ಆ್ಯಪ್ನಗರ

ಕಿರುತೆರೆಯಲ್ಲಿ ಮೊಟ್ಟ ಮೊದಲ ಸಲ ಕಿಚ್ಚ ಸುದೀಪ್ ಲೇಟೆಸ್ಟ್ ಸಿನಿಮಾ

ಸುದೀಪ್‌ ಹಾಗೂ ಸುನೀಲ್‌ ಶೆಟ್ಟಿ ಕಾಂಬಿನೇಷನ್‌ ತೆರೆ ಮೇಲೆ ನೋಡುವುದೇ ಚಂದ. ಸುದೀಪ್‌ ಹಾಗೂ ಬಾಲಿವುಡ್‌ ನಟಿ ಆಕಾಂಕ್ಷ ಸಿಂಗ್‌ ರೊಮ್ಯಾನ್ಸ್‌ ಕಣ್ಣಿಗೆ ತಂಪು ಮಾಡಲಿದೆ. ಕಬೀರ್‌ ದುಹಾನ್‌ ಸಿಂಗ್‌, ಶರತ್‌ ಲೋಹಿತಾಶ್ವ, ಕಾಮಿಡಿ ಕಿಲಾಡಿ ಖ್ಯಾತಿಯ ನಟ ಅಪ್ಪಣ್ಣ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ. ಅರ್ಜುನ್‌ ಜನ್ಯ ಹಾಡುಗಳು ಚಿತ್ರದ ಪ್ಲಸ್‌ ಪಾಯಿಂಟ್‌.

Sharanu Hullur | Vijaya Karnataka Web 11 Jan 2020, 4:47 pm
ಸುದೀಪ್‌ ನಟನೆಯ 'ಪೈಲ್ವಾನ್‌' ಸಿನಿಮಾ ಇದೇ ಭಾನುವಾರ (ಜ.12) ಸಂಜೆ 7ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಕಿಚ್ಚ ಸುದೀಪ್‌ ವೃತ್ತಿ ಬದುಕಿನ ವಿಶೇಷ ಸಿನಿಮಾ ಇದಾಗಿದ್ದು, ಸಂಕ್ರಾಂತಿ ಹಬ್ಬವನ್ನು ಈ ಚಿತ್ರ ಮತ್ತಷ್ಟು ರಂಗೇರಿಸಲಿದೆ ಎಂದಿದ್ದಾರೆ ವಾಹಿನಿಯ ಬಿಸ್ನೆಸ್‌ ಹೆಡ್‌ ರಾಘವೇಂದ್ರ ಹುಣಸೂರು.
Vijaya Karnataka Web ಪೈಲ್ವಾನ್


'ಪೈಲ್ವಾನ್‌ ನಾಲ್ಕು ಭಾಷೆಗಳಲ್ಲಿ ತೆರೆಕಂಡು, ಭರ್ಜರಿ ಯಶಸ್ಸು ಕಂಡಿದೆ. ಈಗಾಗಲೇ ಥಿಯೇಟರ್‌ನಲ್ಲಿಈ ಚಿತ್ರ ರಿಲೀಸ್‌ ಆಗಿದ್ದರೂ, ನೆಚ್ಚಿನ ನಟನ ಚಿತ್ರವನ್ನು ನೋಡಲು ಕಿಚ್ಚನ ಅಭಿಮಾನಿಗಳು ಕಾತುರರಾಗಿದ್ದಾರೆ. ಕನ್ನಡದ ಮೊಟ್ಟ ಮೊದಲ ಬಿಗ್‌ ಬಜೆಟ್‌ ಸ್ಪೋರ್ಟ್ಸ್ ಡ್ರಾಮಾ ಆಗಿರೋ ಸಿನಿಮಾವನ್ನು ಚಿತ್ರರಸಿಕರು ಮತ್ತೊಮ್ಮೆ ಟಿವಿಯಲ್ಲಿ ಕುಟುಂಬ ಸಮೇತರಾಗಿ ನೋಡಲು ಉತ್ಸುಕರಾಗಿದ್ದಾರೆ. ಎಮೋಷನ್‌ ಹಾಗೂ ರೊಮ್ಯಾನ್ಸ್‌ನಿಂದ ಕೂಡಿರೋ ಚಿತ್ರವನ್ನು ಮನೆ ಮಂದಿಯೆಲ್ಲಾ ಕೂತು ನೋಡಿ ಎಂಜಾಯ್‌ ಮಾಡಬಹುದು' ಎಂದಿದೆ ವಾಹಿನಿ.

ಗಜಕೇಸರಿ, ಹೆಬ್ಬುಲಿ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಕೃಷ್ಣ ಅವರು, ಮೊದಲ ಬಾರಿಗೆ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಈ ಸಿನಿಮಾ ಮೂಲಕ ಬಾಲಿವುಡ್‌ನ ಖ್ಯಾತ ನಟ ಸುನೀಲ್‌ ಶೆಟ್ಟಿ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸುದೀಪ್‌ ಹಾಗೂ ಸುನೀಲ್‌ ಶೆಟ್ಟಿ ಕಾಂಬಿನೇಷನ್‌ ತೆರೆ ಮೇಲೆ ನೋಡುವುದೇ ಚಂದ.
ಸುದೀಪ್‌ ಹಾಗೂ ಬಾಲಿವುಡ್‌ ನಟಿ ಆಕಾಂಕ್ಷ ಸಿಂಗ್‌ ರೊಮ್ಯಾನ್ಸ್‌ ಕಣ್ಣಿಗೆ ತಂಪು ಮಾಡಲಿದೆ. ಕಬೀರ್‌ ದುಹಾನ್‌ ಸಿಂಗ್‌, ಶರತ್‌ ಲೋಹಿತಾಶ್ವ, ಕಾಮಿಡಿ ಕಿಲಾಡಿ ಖ್ಯಾತಿಯ ನಟ ಅಪ್ಪಣ್ಣ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ. ಅರ್ಜುನ್‌ ಜನ್ಯ ಹಾಡುಗಳು ಚಿತ್ರದ ಪ್ಲಸ್‌ ಪಾಯಿಂಟ್‌.

ದೇಸಿತನ ಮೆರೆದು, ಮೆರೆಸುವ ಅಪ್ಪಟ ಸಿನಿಮಾ: ಪೈಲ್ವಾನ್ ಚಿತ್ರ ವಿಮರ್ಶೆ

ದಾಖಲೆ ನಿರ್ಮಿಸಿದ ಚಿತ್ರಗಳು:
ಹೊಚ್ಚ ಹೊಸ ಸಿನಿಮಾಗಳನ್ನು ಜನರಿಗೆ ತಲುಪಿಸುವಲ್ಲಿ ಜೀ ಕನ್ನಡ ವಾಹಿನಿ ಯಶಸ್ವಿ ಆಗಿದೆ. ಚಲನಚಿತ್ರಗಳ ಟಿವಿ ಪ್ರಸಾರದಲ್ಲಿ ಎರಡು ಮಹತ್ವದ ದಾಖಲೆಗಳನ್ನು ವಾಹಿನಿ ಮಾಡಿದೆ. ಇಲ್ಲಿಯವರೆಗೂ ಕನ್ನಡದ ಯಾವ ಸಿನಿಮಾನೂ ಗಳಿಸದ ಗರಿಷ್ಠ ಟಿವಿಆರ್‌ (21 ಟಿವಿಆರ್‌) ಪುನೀತ್‌ ನಟನೆಯ 'ದೊಡ್ಮನೆ ಹುಡುಗ' ಸಿನಿಮಾಗೆ ಸಿಕ್ಕಿದೆ. ಇತ್ತೀಚೆಗಷ್ಟೇ ತೆರೆಕಂಡ ದರ್ಶನ್‌ ಅಭಿನಯದ 'ಕುರುಕ್ಷೇತ್ರ' ಚಿತ್ರ ಕೂಡ 19.5 ಟಿವಿಆರ್‌ನ ಜೊತೆಗೆ ಹೊಸ ದಾಖಲೆ ಬರೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ