ಆ್ಯಪ್ನಗರ

ವೈದ್ಯೆಯಾಗಬೇಕೆಂಬ ಅನು ಕನಸು ನೆರವೇರುತ್ತಾ? ಬದಲಾದ ರೂಪದಲ್ಲಿ ನಾನು ನನ್ನ ಕನಸು

ನಾನು ನನ್ನ ಕನಸು ಧಾರಾವಾಹಿ ಈ ಹೊಸ ರೂಪದಲ್ಲಿ ಕಿರುತೆರೆ ವೀಕ್ಷಕರ ಮುಂದೆ ಬರಲು ಅಣಿಯಾಗಿದೆ. ವೈದ್ಯೆಯಾಗಬೇಕು ಎಂದು ಕನಸು ಹೊತ್ತ ಅನು ಬೆಂಗಳೂರಿಗೆ ಬರುತ್ತಾಳೆ. ಆದರೆ ಅವರ ಕನಸಿಗೆ ನಾನಾ ವಿಘ್ನಗಳು ಎದುರಾಗುತ್ತವೆ.

Vijaya Karnataka Web 5 Oct 2019, 12:22 pm
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ "ನಾನು ನನ್ನ ಕನಸು" ಬದಲಾದ ರೂಪದಲ್ಲಿ ಕಾಣಿಸಲು ಸಜ್ಜಾಗುತ್ತಿದೆ. ಕಥೆಯಲ್ಲಿ ಇರುವ ಮಕ್ಕಳು ದೊಡ್ಡವರಾಗುತ್ತಿದ್ದಾರೆ, ಆದರೆ ಅವರು ಕಂಡ ಕನಸು ಬದಲಾಗಿಲ್ಲ. ಇದೇ ಸೊಮವಾರದಿಂದ ಶನಿವಾರದವರೆಗೆ ರಾತ್ರಿ 8ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗುತ್ತದೆ.
Vijaya Karnataka Web naanu-nanna-kanasu


ಕಥೆಯ ನಾಯಕಿ ಅನು ಈಗ ದೊಡ್ಡವಳಾಗಿ ತನ್ನ ಅಮ್ಮನ ಮನೆಯನ್ನು ಬಿಟ್ಟು ಡಾಕ್ಟರ್ ಆಗುವ ಕನಸು ಹೊತ್ತು ಬೆಂಗಳೂರಿಗೆ ಬರುತ್ತಾಳೆ. ಆದರೆ ಅವಳು ಕನಸು ದೊಡ್ಡ ನಗರದಲ್ಲಿ ನೊಚ್ಚು ನೂರಾಗುತ್ತದೆ. ಇದಕ್ಕೆ ಕಾರಣ ತಾನು ಕಳೆದುಕೊಂಡ ತನ್ನ ಸ್ನೇಹಿತ ಕಾರ್ತಿಕ್ ಮತ್ತು ಕೆಂಡ ಕಾರುವ ದುಷ್ಮನ್ ರಾಕಿ. ನಿಂತೇ ಹೋಗತ್ತೆ ಚುಕ್ಕಿ ಎಡವಟ್ಟು, ಓಂಕಾರ್ ಸಿಟ್ಟು; ನಿಜಕ್ಕೂ ಮುಗಿಯಲಿದೆಯಾ ರಾಜಾ ರಾಣಿ ?

ರಾಕಿ ಮತ್ತು ಕಾರ್ತಿಕ್ ಅವರ ಕದನ ಅನು ಬಾಳಿನಲ್ಲಿ ಕಾಳ್ಗಿಚ್ಚು ತರುತ್ತದೆ. ಈ ಕಾಳ್ಗಿಚ್ಚಿಗೆ ತನ್ನ ಕನಸು ಸಿಲುಕಿ ಸಾವನ್ನಪ್ಪುತ್ತದಾ ಅಥವಾ ಅನು ಇವೆಲ್ಲವನ್ನೂ ಮೀರಿ ತನ್ನ ಅಪ್ಪನ ಕನಸನ್ನು ಈಡೇರಿಸುವುದರಲ್ಲಿ ಸಫಲಳಾಗುತ್ತಾಳಾ? ಎನ್ನುವುದೇ "ನಾನು ನನ್ನ ಕನಸು". ಕನ್ನಡದಲ್ಲಿ ಇತಿಹಾಸ ನಿರ್ಮಿಸಿದ ವಿಷ್ಣುವರ್ಧನ್ ಅಳಿಯ ಅನಿರುದ್ಧ್

ಈ ಹೊಸ ಕಥೆಯು ತನ್ನೊಂದಿಗೆ ಹೆಸರಾಂತ ಯುವ ಕಲಾವಿದರಾದ, ಚೇತನ್ ಚಂದ್ರ - ಹಲವಾರು ಟಿವಿ ಮತ್ತು ಫಿಲಂಗಳಲ್ಲಿ ನಟಿಸಿದ್ದಾರೆ, ಇನ್ನು ಹೆಸರಾಂತ ಕಲಾವಿದ ಅಜಯ್ ರಾವ್ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇವರ ಜೊತೆಗೆ ಸ್ಪಂದನ ಎಂಬ ಮೈಸೂರಿನ ಬೆಡಗಿ ಅನು ಪಾತ್ರಕ್ಕೆ ಅಮೋಘವಾಗಿ ಜೀವ ತುಂಬಿದ್ದಾರೆ. ಈ ಹೊಸ ಚಿಗುರಿನ ಜೊತೆಗೆ ಹಳೆ ಬೇರುಗಳಾದ ನಿಶಿತಾ ಗೌಡ ಮತ್ತು ಆರತಿ ಕುಲ್ಕರ್ಣಿ ಬೆನ್ನೆಲಬಾಗಿ ನಿಂತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ