ಆ್ಯಪ್ನಗರ

ರೈತ ಕುಟುಂಬಕ್ಕಾಗಿ ಕಬ್ಬಿನ ಹಾಲು ಮಾರಿದ ಶ್ರೀಮುರಳಿ

ಸದಾ ನಿಮ್ಮೊಂದಿಗೆ ಕನ್ನಡದಲ್ಲಿ ವಿನೂತನವಾಗಿ ಆರಂಭವಾದ ರಿಯಾಲಿಟಿ ಶೋ. ಹೊಸ ಛಾಪು ಮೂಡಿಸುವ ಮೂಲಕ ಈ ಕಾರ್ಯಕ್ರಮ ಮುಂದಿನ ಹಂತಕ್ಕೆ ಅಡಿಯಿಟ್ಟಿದೆ. ಈ ಶೋ ಮುನ್ನಡೆಸೋ ಹೊಣೆಹೊತ್ತ ಲಕ್ಷ್ಮಿ ಅವರು ತಮ್ಮ ನಿರೂಪಣೆಯ ಮೂಲಕ ವೀಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ.

Vijaya Karnataka Web 24 Jul 2018, 5:28 pm
ಸದಾ ನಿಮ್ಮೊಂದಿಗೆ ಕನ್ನಡದಲ್ಲಿ ವಿನೂತನವಾಗಿ ಆರಂಭವಾದ ರಿಯಾಲಿಟಿ ಶೋ. ಹೊಸ ಛಾಪು ಮೂಡಿಸುವ ಮೂಲಕ ಈ ಕಾರ್ಯಕ್ರಮ ಮುಂದಿನ ಹಂತಕ್ಕೆ ಅಡಿಯಿಟ್ಟಿದೆ. ಈ ಶೋ ಮುನ್ನಡೆಸೋ ಹೊಣೆಹೊತ್ತ ಲಕ್ಷ್ಮಿ ಅವರು ತಮ್ಮ ನಿರೂಪಣೆಯ ಮೂಲಕ ವೀಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ.
Vijaya Karnataka Web sri-murali


ಈ ಶೋ ಮುಖ್ಯ ಉದ್ದೇಶದಂತೆ ಸಂಕಷ್ಟದಲ್ಲಿರೋ ಕುಟುಂಬಗಳಿಗೆ ಸಾಂತ್ವನದ ಭರವಸೆ ಕೊಡಲು ಉದಯ ಟಿವಿ ಜೊತೆಗೆ ಸ್ಯಾಂಡವುಡ್ ಸೆಲೆಬ್ರಿಟಿಗಳು ಕೈ ಜೋಡಿಸಿರುವುದನ್ನು ಇಲ್ಲಿ ಕಾಣಬಹುದು. ಈ ವಾರದ ಸಂಚಿಕೆಯಲ್ಲಿ ದೇಶಕ್ಕೆ ಅನ್ನವನ್ನು ಕೊಡುವ ನಮ್ಮ ರೈತನ ಕುಟುಂಬ ಒಂದಕ್ಕೆ ಆಸರೆಯಾಗಲು ಉಗ್ರಂ ಖ್ಯಾತಿಯ ಶ್ರೀ ಮುರಳಿ ಸಾಮಾನ್ಯ ಜನರಂತೆ ಕೆಲಸ ಮಾಡಲು ಮುಂದಾಗಿದ್ದಾರೆ.

ಬೆಳೆಗಾಗಿ ಮಾಡಿದಂತಹ ಸಾಲಬಾಧೆಯಿಂದ ಮಾನಸಿಕ, ದೈಹಿಕವಾಗಿ ಕುಗ್ಗಿ, ಮನೆಗೆ ಆಧಾರ ಸ್ತಂಭವಾಗಿದ್ದ ಯಜಮಾನ ಆತ್ಮಹತ್ಯೆ ಮಾಡಿಕೊಂಡಾಗ ಅವರನ್ನೇ ನಂಬಿಕೊಂಡಿದ್ದ ತಾಯಿ, ಮಡದಿ ಮೂರು ಮುದ್ದು ಪುಟ್ಟ ಹೆಣ್ಣುಮಕ್ಕಳು ಕಂಗಾಲಾಗಿದ್ದಾರೆ. ಮನೆಯ ನಿರ್ವಹಣೆಯ ಜೊತೆ ಜೊತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೆ ತುತ್ತು ಅನ್ನಕ್ಕೂ ಪರಿತಪಿಸುತ್ತಿರುವ ಈ ರೈತ ಕುಟುಂಬಕ್ಕೆ ಸಹಾಯ ಮಾಡಲು ತಾನು ರೈತನಂತೆಯೇ ದುಡಿಯಲು ರೈತರೇ ಬೆಳೆದ ಕಬ್ಬಿನಿಂದ ಹಾಲನ್ನು ಮಾರಲು ನಿರ್ಧರಿಸಿ ಶ್ರೀಮುರಳಿ ಕಬ್ಬಿನಹಾಲನ್ನು ಮಾರಲು ಮುಂದಾಗಿದ್ದಾರೆ.

ಇದೇ ಮೊದಲ ಬಾರಿಗೆ ಈ ರೀತಿಯ ಕೆಲಸ ಮಾಡಿದ ರೋರಿಂಗ್ ಸ್ಟಾರ್, ತಮ್ಮ ಜೀವನದ ಅದೆಷ್ಟೋ ವಿಷಯಗಳನ್ನ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಒಂದುದಿನ ಕಬ್ಬಿನ ಹಾಲನ್ನು ಮಾರಿದಂತಹ ರೋರಿಂಗ್ ಸ್ಟಾರ್ ಎಷ್ಟು ಸಂಪಾದನೆ ಮಾಡಿದ್ದಾರೆ? ಕಣ್ಣೀರಿನಿಂದ ಕಂಗಾಲಾಗಿದ್ದ ರೈತ ಕುಟುಂಬಕ್ಕೆ ಎಷ್ಟು ಹಣವನ್ನು ಸ್ಟಾರ್ ಸಂಪಾದನೆ ಮಾಡಿದ್ದಾರೆ ಎಂಬ ಎಲ್ಲ ವಿಷಯವನ್ನು ಭಾನುವಾರ (ಜು) ರಾತ್ರಿ 9ಕ್ಕೆ ವೀಕ್ಷಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ