ಆ್ಯಪ್ನಗರ

ರಿಯಾಲಿಟಿ ಶೋ ನಿರ್ಣಾಯಕರಾಗಿ ಕ್ರೇಜಿಸ್ಟಾರ್

ಉದಯ ಟಿವಿ 4 ವರ್ಷದ ನಂತರ ಮಕ್ಕಳಿಗಾಗಿ ಮತ್ತೆ ಸಿಂಗಿಂಗ್ ರಿಯಾಲಿಟಿ ಶೋವನ್ನು ಪ್ರಾರಂಭಿಸಲಿದೆ. 5 ರಿಂದ 13 ವರ್ಷದ ಮಕ್ಕಳು ಈ ಶೋನಲ್ಲಿ ಭಾಗವಹಿಸುವ 'ಉದಯ ಸಿಂಗರ್ ಜೂನಿಯರ್ಸ್' ಇದೇ ಶನಿವಾರ (ನವೆಂಬರ್ 18)ರಿಂದ ಶನಿವಾರ ಮತ್ತು ಭಾನುವಾರ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Vijaya Karnataka Web 13 Nov 2017, 5:51 pm
ಮಕ್ಕಳಲ್ಲಿ ಹುದಗಿರುವ ನೈಪುಣ್ಯತೆಯನ್ನು ಕರುನಾಡ ಜನತೆಗೆ ತೋರಿಸಲು ನಾನಾ ರೀತಿಯ ಪ್ರತಿಭೆಯುಳ್ಳ 'ಕಿಲಾಡಿ ಕಿಡ್ಸ್' ಎಂಬ ರೀಯಾಲಿಟಿ ಶೋ ಮಾಡಿ ಜನಮನ್ನಣೆ ಪಡದಿರುವ ಉದಯ ಟಿವಿ 4 ವರ್ಷದ ನಂತರ ಮಕ್ಕಳಿಗಾಗಿ ಮತ್ತೆ ಸಿಂಗಿಂಗ್ ರಿಯಾಲಿಟಿ ಶೋವನ್ನು ಪ್ರಾರಂಭಿಸಲಿದೆ. 5 ರಿಂದ 13 ವರ್ಷದ ಮಕ್ಕಳು ಈ ಶೋನಲ್ಲಿ ಭಾಗವಹಿಸುವ 'ಉದಯ ಸಿಂಗರ್ ಜೂನಿಯರ್ಸ್' ಇದೇ ಶನಿವಾರ (ನವೆಂಬರ್ 18)ರಿಂದ ಶನಿವಾರ ಮತ್ತು ಭಾನುವಾರ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
Vijaya Karnataka Web new reality show udaya singers juniors
ರಿಯಾಲಿಟಿ ಶೋ ನಿರ್ಣಾಯಕರಾಗಿ ಕ್ರೇಜಿಸ್ಟಾರ್


16 ಮಕ್ಕಳ ಈ ಸ್ಪರ್ಧೆಯಲ್ಲಿ ಇಬ್ಬರು ಮುಖ್ಯ ನಿರ್ಣಾಯಕರನ್ನು ಒಬ್ಬ ಮಾರ್ಗದರ್ಶಕರನ್ನು ಹೊಂದಿದ್ದು ಅಲ್ಲದೆ ಪ್ರತಿ ವಾರವೂ ಹೆಸರಾಂತ ಸಂಗೀತಗಾರರು ಮತ್ತು ಸೆಲಿಬ್ರಿಟಿಗಳು ಈ ಶೋಗೆ ವಿಶೇಷ ನಿರ್ಣಾಯಕರಾಗಿ ಭಾಗವಹಿಸುತ್ತಾರೆ.

ಈಗಾಗಲೆ ರಾಜ್ಯದ ಹಲವು ಕಡೆ ಆಡೀಶನ್ ಮಾಡಲಾಗಿದ್ದು ಉತ್ತಮ ಹಾಡಿಗಾರಿಕೆ ಮತ್ತು ವಾಕ್‍ಚಾತುರ್ಯ ಹೊಂದಿದ 16 ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಈ ಶೋನಲ್ಲಿ ಚಲನಚಿತ್ರ ಹಾಡುಗಳೊಂದಿಗೆ ಶಾಸ್ತ್ರೀಯ ಸಂಗೀತ, ಜಾನಪದ, ಭಕ್ತಿಗೀತೆ, ದೇಶಿಗೀತೆ ಮತ್ತು ಇಂಡೋವೆಸ್ಟರ್ನ್ ಹಾಡುಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ.

ಕನ್ನಡ ಚಿತ್ರರಂಗದ ಕಂಡ ಹೆಸರಾಂತ ನಟ, ನಿರ್ದೇಶಕ, ನಿರ್ಮಾಪಕ, ಗೀತರಚನೆಕಾರ, ಯೋಜಕ, ಕನಸುಗಾರ, ಮಲ್ಲ, ಯುಗಪುರುಷ, ರಣಧೀರ, ರಾಮಾಚಾರಿ, ಅಂಜದಗಂಡು ಕ್ರೇಜಿಸ್ಟಾರ್ ವಿ.ರವಿಚಂದ್ರನ್ 'ಉದಯ ಸಿಂಗರ್ ಜೂನಿಯರ್ಸ್' ಮುಖ್ಯ ನಿರ್ಣಾಯಕರ ಸ್ಥಾನವನ್ನು ನಿರ್ವಹಿಸಲಿದ್ದಾರೆ.

ತಮ್ಮ ಪ್ರತಿಯೊಂದು ಚಿತ್ರದಲ್ಲಿ ಹೊಸತನವನ್ನು ಮತ್ತು ನಿರ್ಮಾಣ, ತಂತ್ರಜ್ಞಾನ, ಸಂಗೀತದಲ್ಲಿ ವಿನೂತನ ಪ್ರಯೋಗವನ್ನು ಮಾಡಿ ಜನತೆ ಕಡೆಯಿಂದ ಸೈ ಎನಿಸಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು. ಹಾಗೆ ಈ ದಿಗ್ಗಜರ ಜತೆಗೆ ಮತ್ತೊಬ್ಬ ಸಂಗೀತ ದಿಗ್ಗಜ ಮನೋ ಎಂದೆ ಪ್ರಖ್ಯಾತಿ ಪಡೆದ ನಾಗೂರು ಬಾಬು ಮತೊಬ್ಬ ನಿರ್ಣಾಯಕರಾಗಿ ಭಾಗವಹಿಸಲಿದ್ದಾರೆ.

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪರಿಣತಿ ಪಡದಿರುವ ಮನೋ ಹಿನ್ನೆಲೆ ಗಾಯಕರಾಗಿ ತೆಲಗು,ತಮಿಳು,ಮಲಯಾಳಿ,ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ 30 ಸಾವಿರಕ್ಕೂ ಹೆಚ್ಚು ಹಾಡನ್ನು ಹಾಡಿ ಪ್ರಸಿದ್ಧಿ ಪಡೆದಿದ್ದಾರೆ. ಹಾಗೆ ಸುಚೇತನ್ ಈ ಶೋ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದರೇ ಹಿನ್ನೆಲೆ ಗಾಯಕಿ ಸಂಗೀತಾ ರವೀಂದ್ರನಾಥ್ ನಿರೂಪಕಿಯಾಗಿ ನಿರ್ವಹಿಸಲಿದ್ದಾರೆ.

ಫಿಕ್ಷನ್ ಮತ್ತು ರಿಯಾಲಿಟಿ ಶೋಗಳಿಗೆ ಹೆಸರಾದ ಸಾಯಿಬಾಬಾ ಟೆಲಿಫಿಲಂಸ್ ಸಂಸ್ಥೆಯ ನಿರ್ಮಾಣ ಈ ಶೋಗಿದೆ. ಪ್ರತಿ ವಾರವೂ ಒಂದು ಎಲಿಮಿನೇಶನ್ ರೌಂಡನ್ನು ಹೊಂದಿದ್ದು ಕೊನೆಗೆ ಗ್ರ್ಯಾಂಡ್‍ಫಿನಾಲೆ ನಡೆಯಲಿದೆ. ರಂಗೇರಿದ ಸೆಟ್‍ನಲ್ಲಿ ಸಂಗೀತದ ಗುಂಗು ಹಿಡಿಸುವ ಮಕ್ಕಳ ರಿಯಾಲಿಟಿ ಶೋ 'ಉದಯ ಸಿಂಗರ್ ಜೂನಿಯರ್ಸ್' ನವೆಂಬರ್ 18ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ