ಆ್ಯಪ್ನಗರ

'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್' ಸೀಸನ್ 4ಕ್ಕೆ ವೇದಿಗೆ ಸಜ್ಜು

ಕನ್ನಡ ಕಿರುತೆರೆ ಲೋಕದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ ರಿಯಾಲಿಟಿ ಶೋಗಳಲ್ಲಿ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್' ಸಹ ಒಂದು. ಇದೀಗ ಹೊಸ ಸೀಸನ್‌ಗೆ ವೇದಿಕೆ ಸಿದ್ಧವಾಗುತ್ತಿದೆ.

TNN 3 Feb 2018, 12:42 pm
ಕನ್ನಡ ಕಿರುತೆರೆ ಲೋಕದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ ರಿಯಾಲಿಟಿ ಶೋಗಳಲ್ಲಿ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್' ಸಹ ಒಂದು. ಇದೀಗ ಹೊಸ ಸೀಸನ್‌ಗೆ ವೇದಿಕೆ ಸಿದ್ಧವಾಗುತ್ತಿದೆ. ಶೀಘ್ರದಲ್ಲೇ ಈ ಶೋ ಸುವರ್ಣ ವಾಹಿನಿಯಲ್ಲಿ ಮೂಡಿಬರಲಿದೆ.
Vijaya Karnataka Web pyaate hudugir halli life season 4 is back on star suvarna
'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್' ಸೀಸನ್ 4ಕ್ಕೆ ವೇದಿಗೆ ಸಜ್ಜು


ಈ ಕಾರ್ಯಕ್ರಮಕ್ಕಾಗಿ ಈಗಾಗಲೆ ವಾಹಿನಿ ಸಾಮಾಜಿಕ ಮಾಧ್ಯಮಗಳ ಮೂಲಕ ಆಡಿಷನ್‌ಗೆ ಕರೆಕೊಟ್ಟಿದೆ. ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಕೊನೆಯದಾಗಿ ಪ್ರಸಾರವಾಗಿದ್ದು 2015ರಲ್ಲಿ. ನಂತರದ ವರ್ಷಗಳಲ್ಲಿ ಶೋ ಕಾರಣಾಂತರಗಳಿಂದ ನಡೆಯಲಿಲ್ಲ.

ನಗರದ ಯುವತಿಯರು ಹಳ್ಳಿಯಲ್ಲಿ ಉಳಿದುಕೊಂಡು ಹಲವಾರು ಟಾಸ್ಕ್‌ಗಳನ್ನು ನಿಭಾಯಿಸಬೇಕಾಗುತ್ತದೆ. ಈ ಟಾಸ್ಕ್‌ಗಳ ಮೂಲಕ ಅವರ ದೈಹಿಕ ಸಹಿಷ್ಣುತೆಯನ್ನೂ ಓರೆಗೆ ಹಚ್ಚಲಾಗುತ್ತದೆ. ಉತ್ತಮ ಪ್ರದರ್ಶನ ನೀಡಿದ ಸ್ಪರ್ಧಿಗಳು ವೀಕ್ಷಕರ ಓಟಿಂಗ್ ಮೂಲಕ ಆಯ್ಕೆಯಾಗುತ್ತಾರೆ.

ಈ ಹಿಂದಿನ ಸೀಸನ್‌ನಲ್ಲಿ ರಾಜಶ್ರೀ ಗೆದ್ದಿದ್ದರು. ಅಕ್ಷಿತಾ ರನ್ನರ್ ಅಪ್ ಆಗಿದ್ದರು. ನಟ ಸಂತೋಷ್ ಕಾರ್ಯಕ್ರಮ ನಿರೂಪಿಸಿದ್ದರು. ಈ ಬಾರಿಯ ಸೀಸನ್‌ ಸಾಕಷ್ಟು ಹೊಸತನದಿಂದ ಕೂಡಿರುತ್ತದೆ ಎಂದಿವೆ ಟಿವಿ ವಾಹಿನಿ ಮೂಲಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ