ಆ್ಯಪ್ನಗರ

ಭಾರತದ ಟಿವಿ ಕಾರ್ಯಕ್ರಮಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ: ಪಾಕ್ ಕೋರ್ಟ್‌

ಭಾರತದ ಟಿವಿ ಕಾರ್ಯಕ್ರಮಗಳು ಪ್ರಸಾರವಾಗದಂತೆ ನಿರ್ಬಂಧ ಹೇರಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಕೋರ್ಟ್‌ ಹೇಳಿದೆ.

ಟೈಮ್ಸ್ ಆಫ್ ಇಂಡಿಯಾ 18 Jul 2017, 5:41 pm
ಹೊಸದಿಲ್ಲಿ: ಭಾರತದ ಟಿವಿ ಕಾರ್ಯಕ್ರಮಗಳು ಪ್ರಸಾರವಾಗದಂತೆ ನಿರ್ಬಂಧ ಹೇರಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಕೋರ್ಟ್‌ ಹೇಳಿದೆ.
Vijaya Karnataka Web pakistani court lifts ban on airing indian tv serials
ಭಾರತದ ಟಿವಿ ಕಾರ್ಯಕ್ರಮಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ: ಪಾಕ್ ಕೋರ್ಟ್‌


ಜಗತ್ತೇ ಒಂದು ಹಳ್ಳಿಯಂತಾಗಿದೆ, ಆದ್ದರಿಂದ ಎಷ್ಟು ದಿನಾ ಅಂತ ಯಾವುದೇ ಕಾರಣವಿಲ್ಲದೆ ನಿರ್ಬಂಧ ಹೇರಲು ಸಾಧ್ಯ? ಎಂದು ಕೋರ್ಟ್‌ ಕೇಳಿರುವುದಾಗಿ ಅಲ್ಲಿಯ ಡಾನ್‌ ಪತ್ರಿಕೆ ವರದಿ ಮಾಡಿದೆ.

ಪಾಕಿಸ್ತಾನದ ವಿರುದ್ಧ ಇರುವ ಹಾಗೂ ಕೆಲ ಆಕ್ಷೇಪಣಾಕಾರಿಯಾದ ಕಾರ್ಯಕ್ರಮಗಳನ್ನಷ್ಟೇ ಪ್ರಸಾರ ಮಾಡದಿರಲು ಲಾಹೋರ್ ಹೈ ಕೋರ್ಟ್‌ನ ನ್ಯಾಯಾಧೀಶ ಮನ್ಸೂರ್‌ ಅಲಿ ಶಾ ತೀರ್ಪು ನೀಡಿದ್ದಾರೆ.

ಪಾಕಿಸ್ತಾನದ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣಾ ಪ್ರಾಧೀಕಾರ ಭಾರತದ ಚಿತ್ರ ಹಾಗೂ ಕಾರ್ಯಕ್ರಮವನ್ನು ನಿಷೇಧಿಸಬೇಕೆಂದು ಕೋರಿ ಕೋರ್ಟ್ ಮೆಟ್ಟಲೇರಿತ್ತು.

ಭಾರತದ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲು ಯಾವುದೇ ಸೂಕ್ತ ಕಾರಣಗಳಿಲ್ಲ ಹಾಗೂ ಸರಕಾರಕ್ಕೂ ಯಾವುದೇ ಆಕ್ಷೇಪವಿಲ್ಲ. ಆದ್ದರಿಂದ ನಿರ್ಬಂಧ ಹೇರುವುದರಲ್ಲಿ ಯಾವುದೇ ಅರ್ಥವಿಲ್ಲವೆಂದು ಕೋರ್ಟ್ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ