ಆ್ಯಪ್ನಗರ

ಕಿರು ತೆರೆಯಿಂದ ಹಿರಿತೆರೆಗೆ ಹಾರಿದ ಶಶಿ

ಕಿರುಚಿತ್ರ , ಡಾಕ್ಯೂಮೆಂಟರಿ, ಸೀರಿಯಲ್‌ಗಳಲ್ಲಿ ನಟಿಸುತ್ತಿದ್ದ ಶಶಿಮಿತ್ರ ಸಾಮ್ರಾಟ್‌ ಎಂಬ ನಟ ಈಗ ಹಿರಿತೆರೆಗೆ ಹಾರಿದ್ದಾರೆ.

Vijaya Karnataka 5 Apr 2019, 9:09 pm
ಕಿರು ಚಿತ್ರಗಳ ಮೂಲಕ ಗಮನ ಸೆಳೆದಿದ್ದ ಯುವ ನಟ ಶಶಿಮಿತ್ರ ಸಾಮ್ರಾಟ್‌ ಈಗ ಹಿರಿತೆರೆಯಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
Vijaya Karnataka Web shashi


ಶಾಲಿನಿ ಐಎಎಸ್‌, ಬಹುಭಾಷಾ ಚಿತ್ರ ಶಕಿಲಾದಲ್ಲಿ ಒಂದೊಂದು ಪಾತ್ರವನ್ನು ಅವರು ನಿರ್ವಹಿಸಿದ್ದಾರೆ. ಶಶಿ ನಟಿಸಿದ್ದ ವಧಾ ಕಿರು ಚಿತ್ರವು ನ್ಯೂಯಾರ್ಕ್‌ ಶಾರ್ಟ್‌ ಫಿಲಂ ಪೆಸ್ಟಿವಲ್‌ಗೆ ಆಯ್ಕೆಯಾಗಿತ್ತು. ಇವರ ಕರ್ಮ ಕಿರು ಚಿತ್ರ ಸಹ ಸಾಕಷ್ಟು ಅಂತಾರಾಷ್ಟ್ರೀಯ ಕಿರು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ.

ಸಾಕಷ್ಟು ಜಾಹಿರಾತುಗಳಲ್ಲಿಯು ಅವರು ಕಾಣಿಸಿಕೊಳ್ಳುತ್ತಿದ್ದು ಇದರ ಜತೆಯಲ್ಲಿ ತಮಿಳಿನ ಒಂದು ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ನಟನೆ ಜತೆಗೆ ಆಗಾಗ ಸಮಾಜ ಸೇವೆಯಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ.

ಶಶಿಮಿತ್ರ ಸಾಮ್ರಾಟ್‌ ಓದಿದ್ದು ಎಂಜಿನಿಯರಿಂಗ್‌ ಆದರೂ, ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡವರು. ಶಂಕರ್‌ನಾಗ್‌ ಅಭಿಮಾನಿ ಎಂದು ಹೇಳುವ ಇವರು ಚಿಕ್ಕ ವಯಸ್ಸಿನಿಂದಲೇ ಭಾಷಣ ಸ್ಫರ್ಧೆಗಳಲ್ಲ ರಾಷ್ಟ್ರ ಮಟ್ಟದಲ್ಲಿ ಮಿಂಚಿದವರು. ವಿದ್ಯಾರ್ಥಿಯಾಗಿದ್ದಾಗಲೇ ಇವರು, ಒಂದಷ್ಟು ಸ್ಪರ್ಧೆಗಳಿಗೆ ತೀರ್ಪುಗಾರರಾಗಿಯೂ ಕೆಲಸ ಮಾಡಿದ್ದಾರೆ. 2015ರಲ್ಲಿ ಸೋಷಿಯಲ ಮಿಡಿಯಾ ಎಂಬ ಸಾಕ್ಷ್ಯ ಚಿತ್ರಕ್ಕೆ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಶಶಿ ಮಿತ್ರ ಸಾಮ್ರಾಟ್‌ ಪಡೆದುಕೊಂಡಿದ್ದಾರೆ. ಅದಾದ ಮೇಲೆ 2017ರ ಕ್ಯಾಟರ್‌ ಪಿಲ್ಲರ್‌ ಅಂತಾರಾಷ್ಟ್ರೀಯ ಕಿರು ಚಿತ್ರೋತ್ಸವಕ್ಕೆ ಇವರು ನಿರ್ದೇಶನ ಮಾಡಿರುವ ಕರ್ಮ ಕಿರು ಚಿತ್ರ ಆಯ್ಕೆಯಾಗಿದ್ದು, ಇಲ್ಲಿಯೂ ಪ್ರಶಸ್ತಿ ಗಳಿಸುವ ಭರವಸೆ ಇವರಿಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ