ಆ್ಯಪ್ನಗರ

ರಷ್ಯನ್ ಟಿವಿಯಲ್ಲಿ ಪ್ರಭಾಸ್, ಅನುಷ್ಕಾ ಶೆಟ್ಟಿ ನಟನೆಯ 'ಬಾಹುಬಲಿ' ಸಿನಿಮಾ ಪ್ರಸಾರ!

ಪ್ರಭಾಸ್, ಅನುಷ್ಕಾ ಶೆಟ್ಟಿ, ರಮ್ಯಾ ಕೃಷ್ಣ, ರಾಣಾ ದಗ್ಗುಬಾಟಿ ಅಭಿನಯದ 'ಬಾಹುಬಲಿ' ಸಿಕ್ವೇಲ್ ಹಲವು ದಾಖಲೆಗಳನ್ನು ಈಗಾಗಲೇ ಬರೆದು ಇತಿಹಾಸ ಸೃಷ್ಟಿಸಿದೆ. ಇದರ ಜೊತೆಯಲ್ಲಿ ಈಗ ಇನ್ನೊಂದು ರೆಕಾರ್ಡ್ ಮಾಡಿದ್ದು, ಭಾರತೀಯರು ಇದರಿಂದ ಇನ್ನಷ್ಟು ಖುಷಿಪಡುವಂತಾಗಿದೆ.

Vijaya Karnataka Web 28 May 2020, 8:38 pm
ಎಸ್ ಎಸ್ ರಾಜಮೌಳಿ ನಿರ್ದೇಶನದ, ಪ್ರಭಾಸ್, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ ಅಭಿನಯದ 'ಬಾಹುಬಲಿ- ದಿ ಬಿಗಿನಿಂಗ್' ಚಿತ್ರ ರಿಲೀಸ್ ಆಗಿ ಎಲ್ಲ ಅವತರಣಿಕೆಗಳ ಲೆಕ್ಕ ಹಾಕಿ ನೋಡಿದರೆ ಒಟ್ಟಾರೆಯಾಗಿ 1800 ಕೋಟಿ ರೂಪಾಯಿ ಬಾಕ್ಸ್ ಆಫೀಸ್‌ನಲ್ಲಿ ಗಳಿಸಿತ್ತು. ಈಗ ಮತ್ತೊಮ್ಮೆ ಭಾರತೀಯರು ಈ ಸಿನಿಮಾದಿಂದ ಖುಷಿಪಡುವಂತಾಗಿದೆ.
Vijaya Karnataka Web 123ದ್fgio (2)


ಪ್ರೇಕ್ಷಕರ ತಲೆಯೊಳಗೆ ಹುಳ ಬಿಟ್ಟಿದ್ದ ರಾಜಮೌಳಿ

ಭಾರತೀಯ ಸಿನಿಮಾಗಳಲ್ಲಿ ಇದು ತುಂಬ ವಿಭಿನ್ನವಾದ ಸಿನಿಮಾವಾಗಿದ್ದು ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗಿನ ಮಂದಿ ಎಲ್ಲರೂ ಈ ಸಿನಿಮಾ ನೋಡಿದ ನಂತರದಲ್ಲಿ ಕಟ್ಟಪ್ಪ ಯಾಕೆ ಬಾಹುಬಲಿ ಕೊಂದ ಅಂತ ಪ್ರಶ್ನೆಗೆ ಉತ್ತರ ಹುಡುಕುವಲ್ಲಿ ಮಗ್ನರಾಗುವಂತೆ ಮಾಡಿತ್ತು. ಈ ಪ್ರಶ್ನೆಯನ್ನು ಪ್ರೇಕ್ಷಕರ ತಲೆಯೊಳಗೆ ಬಿಟ್ಟು 'ಬಾಹುಬಲಿ-ದಿ ಕನ್‌ಕ್ಲುಶನ್' ಸಿನಿಮಾ ಮಾಡುವಲ್ಲಿ ರಾಜಮೌಳಿ ಯಶಸ್ವಿಯಾದರು. ಈ ಚಿತ್ರ ಈಗ ವಿಶ್ವದಾದ್ಯಂತ ಫೇಮಸ್ ಆಗಿದೆ. ವಿದೇಶಗಳಲ್ಲಿಯೂ ರಿಲೀಸ್ ಆಗಿದ್ದ ಚಿತ್ರ ಒಳ್ಳೆಯ ಹಣ ಕೂಡ ಕಮಾಯಿ ಮಾಡಿತ್ತು.

ರಷ್ಯನ್ ಟಿವಿಯಲ್ಲಿ ಬಾಹುಬಲಿ!

ದಿ ರಷ್ಯನ್ ಎಂಬಸೇ ಸೋಶಿಯಲ್ ಮೀಡಿಯಾದಲ್ಲಿ 'ಬಾಹುಬಲಿ 2' ಚಿತ್ರದ ವಿಡಿಯೋ ಶೇರ್ ಮಾಡಿ ರಷ್ಯಾ ವಾಹಿನಿಯೊಂದರಲ್ಲಿ ಪ್ರಸಾರವಾಗಲಿದೆ ಎಂದು ಪೋಸ್ಟ್ ಮಾಡಿದೆ. ರಷ್ಯನ್ ಧ್ವನಿಯಲ್ಲಿ ಈ ಸಿನಿಮಾ ಪ್ರಸಾರ ಆಗಲಿದೆಯಂತೆ. ಅಷ್ಟೇ ಅಲ್ಲದೆ 'ಇಂಡಿಯನ್ ಸಿನಿಮಾ ರಷ್ಯಾದಲ್ಲೂ ಜನಪ್ರಿಯತೆ ಪಡೆದಿದೆ. ಹೀಗಾಗಿ ರಷ್ಯಾ ಟಿವಿ ಬಾಹುಬಲಿ -2 ಪ್ರಸಾರ ಮಾಡುತ್ತಿದೆ.' ಎಂದು ಬರೆಯಲಾಗಿತ್ತು.

ಲಂಡನ್‌ನಲ್ಲಿಯೂ ದಾಖಲೆ ಬರೆದಿದ್ದ ಬಾಹುಬಲಿ

ಈ ಸಿನಿಮಾ ಈಗ ವಿದೇಶದ ಮನರಂಜನಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರೋದಕ್ಕೆ ಭಾರತೀಯರು ಹೆಮ್ಮೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಇದನ್ನು ಶೇರ್ ಮಾಡುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ನೆನಪಿಡುವಂತಹ ಸಾಧನೆ ಎಂದೂ ಕೂಡ ಹೇಳಿದ್ದಾರೆ. Royal Albert Hall (London)ನಲ್ಲಿ ಇದರ ಉದ್ಘಾಟನೆಯಾಗಿ 148 ವರ್ಷಗಳ ನಂತರದಲ್ಲಿ ಪ್ರಸಾರವಾದ ಮೊದಲ ಇಂಗ್ಲಿಷೇತರ ಸಿನಿಮಾ ಅಂದರೆ ಅದು 'ಬಾಹುಬಲಿ' ಭಾಗ 1 ಆಗಿತ್ತು.

Also read-ನಿಶ್ಚಿತಾರ್ಥ ಮಾಡಿಕೊಂಡ 'ಬಾಹುಬಲಿ' ಸಿನಿಮಾ ನಟ ರಾಣಾ ದಗ್ಗುಬಾಟಿ ಮತ್ತು ಮಿಹೀಕಾ ಬಜಾಜ್!

ಒಟ್ಟಾರೆಯಾಗಿ 'ಬಾಹುಬಲಿ' ಸಿರೀಸ್ ವಿಶ್ವಮಟ್ಟದಲ್ಲಿಯೇ ಹಲವು ದಾಖಲೆಗಳನ್ನು ಬರೆದಿದೆ. ರಮ್ಯಾಕೃಷ್ಣ, ಸತ್ಯರಾಜ್, ಅನುಷ್ಕಾ ಶೆಟ್ಟಿ, ಪ್ರಭಾಸ್, ರಾಣಾ ದಗ್ಗುಬಾಟಿ ಮುಂತಾದವರ ನಟನೆಯನ್ನು ಇನ್ನಷ್ಟು ಹೊರತೆಗೆದು ಜನಪ್ರಿಯತೆ ನೀಡುವಲ್ಲಿ ಸಫಲವಾಗಿದೆ.

Also read-'ಬಾಹುಬಲಿ' ಸಿನಿಮಾ ರಾಣಾ ದಗ್ಗುಬಾಟಿ ಮತ್ತು ಮಿಹೀಕಾ ಬಜಾಜ್ ಬಗ್ಗೆ ಈ ವಿಷಯದಲ್ಲಿ ಹರಡಿದ್ದು ಮಾತ್ರ ಸುಳ್ಳು ಸುದ್ದಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ