ಆ್ಯಪ್ನಗರ

ಟಿವಿ9 ವಾರ್ಷಿಕ ಆದಾಯ ಎಷ್ಟು ಗೊತ್ತಾ? ದಂಗುಬಡಿಸುವ ಕೇರ್ ರೇಟಿಂಗ್

ತೆಲಂಗಾಣ, ಕರ್ನಾಟಕ ಟಿವಿ9 ಚಾನಲ್‌ಗಳ ಜನಪ್ರಿಯತೆಯೇ ಆದಾಯ ಬೆಳವಣಿಗೆಗೆ ಕಾರಣ ಎಂದು ಕೇರ್ ರೇಟಿಂಗ್ಸ್ ತಿಳಿಸಿದೆ. ಸಂಸ್ಥೆಯ ಆದಾಯದಲ್ಲಿ ಸುಮಾರು ಶೇ.80ರಷ್ಟು ಈ ಚಾನಲ್‌ಗಳ ಮೂಲಕವೇ ಲಭಿಸಿದೆ. ಲೀಡರ್‌ಶಿಪ್ ಪೊಷಿಷನ್, ಮಾರ್ಕೆಟಿಂಗ್, ಸೆಲ್ಲಿಂಗ್ ಸ್ಟ್ರಾಟೆಜಿಗಳು ಆದಾಯದಲ್ಲಿ ಹೆಚ್ಚಳವಾಗಲು ಕಾರಣ ಎಂದು ಕೇರ್ ರೇಟಿಂಗ್ ತಿಳಿಸಿದೆ.

PTI 14 May 2019, 2:53 pm
Vijaya Karnataka Web tv9
24/7 ನ್ಯೂಸ್ ಚಾನಲ್ ಟಿವಿ9 ಇತ್ತೀಚೆಗೆ ತಾನೇ ಸುದ್ದಿಯಾಗಿತ್ತು. ಮಾಜಿ ಸಿಇಒ ರವಿ ಪ್ರಕಾಶ್ ಫೋರ್ಜರಿ ಪ್ರಕರಣವೇ ಇದಕ್ಕೆ ಕಾರಣ. ಇದೀಗ ಮತ್ತೊಮ್ಮೆ ಟಿವಿ9 ಸುದ್ದಿಯಾಗಿದೆ. ಆದರೆ ಈ ಬಾರಿ ಆದಾಯದ ವಿಚಾರವಾಗಿ ಸದ್ದು ಮಾಡಿದೆ. ಈ ಸುದ್ದಿ ಸಂಸ್ಥೆಯ ವಾರ್ಷಿಕ ಆದಾಯ ಬಿಡುಗಡೆಯಾಗಿದ್ದು, ಕೇರ್ ರೇಟಿಂಗ್ ದಂಗುಬಡಿಸುವಂತಿದೆ.

ಅಸೋಸಿಯೇಟೆಡ್ ಬ್ರಾಡ್ ಕಾಸ್ಟಿಂಗ್ ಕಂಪೆನಿ (ಎಬಿಸಿಪಿಎಲ್) 2017-18ನೇ ಹಣಕಾಸು ವರ್ಷದಲ್ಲಿ ₹ 200 ಕೋಟಿಗೂ ಅಧಿಕ ಆದಾಯ ಗಳಿಸಿದ್ದು ವಾರ್ಷಿಕವಾಗಿ ಶೇ.21ರಷ್ಟು ಬೆಳವಣಿಗೆಯನ್ನು ನಮೂದಿಸಿದೆ. ಈ ಮೂಲಕ 5.86 ಕೋಟಿ ರೂ.ಗಳ ಆದಾಯ ದಾಖಲಿಸಿದೆ.

ಟಿವಿ9 ಲೋಗೋದೊಂದಿಗೆ ಎಬಿಸಿಪಿಎಲ್ ವಿವಿಧ ಭಾಷೆಯ ಚಾನಲ್‌ಗಳನ್ನು ಹೊಂದಿದೆ. ಮಾಜಿ ಸಿಇಒ, ನಿರ್ದೇಶಕ ರವಿ ಪ್ರಕಾಶ್ ವಿರುದ್ಧದ ಫೋರ್ಜರಿ ಆರೋಪಗಳಿಂದ ಟಿವಿ9 ಇತ್ತೀಚೆಗೆ ಚರ್ಚೆಗೆ ಗ್ರಾಸವಾಗಿತ್ತು. ಸದ್ಯಕ್ಕೆ ಅಲಂದಾ ಮೀಡಿಯಾ ಅಂಡ್ ಎಂಟರ್‌ಟೇನ್‌ಮೆಂಟ್ಸ್, ಎಬಿಸಿಪಿಎಲ್‌ನಲ್ಲಿ ಶೇ.90ಕ್ಕೂ ಅಧಿಕ ಪಾಲನ್ನು ಹೊಂದಿದೆ. ಅಲಂದಾ ಸಂಸ್ಥೆಯನ್ನು ಮೇಘಾ ಇಂಜಿನಿಯರಿಂಗ್ ಅಂಡ್ ಇನ್‌ಫ್ರಾಸ್ಟ್ರಕ್ಚರ್, ಮೈ ಹೋಮ್ ಗ್ರೂಪ್‌ ಪ್ರಮೋಟ್ ಮಾಡುತ್ತಿದೆ.

ತೆಲಂಗಾಣ, ಕರ್ನಾಟಕ ಟಿವಿ9 ಚಾನಲ್‌ಗಳ ಜನಪ್ರಿಯತೆಯೇ ಆದಾಯ ಬೆಳವಣಿಗೆಗೆ ಕಾರಣ ಎಂದು ಕೇರ್ ರೇಟಿಂಗ್ಸ್ ತಿಳಿಸಿದೆ. ಸಂಸ್ಥೆಯ ಆದಾಯದಲ್ಲಿ ಸುಮಾರು ಶೇ.80ರಷ್ಟು ಈ ಚಾನಲ್‌ಗಳ ಮೂಲಕವೇ ಲಭಿಸಿದೆ. ಲೀಡರ್‌ಶಿಪ್ ಪೊಷಿಷನ್, ಮಾರ್ಕೆಟಿಂಗ್, ಸೆಲ್ಲಿಂಗ್ ಸ್ಟ್ರಾಟೆಜಿಗಳು ಆದಾಯದಲ್ಲಿ ಹೆಚ್ಚಳವಾಗಲು ಕಾರಣ ಎಂದು ಕೇರ್ ರೇಟಿಂಗ್ ತಿಳಿಸಿದೆ.

ಪ್ರಬಲ ಮತ್ತು ನುರಿತ ಆಡಳಿತ ಮಂಡಳಿ, ಪ್ರಮೋಟರ್‌‍ಗಳ ಆರ್ಥಿಕ ಸಾಮರ್ಥ್ಯ ಸಹ ಟಿವಿ9 ಕನ್ನಡ, ಟಿವಿ9 ತೆಲುಗು, ಟಿವಿ9 ಗುಜರಾತಿ ಚಾನಲ್‌ಗಳು ಮುಂಚೂಣಿಯಲ್ಲಿರುವಂತಹ ಅಂಶಗಳ ಹಿನ್ನೆಲೆಯಲ್ಲಿ ಕೇರ್ ರೇಟಿಂಗ್ಸ್ ಈ ಸಂಸ್ಥೆಗೆ ಬಿಬಿಬಿ ಸ್ಟೇಬಲ್ ರೇಟಿಂಗ್ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ