ಆ್ಯಪ್ನಗರ

ಇದುವರೆಗೂ ಬಾರದ ಸ್ಟಾರ್‌ನನ್ನು ಕರೆದುಕೊಂಡು ಬಂದ್ರು ಸೃಜಾ

ಅಪ್ಪು ಬರುವಿಕೆಗಾಗಿ ಕಾತರದಿಂದ ಕಾಯುತ್ತಿದ್ದ ಪ್ರೇಕ್ಷಕರಿಗೆ ಕೊನೆಗೂ ಸಮಾಧಾನ ಸಿಕ್ಕಿದೆ.

ವಿಕ ಸುದ್ದಿಲೋಕ 23 Jun 2017, 3:15 pm
ಸೃಜನ್‌ ಲೋಕೇಶ್‌ ನಡೆಸಿಕೊಡುವ ಜನಪ್ರಿಯ ಟಿವಿ ಶೋ 'ಮಜಾ ಟಾಕೀಸ್‌'ಗೆ ಬಹುತೇಕ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಬಂದು ಹೋಗಿದ್ದಾರೆ. ಆದರೆ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಗೈರು ಈ ಶೋನಲ್ಲಿ ಕಾಡುತ್ತಿದ್ದದ್ದಂತೂ ನಿಜ.
Vijaya Karnataka Web puneeth rajkumar in maja talkies
ಇದುವರೆಗೂ ಬಾರದ ಸ್ಟಾರ್‌ನನ್ನು ಕರೆದುಕೊಂಡು ಬಂದ್ರು ಸೃಜಾ


ಇದೀಗ ಆ ಪವರ್‌ಫುಲ್‌ ಕ್ಷಣ ಬಂದಿದೆ. ಅಪ್ಪು ಬರುವಿಕೆಗಾಗಿ ಕಾತರದಿಂದ ಕಾಯುತ್ತಿದ್ದ ಪ್ರೇಕ್ಷಕರಿಗೆ ಕೊನೆಗೂ ಸಮಾಧಾನ ಸಿಕ್ಕಿದೆ. ಮಜಾ ಟಾಕೀಸ್‌ನ 250ನೇ ಎಪಿಸೋಡ್‌ನಲ್ಲಿ 'ರಾಜಕುಮಾರ' ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾನೆ.



'ರಾಜಕುಮಾರ' ಚಿತ್ರದ ಯಶಸ್ಸಿನ ಸಂಭ್ರಮದ ಜತೆಗೆ ಮಜಾ ಟಾಕೀಸ್ 250 ಎಪಿಸೋಡ್ ಖುಷಿಯೂ ಒಡಗೂಡಿ ಭರ್ಜರಿ ಎಪಿಸೋಡ್ ಆಗೋದಂತೂ ಗ್ಯಾರಂಟಿ ಎನ್ನುತ್ತಿದ್ದಾರೆ ಅಭಿಮಾನಿಗಳು. ಅಪ್ಪು ನೀಡಿದ ಗ್ರ್ಯಾಂಡ್‌ ಎಂಟ್ರಿ ಇಲ್ಲಿದೆ ನೋಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ