾ ಮಹದೇವ್ ಅವರು ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಕೂರ್ಗ್‌ನಲ್ಲಿ ಗಂಡನ ಜೊತೆ ಖುಷಿಯ ಕ್ಷಣಗಳನ್ನು ಕಳೆದಿದ್ದಾರೆ. ಇದರ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಡೇಟ್‌ನ ಫೋಟೋ, ವಿಡಿಯೋ ಹಂಚಿಕೊಂಡಿದ್ದಾರೆ. ವಿವಾಹ ವಾರ್ಷಿಕೋತ್ಸವಕ್ಕೆ ಈ ಡೇಟ್ ಹೇಳಿ ಮಾಡಿಸಿದ್ದು ಎಂದು ಕಾವ್ಯಾ ಹೇಳಿದ್ದಾರೆ.

ನಾಟಕ ಶಾಲೆಯಲ್ಲಿ ಕಾವ್ಯಾ & ಮಹದೇವ್ ನಡುವೆ ಪ್ರೇಮಾಂಕುರ!
ಕಾಲೇಜು ದಿನಗಳಲ್ಲಿ ಎ.ಎಸ್.ಮೂರ್ತಿ ಅವರ 'ಅಭಿನಯ ತರಂಗ' ಎಂಬ ನಾಟಕ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವಾಗ ಕಾವ್ಯಾಗೆ ಮಹದೇವ್ ಪರಿಚಯ ಆಗಿತ್ತು. ಮಹದೇವ್ ಕೂಡ ಅಲ್ಲಿಯೇ ಓದುತ್ತಿದ್ದರು. ಆರಂಭದಲ್ಲಿ ಮಹದೇವ್ ನೋಡಿ ಕಾವ್ಯಾಗೆ ಇವರು ಯಾಕೆ ಅಷ್ಟೊಂದು ಗಂಬೀರವಾಗಿ ಇಲ್ಲ ಎಂದು ಅನಿಸಿತ್ತಂತೆ. ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಹಸೆಮಣೆ ಏರಿದ್ದರು. ಈ ಜೋಡಿ ಪರಸ್ಪರ ಪರಿಚಯ ಆಗಿ 6 ವರ್ಷಗಳ ನಂತರ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಮೆಸೇಜ್‌ನಲ್ಲಿಯೇ ಪ್ರೀತಿ ವಿಷಯ ತಿಳಿಸಿದ್ದ ಮಹದೇವ್, ರೊಮ್ಯಾಂಟಿಕ್ ಆಗಿ ಕಾವ್ಯಾಗೆ ಪ್ರಪೋಸ್ ಮಾಡಿರಲಿಲ್ಲ.

Also Read-ಅಭಿಮಾನಿಗಳು ಅಂದು ಬಟ್ಟೆ ಹರಿದ್ರು, ಮೈ ಪರಚಿದ್ರು, ಅಂದು ಆದಷ್ಟು ಖುಷಿ ಮತ್ತೆ ಆಗಲೇ ಇಲ್ಲ: ನಮ್ಮನೆ ಯುವರಾಣಿ ಧಾರಾವಾಹಿ ನಟ ದೀಪಕ್ ಗೌಡ!

ವಿಭಿನ್ನ ಪಾತ್ರ ನಿಭಾಯಿಸಿರುವ ಕಾವ್ಯಾ ಮಹದೇವ್!

ಕನ್ನಡ ಕಿರುತೆರೆಯಲ್ಲಿ ಅತಿ ಕಡಿಮೆ ಅವಧಿಯಲ್ಲಿ ಪಾಸಿಟಿವ್ ಹಾಗೂ ನೆಗೆಟಿವ್ ಪಾತ್ರಗಳನ್ನು ಮಾಡಿರುವ ಖ್ಯಾತಿ ಕಾವ್ಯಾಗೆ ಸಲ್ಲುತ್ತದೆ. 'ಚರಣ ದಾಸಿ' ಧಾರಾವಾಹಿಯಲ್ಲಿ ದೀಪಾ ಪಾತ್ರ ಮಾಡಿದ್ದ ಕಾವ್ಯಾ, 'ನಾನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ನೆಗೆಟಿವ್ ಪೋಷಾಕು ಧರಿಸಿದ್ದರು. 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಪಾಸಿಟಿವ್ ಹಾಗೂ ನೆಗೆಟಿವ್ ಈ ಎರಡೂ ಶೇಡ್‌ನಲ್ಲಿ ಕಾವ್ಯಾ ಕಾಣಿಸಿಕೊಳ್ಳುತ್ತಿದ್ದಾರೆ. ನಟನೆ ಬಗ್ಗೆ ಸಾಕಷ್ಟು ಒಲವಿರುವ ಕಾವ್ಯಾಗೆ, ದೀಪಿಕಾ ಪಡುಕೋಣೆ ಅವರ 'ಬಾಜಿರಾವ್ ಮಸ್ತಾನಿ', 'ಪದ್ಮಾವತ್'ನಂತಹ ಪಾತ್ರಗಳನ್ನು ಮಾಡುವಾಸೆಯಿದೆಯಂತೆ.

Also Read-'ನಮ್ಮನೆ ಯುವರಾಣಿ' ಧಾರಾವಾಹಿ ಅಹಲ್ಯಾ ಪಾತ್ರಧಾರಿಗೆ ಈಗಾಗಲೇ ಮದುವೆಯಾಗಿದೆ! ಗಂಡ ಯಾರು?
View this post on Instagram Late post . Cheers! A Toast to us. To our love, our adventures, our hearts and our forever... . . . Happy anniversary❤️ #happycouple#happylife#happywife#happywithyou#happinesseverywhere#coorg#evergreencountycoorg#wanderlust A post shared by ಕಾವ್ಯ ಮಹದೇವ್ (@kavyamahadev92) on Sep 18, 2020 at 7:34am PDT

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ