ವರ್ಷಗಳಿಂದ ನಟ 'ಡಾಲಿ' ಧನಂಜಯ ಮದುವೆ ಯಾವಾಗ ಎಂಬ ಪ್ರಶ್ನೆ ಆಗಾಗ ಕೇಳಿ ಬರುತ್ತಲೇ ಇದೆ. ಇತ್ತೀಚೆಗೆ 'ಬ್ರಹ್ಮಚಾರಿಗಳ ನಡೆ ಮಾದಪ್ಪನ ಕಡೆ' ಕಾರ್ಯಕ್ರಮಕ್ಕೆ ಸ್ವತಃ ಡಾಲಿ ಅವರೇ ಚಾಲನೆ ನೀಡಿದ್ದರು. ಇತ್ತೀಚೆಗೆ ನಟ ವಸಿಷ್ಠ ಸಿಂಹ ಅವರು ಹರಿಪ್ರಿಯಾ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಇವರ ಗೆಳೆಯ ಡಾಲಿ ಮದುವೆ ಯಾವಾಗ ಎಂಬ ಪ್ರಶ್ನೆ ಪದೇ ಪದೇ ಏಳುತ್ತಲೇ ಇದೆ. ಈಗ 'ವೀಕೆಂಡ್ ವಿಥ್ ರಮೇಶ್' ಶೋನಲ್ಲಿ ಡಾಲಿ ಧನಂಜಯ ಅವರು ಅತಿಥಿಯಾಗಿ ಭಾಗವಹಿಸಿದ್ದೂ, ಅಲ್ಲಿಯೂ ಮದುವೆ ಬಗ್ಗೆ ಮಾತು ಕೇಳಿ ಬಂದಿದೆ.
ಅಜ್ಜಿ ದೂರು ಏನು?
ಧನಂಜಯ ಅವರ ಅಕ್ಕ, ಅಜ್ಜಿ ಕೂಡ ಧನಂಜಯಗೆ ಮದುವೆ ಆಗಿ ಅಂತ ಹೇಳಿ ಎಂದು ರಮೇಶ್ ಅರವಿಂದ್ಗೆ ಒತ್ತಾಯಿಸಿದ್ದಾರೆ. ಧನಂಜಯಗೆ ಮದುವೆ ಮಾಡಬೇಕು. ಧನಂಜಯ ನಾನು ಹುಡುಕಿದ ಹುಡುಗಿಯನ್ನು ಒಪ್ಪಿಕೊಳ್ಳಿಲ್ಲ ಅಂತ ಅಜ್ಜಿ ಹೇಳಿದ್ದಾರೆ. Weekend With Ramesh 5: 'ವೀಕೆಂಡ್ ವಿಥ್ ರಮೇಶ್' ಶೋಗೆ ಧನಂಜಯ್ಗಾಗಿ ಬರಬೇಕಿದ್ದ ಅನ್ನಲಕ್ಷ್ಮೀ ನಕ್ಷತ್ರವಾಗೋದ್ರು
ರಮೇಶ್ ಕಿವಿಯಲ್ಲಿ ಡಾಲಿ ಮನದರಸಿ ಹೆಸರು
ಧನಂಜಯ ಜೊತೆಗಿನ ಬಾಂಧವ್ಯದ ಬಗ್ಗೆ ಮಾತನಾಡುತ್ತ ಶಿವರಾಜ್ಕುಮಾರ್ ಅವರು ಮದುವೆ ಯಾವಾಗ ಅಂತ ಪ್ರಶ್ನೆ ಮಾಡಿದ್ದಾರೆ. ನಾನು ಯಾವತ್ತೂ ಶಿವಣ್ಣ ಹೇಳಿದ್ದು ತಳ್ಳಿ ಹಾಕಿಲ್ಲ, ಅವರು ಹೇಳಿದ್ಮೇಲೆ ಮುಗೀತು, ಮದುವೆ ಆಗ್ತೀನಿ ಅಂತ ಡಾಲಿ ಹೇಳಿದ್ದಾರೆ.
ಇನ್ನೊಂದು ಕಡೆ ರಮೇಶ್ ಅರವಿಂದ್ ಅವರು ನಿಮ್ಮ ಮನಸ್ಸಿನಲ್ಲಿ ಯಾರಾದರೂ ಇದ್ದಾರಾ ಅಂತ ಪ್ರಶ್ನೆ ಮಾಡಿದಾಗ ಧನಂಜಯ ಅವರು ರಮೇಶ್ ಕಿವಿಯಲ್ಲಿ ಏನನ್ನೋ ಹೇಳಿದ್ದಾರೆ. ಅದನ್ನು ಕೇಳಿಸಿಕೊಂಡ ರಮೇಶ್ ಅವರು ಬಾಯಿ ಬಿಟ್ಟು ಎಲ್ಲರೆದುರು ಹೇಳಲಾ ಎಂದು ಪ್ರಶ್ನೆ ಮಾಡಿದ್ದಾರೆ.
ಯೋಗಿ ಅಭಿನಯದ 50ನೇ ಚಿತ್ರ 'ರೋಜಿ' ಆರಂಭ: ಶೀರ್ಷಿಕೆ ಅನಾವರಣ ಮಾಡಿದ ಡಾಲಿ ಧನಂಜಯ್
ಈ ವರ್ಷ ಡಾಲಿ ಮದುವೆಯಂತೆ!
36 ವರ್ಷದ ಧನಂಜಯ ಅವರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್ವುಡ್ ನಟಿಯೋರ್ವರ ಜೊತೆ ಡಾಲಿ ಹೆಸರು ಪದೇ ಪದೇ ಕೇಳಿಬಂದರೂ ಕೂಡ ಅವರಿಬ್ಬರು ಪ್ರೀತಿ ಬಗ್ಗೆ ಏನೂ ಹೇಳಿಲ್ಲ. ಈ ವರ್ಷ ಡಾಲಿ ವೈವಾಹಿಕ ಜೀವನಕ್ಕೆ ಕಾಲಿಡುವ ಸಾಧ್ಯತೆಯಿದೆ. ಡಾಲಿ ನಟಿಯನ್ನು ಮದುವೆಯಾಗ್ತಾರಾ ಅಥವಾ ಬೇರೆ ರಂಗದವರನ್ನು ಮದುವೆ ಆಗ್ತಾರಾ ಅಂತ ಕಾದು ನೋಡಬೇಕಿದೆ.
ಬದುಕು ಬದಲಿಸಿದ 'ಟಗರು'
ಗಾಡ್ ಫಾದರ್ ಇಲ್ಲದೆ ಚಿತ್ರರಂಗಕ್ಕೆ ಕಾಲಿಟ್ಟ ಇಂಜಿನಿಯರ್, ಮೈಸೂರು ಹುಡುಗ ಧನಂಜಯ ಅವರು ಆರಂಭದಲ್ಲಿ ಸಾಲು ಸಾಲು ಸಿನಿಮಾಗಳನ್ನು ಸೋತರು. ಆ ನಂತರದಲ್ಲಿ ಶಿವರಾಜ್ಕುಮಾರ್ ಜೊತೆಗೆ 'ಟಗರು' ಸಿನಿಮಾದಲ್ಲಿ ಡಾಲಿ ಎನ್ನುವ ನೆಗೆಟಿವ್ ಪಾತ್ರ ಮಾಡಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದರು. ಅಲ್ಲಿಂದ 'ಡಾಲಿ' ಯುಗ ಶುರುವಾಯ್ತು ಎಂದರೆ ತಪ್ಪಿಲ್ಲ. ಈಗ ಕನ್ನಡ, ತೆಲುಗು, ತಮಿಳು ಎಂದು ಧನಂಜಯ ಅವರು ಸಾಲು ಸಾಲು ಸಿನಿಮಾ ಒಪ್ಪಿಕೊಂಡು ಮಾಡುತ್ತಿದ್ದಾರೆ.
'ಅಮೃತಾ ಜತೆ ಮೂರ್ ಮೂರು ಸಿನಿಮಾ ಯಾಕ್ ಮಾಡಿದ್ರಿ..'; ಕಿಚ್ಚನ ಪ್ರಶ್ನೆಗೆ 'ಡಾಲಿ' ಹೇಳಿದ್ದೇನು?
ಈ ವಾರ ಧನಂಜಯ ಅವರ ಎಪಿಸೋಡ್ ಪ್ರಸಾರ ಆಗಲಿದೆ. ಹೀರೋ, ವಿಲನ್ ಆಗಿ ಮೆರೆಯುತ್ತಿರುವ ಧನಂಜಯ ಅವರು ನಿರ್ಮಾಪಕರಾಗಿ ಕೂಡ ಬಡ್ತಿ ಪಡೆದಿದ್ದಾರೆ.
ಅಜ್ಜಿ ದೂರು ಏನು?
ಧನಂಜಯ ಅವರ ಅಕ್ಕ, ಅಜ್ಜಿ ಕೂಡ ಧನಂಜಯಗೆ ಮದುವೆ ಆಗಿ ಅಂತ ಹೇಳಿ ಎಂದು ರಮೇಶ್ ಅರವಿಂದ್ಗೆ ಒತ್ತಾಯಿಸಿದ್ದಾರೆ. ಧನಂಜಯಗೆ ಮದುವೆ ಮಾಡಬೇಕು. ಧನಂಜಯ ನಾನು ಹುಡುಕಿದ ಹುಡುಗಿಯನ್ನು ಒಪ್ಪಿಕೊಳ್ಳಿಲ್ಲ ಅಂತ ಅಜ್ಜಿ ಹೇಳಿದ್ದಾರೆ.