ಆ್ಯಪ್ನಗರ

ಸೀತಾ ವಲ್ಲಭ ಧಾರಾವಾಹಿ: ಆರ್ಯ ಮತ್ತು ಮೈಥಿಲಿ ಮದುವೆ ನಡೆಯೋದು ನಿಜಾನಾ?

'ಸೀತಾ ವಲ್ಲಭ' ಧಾರಾವಾಹಿಯಲ್ಲಿ ಆರ್ಯ ಮತ್ತು ಮೈಥಿಲಿ ಮದುವೆ ಶಾಸ್ತ್ರಗಳು ಆರಂಭವಾಗಿವೆ. ಆದರೆ ಈ ಜೋಡಿ ಮದುವೆಯಾಗುತ್ತಾ? ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಇದಕ್ಕೆ ಉತ್ತರ ಇಲ್ಲಿದೆ.

Vijaya Karnataka Web 9 Jul 2020, 3:03 pm
'ಸೀತಾ ವಲ್ಲಭ' ಧಾರಾವಾಹಿ ಅನೇಕ ಟ್ವಿಸ್ಟ್‌ಗಳಿಂದ ಜನರ ಮನಸ್ಸನ್ನು ಕದಿಯುತ್ತಲಿದೆ. ಈಗ ಈ ಧಾರಾವಾಹಿಯಲ್ಲಿ ಆರ್ಯ ಮತ್ತು ಮೈಥಿಲಿಯ ಮದುವೆ ಸಂಭ್ರಮ ನಡೆಯುತ್ತಲಿದೆ. ಇದರ ಬಗ್ಗೆಯೇ ಹಲವು ಎಪಿಸೋಡ್‌ಗಳು ಪ್ರಸಾರವಾಗಲಿವೆ.
Vijaya Karnataka Web seetha vallabha kannada serial written update 10 july 2020 arya marriage with maithili
ಸೀತಾ ವಲ್ಲಭ ಧಾರಾವಾಹಿ: ಆರ್ಯ ಮತ್ತು ಮೈಥಿಲಿ ಮದುವೆ ನಡೆಯೋದು ನಿಜಾನಾ?


ಎಲ್ಲರಿಗೂ ಅಂಕಿತಾ ಮೋಸ ಮಾಡಿದ್ದಾಳೆ, ಮೈಥಿಲಿ ಮನೆಬಿಟ್ಟು ಹೋಗುವುದಕ್ಕೆ ಅಂಕಿತಾಳೇ ಕಾರಣ ಎಂದು ಎಲ್ಲರಿಗೂ ತಿಳಿಯುತ್ತದೆ. ಅಷ್ಟೇ ಅಲ್ಲದೆ ಆರ್ಯನನ್ನು ಮೋಸದಿಂದ ಮದುವೆಯಾಗಿರೋದಾಗಿ ಅಂಕಿತಾ ನಂಬಿಸಿದ ಸತ್ಯ ಕೂಡ ಎಲ್ಲರಿಗೂ ತಿಳಿಯುತ್ತದೆ. ಎಲ್ಲರೂ ಸತ್ಯ ತಿಳಿದು ಅಂಕಿತಾ ಇಷ್ಟೊಂದೆಲ್ಲ ಕುತಂತ್ರಿ ಎಂದು ತಿಳಿದು ಬೇಸರ ಮಾಡಿಕೊಳ್ಳುತ್ತಾರೆ. ಆಮೇಲೆ ಎಲ್ಲರೂ ಮೈಥಿಲಿ ಹಾಗೂ ಆರ್ಯ ಮತ್ತೊಮ್ಮೆ ಮದುವೆಯಾಗಲಿ ಎಂದು ಬಯಸುತ್ತಾರೆ. ಹೀಗಾಗಿ ಮನೆಯವರ ಜೊತೆಯಲ್ಲಿ ಸರಳವಾಗಿ ಎಲ್ಲ ಶಾಸ್ತ್ರ, ಸಂಪ್ರದಾಯಗಳಂತೆ ಮೈಥಿಲಿ ಮತ್ತು ಆರ್ಯನ ಮದುವೆ ನಡೆಯುತ್ತಿದೆ.

ದೇವಕಿ ಬರೆದ ಪತ್ರವೊಂದು ಆರ್ಯ ಮತ್ತು ರಿಷಿ ಕೈಗೆ ಸಿಗುತ್ತದೆ. ಹೀಗಾಗಿ ಇದರ ಬಗ್ಗೆಯೇ ಇವರಿಬ್ಬರೂ ತಲೆ ಕೆಡಿಸಿಕೊಂಡಿದ್ದಾರೆ. ಈ ಪತ್ರದ ಬಗ್ಗೆ ಮೈಥಿಲಿ ಏನೋ ಸತ್ಯವನ್ನು ಮುಚ್ಚಿಡುತ್ತಿದ್ದಾಳೆ ಎಂದು ಆರ್ಯ ಅವಳ ಮೇಲೆ ಬೇಸರ ಮಾಡಿಕೊಂಡಿದ್ದಾನೆ. ಇದರ ಹಿಂದಿನ ಉದ್ದೇಶವನ್ನು ಆತ ಮೈಥಿಲಿ ಬಳಿ ಕೇಳಿದರೂ ಕೂಡ ಅವನಿಗೆ ಉತ್ತರ ಮಾತ್ರ ಸಿಗುವುದಿಲ್ಲ. ಈ ಲವ್‌ಸ್ಟೋರಿಗೆ ಮಧ್ಯೆ ಇನ್ನೊಂದು ಟ್ವಿಸ್ಟ್ ಇದೆ ಎಂದು ಧಾರಾವಾಹಿ ಸಂಚಿಕೆ ಸೂಚನೆ ನೀಡುತ್ತಲಿದೆ.

ALso Read-ಸೀತಾ ವಲ್ಲಭ' ಧಾರಾವಾಹಿ ಮೈಥಿಲಿ ರಿಯಲ್ ಲೈಫ್ ಸ್ಟೋರಿ ಇದು

ಆರ್ಯನ ತಂದೆ ದೇವಕಿ ಖುಷಿಯಾಗಿರಿಸುವ ಜವಾಬ್ದಾರಿಯನ್ನು ಮೈಥಿಲಿಗೆ ನೀಡಿದ್ದಾರೆ. ಹೀಗಾಗಿ ದೇವಕಿ ಕಷ್ಟ ಏನೆಂದು ತಿಳಿದು ಅವಳನ್ನು ಸದಾ ಸಂತೋಷವಾಗಿರುವಂತೆ ಮೈಥಿಲಿ ಮಾಡಬೇಕಿದೆ. ಅದರ ಜೊತೆಗೆ ದೇವಕಿ ಮಗಳು ಯಾರು ಎಂದು ಮೈಥಿಲಿ ಕಂಡುಹಿಡಿಯಬೇಕಿದೆ. ಒಂದುವೇಳೆ ಮೈಥಿಲಿಯೇ ದೇವಕಿ ಮಗಳು ಎಂದು ಗೊತ್ತಾದರೆ ಅಂಕಿತಾ, ಆರ್ಯನ ದೊಡ್ಡಮ್ಮ ಬಿಟ್ಟು ಉಳಿದವರೆಲ್ಲರೂ ತುಂಬ ಖುಷಿ ಪಡುತ್ತಾರೆ. ಆದರೆ ಈ ಖುಷಿ ಹಾಳು ಮಾಡಲು ಇವರ ಬಳಿ ಇನ್ನೊಂದು ಪ್ಲ್ಯಾನ್ ಇದ್ದೇ ಇರುತ್ತದೆ.

Also Read-'ರಹದಾರಿ' ಹಿಡಿದಳು 'ಸೀತಾ ವಲ್ಲಭ' ಧಾರಾವಾಹಿಯ ಮೈಥಿಲಿ ; ಕಾರಣ ಏನು?

ಆರ್ಯ ಮತ್ತು ಮೈಥಿಲಿ ಮದುವೆ ಚೆನ್ನಾಗಿ ನಡೆಯುವುದು ಎಂಬಂತೆ ಕಾಣುತ್ತಿದೆ. ಮದುವೆಯ ನಂತರದಲ್ಲಿ ಸ್ವಲ್ಪ ಸಮಸ್ಯೆಗಳು ಬರಬಹುದೇ ವಿನಃ ಈ ಬಾರಿ ಇವರ ಮದುವೆ ಅಂದುಕೊಂಡಂತೆ ನಡೆಯುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ