ಆ್ಯಪ್ನಗರ

ಕಿರುತೆರೆಯಲ್ಲಿ ಹೊಸ ಸೂಪರ್ ನ್ಯಾಚುರಲ್ ಧಾರಾವಾಹಿ 'ಅಮ್ನೋರು'

ಸುಂದರವಾಗಿ ಚಿತ್ರಿಸಲಾದ “ಅಮ್ನೋರು” ಧಾರಾವಾಹಿಯು ನೋಡುಗರ ಮನಸೆಳೆದು ಮನರಂಜಿಸುವುದಕ್ಕೆ ಇದೇ ಜನವರಿ 20 ರಿಂದ, ಸೋಮವಾರದಿಂದ ಶನಿವಾರ ರಾತ್ರಿ 7 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಈ ಧಾರಾವಾಹಿಯು ಮೇಲುಕೋಟೆ ಹಾಗೂ ಇನ್ನಿತರ ಸುತ್ತಮುತ್ತಲಿನ ಪ್ರಸಿದ್ಧ ಸ್ಥಳಗಳಲ್ಲಿ ಹಾಗೂ ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಹೊಸ ಬಗೆಯ ಕಥೆ ಮತ್ತು ತಂತ್ರಜ್ಞಾನ ಈ ಧಾರಾವಾಹಿಯಲ್ಲಿ ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದಾಗಿದೆ.

Vijaya Karnataka 14 Jan 2020, 5:50 pm
ಹೊಸ ವರುಷಕ್ಕೆ ಹೊಸ ಹುರುಪಿನಿಂದ ಫ್ರೇಮ್ಸ್ ನಿರ್ಮಾಣ ಸಂಸ್ಥ'ಅಮ್ನೋರು' ಎಂಬ ಶೀರ್ಷಿಕೆಯನ್ನು ಹೊತ್ತು ದೈವ ಮತ್ತು ದುಷ್ಟ ಶಕ್ತಿಯಾಧಾರಿತ ಧಾರಾವಾಹಿಯನ್ನು ಪ್ರೇಕ್ಷಕರೆದುರಿಡಲು ಸಜ್ಜಾಗಿದೆ. ಈ ಕಥೆಯು ಅಮ್ನೋರ ಪರಮಭಕ್ತರಾದ ಶಂಕರ ಹಾಗೂ ದಾಕ್ಷಾಯಣಿ ಹಿಂದಿನ ಜನ್ಮದಲ್ಲಿ ಅಮ್ನೋರ ವಿಗ್ರಹ ಮತ್ತು ರುದ್ರಾಕ್ಷಿಯನ್ನು ದುಷ್ಟರಿಂದ ಕಾಪಾಡುವ ಸಲುವಾಗಿ, ಮಾಟಗಾತಿ ಧನಶೇಖರಿ ಮತ್ತು ಶಂಕರನ ಸಹೋದರ ವರದಪ್ಪನಿಂದಲೇ ಪ್ರಾಣವನ್ನು ಕಳೆದುಕೊಂಡಿರುವ ದಂಪತಿಗಳು.
Vijaya Karnataka Web ಅಮ್ನೋರು


ರುದ್ರ ಎನ್ನುವ ಆತ್ಮ 27 ವರ್ಷಗಳಿಂದ ಕೊಳದಲ್ಲಿರುವ ರುದ್ರಾಕ್ಷಿಮಾಲೆ ಮತ್ತು ಅಮ್ನೋರ ವಿಗ್ರಹವನ್ನು ಕಾಪಾಡುತ್ತಾ, ಮತ್ತೆ ಪುನರ್ಜನ್ಮ ಪಡೆದುಕೊಂಡು ಬರುವ ಜೋಡಿಗಾಗಿ ಕಾಯುತ್ತಿರುತ್ತದೆ. ಘೋರ ಮಾಟಗಾತಿ ಧನಶೇಖರಿ ವರದಪ್ಪನ ಜೊತೆ ಸೇರಿ ರುದ್ರಾಕ್ಷಿ ಮಾಲೆ ಹಾಗೂ ಅಮ್ನೋರ ವಿಗ್ರಹವನ್ನು ತನ್ನದಾಗಿಸಿಕೊಳ್ಳಲು ಸಂಚು ರೂಪಿಸಿಕೊಳ್ಳುತ್ತಿರುವರು.

ಶಂಕರ ಹಾಗೂ ದಾಕ್ಷಾಯಣಿ ಅಮ್ನೋರ ವಿಗ್ರಹವನ್ನು ಪ್ರತಿಷ್ಠಾಪಿಸಲು ಪುನಃ ಹುಟ್ಟಿ ಬರುತ್ತಾರಾ? 27 ವರ್ಷ ಕಾಯುತ್ತಿರುವ ರುದ್ರಾಳ ಆಸೆಯು ನೆರವೇರುತ್ತಾ? ತದ್ವಿರುದ್ಧ ಆಲೋಚನೆಗಳನ್ನು ಹೊಂದಿರುವ ನಾಯಕ ಮತ್ತು ನಾಯಕಿ ಜೊತೆಯಾಗಿ ದೇವಸ್ಥಾನ ಪುನಃಶ್ಚೇತನಗೊಳಿಸುತ್ತಾರಾ?
ಅನ್ನೋದೆ ಈ ಕಥೆಯ ತಿರುಳಾಗಿದೆ.
ಈ ಧಾರಾವಾಹಿಯು ಮೇಲುಕೋಟೆ ಹಾಗೂ ಇನ್ನಿತರ ಸುತ್ತಮುತ್ತಲಿನ ಪ್ರಸಿದ್ಧ ಸ್ಥಳಗಳಲ್ಲಿ ಹಾಗೂ ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಹೊಸ ಬಗೆಯ ಕಥೆ ಮತ್ತು ತಂತ್ರಜ್ಞಾನ ಈ ಧಾರಾವಾಹಿಯಲ್ಲಿ ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದಾಗಿದೆ.

ಹಲವಾರು ಖ್ಯಾತ ದೇವಿ ಮಹಾತ್ಮೆ ಸಾರುವ ಧಾರಾವಾಹಿಗಳನ್ನು ನೀಡಿರುವ ರಮೇಶ್ ಇಂದ್ರ ನಿರ್ಮಾಣ ಮತ್ತು ನಿರ್ದೇಶನ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನುಪ್ ಸೀಲಿಯನ್ ಕಥೆಗೆ ತಕ್ಕಂತೆ ಸಂಗೀತ ಸಂಯೋಜನೆ ಮಾಡಿದ್ದಾರೆ. ದಯಾಕರ್ ಛಾಯಾಗ್ರಹಣದಲ್ಲಿ ತಮ್ಮ ಕೈ ಚಳಕವನ್ನು ತೋರಿಸಿದ್ದಾರೆ. ನಾಯಕಿಯಾಗಿ ಹೊಸ ಪ್ರತಿಭೆ ಅಕ್ಷರ ನಟಿಸುತ್ತಿದ್ದು, ನಾಯಕನಾಗಿ ಶಶಿ ನಟಿಸುತ್ತಿದ್ದಾರೆ.

ಕನ್ನಡ ಚಲನಚಿತ್ರರಂಗದ ಖ್ಯಾತ ಖಳನಾಯಕರಾದ ಕೀರ್ತಿರಾಜ್ ತಮ್ಮ ವಿಭಿನ್ನ ಪಾತ್ರದಿಂದ ಜನರ ಮನಸ್ಸಲ್ಲಿ ನೆಲೆಸುವುದರಲ್ಲಿ ಸಂಶಯವೇ ಇಲ್ಲ. ರೇಖಾ ರಾವ್, ಹರ್ಷಿತಾ, ಸಂಗೀತ ಭಟ್, ಅನಂತ್ ವೇಲು, ಶರ್ಮಿಳಾ, ಮಧು ಹೆಗಡೆ, ರೋಹಿಣಿ, ವಿಜಯಲಕ್ಷ್ಮಿ, ವಿಕ್ರಮ್ ಹೀಗೆ ಹಲವಾರು ಕಲಾವಿದರನ್ನು ಒಳಗೊಂಡ ಧಾರಾವಾಹಿ ಅಮ್ನೋರು.

ಸುಂದರವಾಗಿ ಚಿತ್ರಿಸಲಾದ “ಅಮ್ನೋರು” ಧಾರಾವಾಹಿಯು ನೋಡುಗರ ಮನಸೆಳೆದು ಮನರಂಜಿಸುವುದಕ್ಕೆ ಇದೇ ಜನವರಿ 20 ರಿಂದ, ಸೋಮವಾರದಿಂದ ಶನಿವಾರ ರಾತ್ರಿ 7 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ