ಆ್ಯಪ್ನಗರ

​ಮೊದಲ ದಿನ ಕಿರಿಕ್‌ ಮಾಡಿ ಮರುದಿನ ಕಣ್ಣೀರಿಟ್ಟ ಸಂಯುಕ್ತಾ

ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿರುವ ಕಿರಿಕ್‌ ಪಾರ್ಟಿ ಬೆಡಗಿ ಸಂಯುಕ್ತಾ ಹೆಗಡೆ, ಮೊದಲನೇ ದಿನ ಮನೆಯ ಸದಸ್ಯರಿಗೆ ಚಮಕ್‌ ಮೇಲೆ ಚಮಕ್‌ ನೀಡಿದ್ದು ಸುಳ್ಳಲ್ಲ.

Vijaya Karnataka Web 14 Dec 2017, 1:03 pm
ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿರುವ ಕಿರಿಕ್‌ ಪಾರ್ಟಿ ಬೆಡಗಿ ಸಂಯುಕ್ತಾ ಹೆಗಡೆ, ಮೊದಲನೇ ದಿನ ಮನೆಯ ಸದಸ್ಯರಿಗೆ ಚಮಕ್‌ ಮೇಲೆ ಚಮಕ್‌ ನೀಡಿದ್ದು ಸುಳ್ಳಲ್ಲ. ಗೆಳತಿ ಲಾಸ್ಯ ಜತೆಗೂಡಿ ಸಂಯುಕ್ತಾ ಮನೆ ಮಂದಿಯ ಪರ್ಸನಲ್‌ ವಿಚಾರಗಳನ್ನ ತುಂಬ ಕೆದಕಿದ್ದು ನಿಮಗೆಲ್ಲ ಗೊತ್ತೇ ಇದೆ. ಆದರೆ ಎರಡನೇ ದಿನ ಮಾತ್ರ ಗೆಳತಿ ಲಾಸ್ಯ ಜತೆ ವಾದಕ್ಕಿಳಿದು, ಭಾವುಕರಾಗಿ ಕಣ್ಣೀರಿಟ್ಟ ಪ್ರಸಂಗ ಎಲ್ಲರ ಗಮನ ಸೆಳೆಯಿತು.
Vijaya Karnataka Web sandalwood actress samyuktha argues with lasya
​ಮೊದಲ ದಿನ ಕಿರಿಕ್‌ ಮಾಡಿ ಮರುದಿನ ಕಣ್ಣೀರಿಟ್ಟ ಸಂಯುಕ್ತಾ


ಹೌದು, ಬುಧವಾರದ ಎಪಿಸೋಡ್‌ನಲ್ಲಿ ಸಂಯುಕ್ತ ಹಾಗೂ ಲಾಸ್ಯ ಬಾತ್‌ರೂಮ್‌ ಏರಿಯಾದಲ್ಲಿ ಪರಸ್ಪರ ವಾದಕ್ಕಿಳಿದು ಕಿರಿಕ್‌ ಮಾಡಿಕೊಂಡರು. ಸದಾ ಚುರುಕಾಗಿ, ಬೋಲ್ಡ್‌ ಮಾತುಗಳಿಂದ ಎಲ್ಲರ ಗಮನ ಸೆಳೆದಿರುವ ಸಂಯುಕ್ತಾ ಅದೆಷ್ಟು ಭಾವುಕರು ಎಂಬ ಅಂಶ ಬಿಗ್‌ಬಾಸ್‌ ಮನೆಯಲ್ಲಿ ಬೆಳಕಿಗೆ ಬಂದಿತು.

ಟಾಸ್ಕ್‌ ನಡೆಯುತ್ತಿದ್ದ ವೇಳೆಯಲ್ಲಿ ಮಧ್ಯೆ ಮಾತನಾಡುತ್ತಿದ್ದರು. ಯಾರಾದರೂ ತಪ್ಪು ಮಾಡಿದರೆ ಅದನ್ನು ತಕ್ಷಣದಲ್ಲೇ ತೋರಿಸುತ್ತಿದ್ದರು ಸಂಯುಕ್ತಾ. ಕಿರಿಕ್‌ ಬೆಡಗಿಯ ಇಂತಹ ನಡುವಳಿಕೆ ಮನೆಯ ಸದಸ್ಯರಿಗೆ ಕಿರಿಕಿರಿ ಉಂಟುಮಾಡುತ್ತಿತ್ತು. ಈ ವಿಷಯವನ್ನು ಸಂಯುಕ್ತಾ ಮುಂದೆ ಪ್ರಸ್ತಾಪಿಸಿದರು ಲಾಸ್ಯ, ಬುದ್ಧಿವಾದ ಹೇಳಲು ಮುಂದಾದರು.

ಆದರೆ ಸಂಯುಕ್ತಾ ಮಾತ್ರ ತಾನೇನು ತಪ್ಪು ಮಾಡಿಲ್ಲಾ ಎಂದು ವಾದಕ್ಕಿಳಿದರು. ಹೀಗೆ ಗೆಳತಿಯರ ನಡುವೆ ಮಾತು ಬೆಳೆಯುತ್ತಲೇ ಹೋಗಿ, ಕೊನೆಯಲ್ಲಿ ಸಂಯುಕ್ತಾ ಭಾವುಕರಾಗಿ ಕಣ್ಣೀರಿಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ