ಆ್ಯಪ್ನಗರ

ಸೇವಂತಿ ಧಾರಾವಾಹಿ: ಧಾರಾವಾಹಿ ಶೂಟಿಂಗ್ ಮಾಡೋದು ಎಷ್ಟು ಕಷ್ಟ ಅಂತ ತಿಳಿಸಿದ ನಟಿ ದೀಪಿಕಾ!

'ಕುಲವಧು' ಧಾರಾವಾಹಿಯ ಖ್ಯಾತಿಯ ನಟಿ ದೀಪಿಕಾ ಅವರು ಶೂಟಿಂಗ್ ಸಮಯದಲ್ಲಿ ತಂತ್ರಜ್ಞರು ಎಷ್ಟು ಕಷ್ಟಪಡುತ್ತಾರೆ ಎಂಬುದನ್ನು ಒಂದು ವಿಡಿಯೋ ಶೇರ್ ಮಾಡುವುದರ ಮೂಲಕ ತಿಳಿಸಿಕೊಟ್ಟಿದ್ದಾರೆ.

Vijaya Karnataka Web 9 Jul 2020, 9:11 pm
ನಟಿ ದೀಪಿಕಾ ಕನ್ನಡ ಕಿರುತೆರೆಯ ಜನಪ್ರಿಯ ನಟಿ. ಪ್ರಸ್ತುತ ಅವರು 'ಸೇವಂತಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಮೇಘನಾ ಖುಷಿ ನಟಿಸುತ್ತಿದ್ದ ಜಾಗವನ್ನು ಇವರು ತುಂಬುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಫೋಟೋ, ವಿಡಿಯೋಗಳನ್ನು ಶೇರ್ ಮಾಡುವ ದೀಪಿಕಾ ಈ ಬಾರಿ ಮುಖ್ಯವಾದ ವಿಷಯವೊಂದನ್ನು ತಿಳಿಸಿದ್ದಾರೆ.
Vijaya Karnataka Web sevanthi kannada serial fame deepika speaks about risk of shooting scene
ಸೇವಂತಿ ಧಾರಾವಾಹಿ: ಧಾರಾವಾಹಿ ಶೂಟಿಂಗ್ ಮಾಡೋದು ಎಷ್ಟು ಕಷ್ಟ ಅಂತ ತಿಳಿಸಿದ ನಟಿ ದೀಪಿಕಾ!


'ಸೇವಂತಿ' ಧಾರಾವಾಹಿಯಲ್ಲಿ ಗಂಡ ಅರ್ಜುನ್ ಜೊತೆ ಅವರು ಜಾಲಿ ಬೈಕ್ ರೈಡ್ ಹೋಗುತ್ತಿದ್ದಾರೆ. ಈ ದೃಶ್ಯವನ್ನು ಸೆರೆಹಿಡಿಯಲು ತಂತ್ರಜ್ಞರು ಎಷ್ಟು ಕಷ್ಟಪಡುತ್ತಾರೆ ಎಂದು ದೀಪಿಕಾ ಒಂದು ವಿಡಿಯೋ ಮೂಲಕ ತಿಳಿಸಿದ್ದಾರೆ. ಇದರಲ್ಲಿ ಕ್ಯಾಮರಾಮ್ಯಾನ್ ಅರ್ಜುನ್ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮುಂದೆ ಕೂತೂಕೊಂಡು ದೃಶ್ಯವನ್ನು ಸೆರೆಹಿಡಿದಿದ್ದಾರೆ. ನಟಿಯ ಎಕ್ಸ್‌ಪ್ರೆಶನ್ ಸೆರೆಹಿಡಿಯಲು ಕ್ಯಾಮರಾಮ್ಯಾನ್ ಹರಸಾಹಸ ಪಟ್ಟಿದ್ದಾರೆ. ಈ ವಿಡಿಯೋವನ್ನು ದೀಪಿಕಾ, ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದು, 'ನೋಡಿದಷ್ಟು ಶೂಟಿಂಗ್ ಸುಲಭವಿಲ್ಲ. ತೆರೆಯ ಹಿಂದೆ ತಂತ್ರಜ್ಞರು ಎಷ್ಟು ಕಷ್ಟಪಡುತ್ತಿದ್ದಾರೆ ಎಂದು ನೋಡಿ. ಇದು ಸೇವಂತಿ ಧಾರಾವಾಹಿ ಚಿತ್ರೀಕರಣ' ಎಂದು ಕ್ಯಾಪ್ಶನ್ ನೀಡಿದ್ದಾರೆ.

'ಸೇವಂತಿ' ಧಾರಾವಾಹಿ ತಂಡವನ್ನು ಇತ್ತೀಚೆಗಷ್ಟೇ ದೀಪಿಕಾ ಶೇರ್ ಮಾಡಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ಶಿಶಿರ್ ಲೀಡ್ ಪಾತ್ರದಲ್ಲಿ ನಟಿಸಿದ್ದರು. 'ಕುಲವಧು' ಧಾರಾವಾಹಿಯಲ್ಲಿ ಶಿಶಿರ್‌ಗೆ ಜೊತೆಯಾಗಿ ದೀಪಿಕಾ ನಟಿಸಿದ್ದರು. ಹೀಗಾಗಿ ಈ ಜೋಡಿ ಎರಡನೇ ಬಾರಿ 'ಸೇವಂತಿ' ಧಾರಾವಾಹಿಯಲ್ಲಿ ಮತ್ತೆ ಒಂದಾಗಿದೆ. 'ಕುಲವಧು' ಸೀರಿಯಲ್ ನಂತರದಲ್ಲಿ 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿ ದೀಪಿಕಾ ನಟಿಸುತ್ತಿದ್ದರು. ಲಾಕ್‌ಡೌನ್ ಎಫೆಕ್ಟ್‌ನಿಂದ ಈ ಸೀರಿಯಲ್ ತುಂಬ ಬೇಗ, ಇತ್ತೀಚೆಗಷ್ಟೇ ನಿಂತುಹೋಗಿದೆ.

Also Read-ಸೇವಂತಿ ಧಾರಾವಾಹಿ: ಮೇಘನಾ ಖುಷಿ ಜಾಗಕ್ಕೆ ಬಂದ 'ಕುಲವಧು' ಧಾರಾವಾಹಿ ನಟಿ ದೀಪಿಕಾ!

ಬಹಳ ದಿನಗಳಿಂದ ಪ್ರೀತಿಸುತ್ತಿದ್ದ ಕಿರುತೆರೆ ಹಾಗೂ ಸಿನಿಮಾ ನಟ ಆಕರ್ಷ್ ಅವರ ಜೊತೆ ನಟಿ ದೀಪಿಕಾ ವಿವಾಹ ಕಳೆದ ವರ್ಷ ನಡೆದಿದೆ. ಈ ಮದುವೆ ಸಾಕಷ್ಟು ಸಂಖ್ಯೆಯ ಸ್ಯಾಂಡಲ್‌ವುಡ್ ಕಲಾವಿದರು ಸಾಕ್ಷಿಯಾಗಿದ್ದರು. ಶ್ರೀನಾಥ್, ಶಿವರಾಜ್‌ಕುಮಾರ್ ಮುಂತಾದವರು ಈ ಜೋಡಿಗೆ ಶುಭಹಾರೈಸಿದ್ದರು.

Also Read-'ಸೇವಂತಿ'ಗೆ ಸಾಥ್ ನೀಡಲು ಬರುತ್ತಿದ್ದಾರೆ ನಟಿ ಪ್ರಿಯಾಂಕಾ ಉಪೇಂದ್ರ! ಈ ಧಾರಾವಾಹಿಯಲ್ಲಿ ಅವರ ಪಾತ್ರವೇನು?
View this post on Instagram Shooting s not tat easy as it seems to be...this s how our technicians work behind the scenes.... Making of sevanti...#sevanthi A post shared by Dhanya (deepika) (@dhanya_deepika_official) on Jul 8, 2020 at 6:47am PDT

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ