ಆ್ಯಪ್ನಗರ

‘ನಾಗಮಂಡಲ’ ಸಿನಿಮಾದ ದೃಶ್ಯ ನೆನಪಿಸಿದ Tripura Sundari Serial

Tripura Sundari Serial Today Episode: ‘ತ್ರಿಪುರ ಸುಂದರಿ’ ಸೀರಿಯಲ್‌ನಲ್ಲಿ ಹುತ್ತಕ್ಕೆ ಕೈಹಾಕುವ ಆಮ್ರಪಾಲಿ ಹಾವನ್ನ ಹಿಡಿದು ನಿಲ್ಲುತ್ತಾಳೆ. ಈ ದೃಶ್ಯವನ್ನ ಕಂಡರೆ ನಿಮಗೆ ಸೂಪರ್ ಹಿಟ್ ಸಿನಿಮಾ ‘ನಾಗಮಂಡಲ’ ನೆನಪಿಗೆ ಬರಲ್ವಾ? ‘ನಾಗಮಂಡಲ’ ಸಿನಿಮಾದ ಖ್ಯಾತ ದೃಶ್ಯವನ್ನ ‘ತ್ರಿಪುರ ಸುಂದರಿ’ ಸೀರಿಯಲ್‌ನಲ್ಲಿ ರೀಕ್ರಿಯೇಟ್ ಮಾಡಲಾಗಿದೆ.

Authored byಹರ್ಷಿತಾ ಎನ್ | Vijaya Karnataka Web 1 Sep 2023, 1:50 am

ಹೈಲೈಟ್ಸ್‌:

  • ‘ತ್ರಿಪುರ ಸುಂದರಿ’ ಸೀರಿಯಲ್‌ನಲ್ಲಿ ‘ನಾಗಮಂಡಲ’ ದೃಶ್ಯ
  • ಹುತ್ತಕ್ಕೆ ಕೈಹಾಕಿ ಹಾವನ್ನು ಹಿಡಿದು ನಿಲ್ಲುವ ಆಮ್ರಪಾಲಿ
  • ‘ನಾಗಮಂಡಲ’ ಚಿತ್ರದ ದೃಶ್ಯವನ್ನ ಮರುಸೃಷ್ಟಿಸಿದ ‘ತ್ರಿಪುರ ಸುಂದರಿ’ ಸೀರಿಯಲ್

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web tripura sundari serial recreates nagamandala movie s epic scene
‘ನಾಗಮಂಡಲ’ ಸಿನಿಮಾದ ದೃಶ್ಯ ನೆನಪಿಸಿದ Tripura Sundari Serial
1997ರಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾ ‘ನಾಗಮಂಡಲ’. ಟಿ ಎಸ್‌ ನಾಗಾಭರಣ ನಿರ್ದೇಶನದ ‘ನಾಗಮಂಡಲ’ ಸಿನಿಮಾದಲ್ಲಿ ಪ್ರಕಾಶ್ ರಾಜ್, ವಿಜಯಲಕ್ಷ್ಮೀ, ಮಂಡ್ಯ ರಮೇಶ್, ಬಿ ಜಯಶ್ರೀ ಮುಂತಾದವರು ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ಕಥಾನಾಯಕಿ ರಾಣಿ ಹುತ್ತಕ್ಕೆ ಕೈಹಾಕಿ ಹಾವು ಹಿಡಿದು ನಿಲ್ಲುವ ದೃಶ್ಯ ಹೈಲೈಟ್ ಆಗಿತ್ತು. ವಿಜಯಲಕ್ಷ್ಮೀ ಅವರ ಅಭಿನಯ ವ್ಯಾಪಕ ಮೆಚ್ಚುಗೆಗೂ ಪಾತ್ರವಾಗಿತ್ತು. ಈಗ ‘ನಾಗಮಂಡಲ’ ಸಿನಿಮಾ ಹಾಗೂ ಹಾವಿನ ದೃಶ್ಯದ ಬಗ್ಗೆ ನಾವು ಪೀಠಿಕೆ ಹಾಕುತ್ತಿರುವುದಕ್ಕೆ ಕಾರಣ ‘ತ್ರಿಪುರ ಸುಂದರಿ’ ಧಾರಾವಾಹಿ.!
‘ತ್ರಿಪುರ ಸುಂದರಿ’ ಧಾರಾವಾಹಿಯಲ್ಲೂ ಇಂಥದ್ದೇ ಸನ್ನಿವೇಶ ಸೃಷ್ಟಿಯಾಗಿದೆ. ‘ನಾಗಮಂಡಲ’ ಸಿನಿಮಾದ ಹಾವಿನ ದೃಶ್ಯವನ್ನ ‘ತ್ರಿಪುರ ಸುಂದರಿ’ ಸೀರಿಯಲ್‌ನಲ್ಲಿ ಮರುಸೃಷ್ಟಿಸಲಾಗಿದೆ.


ಆಮ್ರಪಾಲಿ ಮೇಲೆ ಅಪವಾದ

ದೇವಿಯ ಒಡವೆಗಳನ್ನು ಕದ್ದ ಆರೋಪ ಆಮ್ರಪಾಲಿ ಮೇಲೆ ಬಂದಿದೆ. ಒಡವೆಗಳನ್ನ ಆಮ್ರಪಾಲಿ ಕದ್ದಿಲ್ಲ. ಇದೆಲ್ಲಾ ಈಶ್ವರಿಯ ಕುತಂತ್ರ. ಆದರೆ, ಅರಸು ಕುಟುಂಬಸ್ಥರಿಗೆ ಈಶ್ವರಿಯ ಕುತಂತ್ರದ ಬಗ್ಗೆ ಗೊತ್ತಿಲ್ಲ. ದೇವಿಯ ಒಡವೆ ಕಳ್ಳತನವಾಗಿರೋದ್ರಿಂದ ಪಂಚಾಯತಿ ನಡೆಯುತ್ತಿದೆ. ಆಮ್ರಪಾಲಿ ಕಳ್ಳಿ ಅಲ್ಲ ಎಂಬು ಸಾಬೀತಾಗಬೇಕಾದರೆ ಹುತ್ತಕ್ಕೆ ಕೈಹಾಕಿ ಹಾವನ್ನು ಹಿಡಿದು ನಿಲ್ಲಬೇಕು. ಆಮ್ರಪಾಲಿ ಕದ್ದಿಲ್ಲ ಎಂದಾದರೆ ಹಾವು ಕಚ್ಚುವುದಿಲ್ಲ. ಈ ಆಚರಣೆಗೆ ಒಪ್ಪಿಕೊಳ್ಳುವ ಆಮ್ರಪಾಲಿ ನಾಗರಾಜನಿಗೆ ಭಕ್ತಿಯಿಂದ ನಮಿಸಿ, ಹುತ್ತಕ್ಕೆ ಕೈಹಾಕಿ, ಹಾವನ್ನು ಹಿಡಿದು ನಿಲ್ಲುತ್ತಾಳೆ. ಆಮ್ರಪಾಲಿಯ ಕೈಯಲ್ಲಿ ಹಾವನ್ನ ಕಂಡು ನೆರೆದಿದ್ದ ಜನರಿಗೆಲ್ಲಾ ಆಶ್ಚರ್ಯವಾಗುತ್ತದೆ.

Tripura Sundari ಧಾರಾವಾಹಿಯಿಂದ ಸ್ಪರ್ಶ ರೇಖಾ ಔಟ್? ಅದೇ ಜಾಗಕ್ಕೆ ಬರಲಿರುವ ನಟಿ ಇವರೇನಾ?
ಇತ್ತ ದೇವಿಯ ಒಡವೆಗಳು ಇರುವ ಬ್ಯಾಗ್ ಹೊತ್ತು ತರುತ್ತಿರುವ ಯುಕ್ತಿಗೆ ಪದೇ ಪದೇ ಹಾವು ಕಾಣಿಸಿಕೊಳ್ಳುತ್ತಿದೆ. ಆಮ್ರಪಾಲಿಗೆ ಕೆಡುಕು ಮಾಡಲು ಹೋದ ಈಶ್ವರಿ ಮತ್ತು ಪುತ್ರಿ ಯುಕ್ತಿಗೆ ನಾಗರಾಜನೇ ತಕ್ಕ ಪಾಠ ಕಲಿಸುತ್ತಾನಾ ಎಂಬುದು ಕಾದುನೋಡಬೇಕಿದೆ. ಆದರೆ, ಸದ್ಯಕ್ಕೆ ‘ತ್ರಿಪುರ ಸುಂದರಿ’ ಧಾರಾವಾಹಿಯ ಸಂಚಿಕೆ ನೋಡಿದ ಸಿನಿಪ್ರಿಯರಿಗೆ ‘ನಾಗಮಂಡಲ’ ಸಿನಿಮಾವಂತೂ ಥಟ್ ಅಂತ ನೆನಪಾಗಿದೆ.

ಬೆಂಗಾಲಿ ಭಾಷೆಗೆ ಡಬ್ ಆದ ಕನ್ನಡದ Tripura Sundari ಧಾರಾವಾಹಿ

‘ತ್ರಿಪುರ ಸುಂದರಿ’ ಧಾರಾವಾಹಿಯ ಕಥೆ

ಗಂಧರ್ವ ಲೋಕದ ರಾಜಕುಮಾರನನ್ನ ಹುಡುಕಿಕೊಂಡು ಗಂಧರ್ವ ಕನ್ಯೆ ಆಮ್ರಪಾಲಿ ಭೂಲೋಕಕ್ಕೆ ಬರುತ್ತಾಳೆ. ದುಷ್ಟ ಶಕ್ತಿಯಿಂದ ಗಂಧರ್ವ ಲೋಕವನ್ನ ಕಾಪಾಡಲು ರಾಜಕುಮಾರನಿಂದ ಮಾತ್ರ ಸಾಧ್ಯ. ರಾಜಕುಮಾರ ಯಾರು ಎಂಬುದನ್ನ ಕಂಡುಹಿಡಿಯಲು ಆಮ್ರಪಾಲಿ ಬಳಿಯಿರುವುದು ಸೂರ್ಯನ ಪದಕ ಮಾತ್ರ. ಭೂಲೋಕದಲ್ಲಿ ಸೂರ್ಯನ ಪದಕವನ್ನ ಕಳೆದುಕೊಂಡ ಆಮ್ರಪಾಲಿ ಹುಡುಕಾಟ ನಡೆಸುತ್ತಿದ್ದಾಳೆ. ಅರಸು ಮನೆಯಲ್ಲಿ ಆಶ್ರಯ ಪಡೆದಿರುವ ಆಮ್ರಪಾಲಿ, ರಾಜಕುಮಾರನನ್ನ ಹುಡುಕಲು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾಳೆ. ಗಂಧರ್ವ ಲೋಕದ ರಾಜಕುಮಾರ ಎಂದು ಗೊತ್ತಿಲ್ಲದೆ ಪುಟಾಣಿ ಪ್ರದ್ಯುಮ್ನನನ್ನ ಅರಸು ಕುಟುಂಬದ ಸೊಸೆ ದೇವಯಾನಿ ಸಾಕುತ್ತಾಳೆ. ಹೆತ್ತ ಮಗನಂತೆ ಪ್ರದ್ಯುಮ್ನನನ್ನ ಪ್ರೀತಿಯಿಂದ ದೇವಯಾನಿ ಬೆಳೆಸಿದ್ದಾಳೆ. ಪ್ರದ್ಯುಮ್ನನ ಭೂಲೋಕದ ಋಣ ಮುಗಿಯಿತು ಎಂದು ತಿಳಿದು ದೇವಯಾನಿ ಮತ್ತು ಅಜ್ಜಿ ಮಾಯಿ ಆತಂಕಗೊಂಡಿದ್ದಾರೆ.

‘ತ್ರಿಪುರ ಸುಂದರಿ’ ದಿವ್ಯಾ ಸುರೇಶ್‌ಗೆ ಮುತ್ತು ಕೊಟ್ಟ ಈ ವ್ಯಕ್ತಿ ಯಾರು? ಫೋಟೋ ವೈರಲ್
ಪ್ರದ್ಯುಮ್ನನೇ ರಾಜಕುಮಾರ ಎಂದು ಆಮ್ರಪಾಲಿಗೆ ತಿಳಿದಿಲ್ಲ. ಆಮ್ರಪಾಲಿ ಹುಡುಕುತ್ತಿರುವ ಗಂಧರ್ವ ಲೋಕದ ರಾಜಕುಮಾರ ಪ್ರದ್ಯುಮ್ನನೇ ಅಂತ ದೇವಯಾನಿಗೂ ಗೊತ್ತಿಲ್ಲ. ಇದನ್ನೆಲ್ಲಾ ತಿಳಿದಿರುವ ಈಶ್ವರಿಯ ಆಟವೇ ಬೇರೆ. ಪ್ರದ್ಯಮ್ನನಿಗೆ ತನ್ನ ಮಗಳು ಯುಕ್ತಿಯನ್ನ ಕೊಟ್ಟು ಮದುವೆ ಮಾಡುವ ತವಕ. ಅದಕ್ಕೆ ಅಡ್ಡಲಾಗಿರುವ ಆಮ್ರಪಾಲಿ ವಿರುದ್ಧ ಈಶ್ವರಿ ಸಂಚು ರೂಪಿಸಿದ್ದಾಳೆ. ದೇವಿಯ ಒಡವೆಗಳ ಕಳ್ಳತನದ ಆರೋಪ ಹೊರಿಸಿದ್ದಾಳೆ. ನಾಗರಾಜನ ಕೃಪೆಯಿಂದ ಆಮ್ರಪಾಲಿ ನಿರ್ದೋಷಿಯಾಗಿದ್ದಾಳೆ. ಆದರೆ, ತಾನೇ ಬೀಸಿದ ಬಲೆಗೆ ಈಗ ಈಶ್ವರಿಯೇ ಸಿಲುಕುತ್ತಾಳಾ?

Kantara: ‘ತ್ರಿಪುರ ಸುಂದರಿ’ ಧಾರಾವಾಹಿಯಲ್ಲಿ ನಾಗದೇವನಾಗಿ ಬಂದ ‘ಕಾಂತಾರ’ ಚಿತ್ರದ ದೈವನರ್ತಕ ಗುರುವ

ಪಾತ್ರಧಾರಿಗಳ ಪರಿಚಯ

‘ತ್ರಿಪುರ ಸುಂದರಿ’ ಧಾರಾವಾಹಿಯಲ್ಲಿ ಆಮ್ರಪಾಲಿ ಆಗಿ ದಿವ್ಯಾ ಸುರೇಶ್, ಪ್ರದ್ಯುಮ್ನ ಆಗಿ ಅಭಿನವ್ ವಿಶ್ವನಾಥನ್, ದೇವಯಾನಿ ಆಗಿ ಸಂಗೀತಾ ಅನಿಲ್, ಈಶ್ವರಿ ಆಗಿ ಅನನ್ಯ ಕಾಸರವಳ್ಳಿ ನಟಿಸುತ್ತಿದ್ದಾರೆ.
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ