ಆ್ಯಪ್ನಗರ

ಏಪ್ರಿಲ್ 20ರಿಂದ 'ವೀಕೆಂಡ್ ವಿತ್ ರಮೇಶ್' ಹೊಸ ಸೀಸನ್

ಇದೇ ಏಪ್ರಿಲ್ 20ರಿಂದ ಹೊಸ ಸೀಸನ್ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ರಮೇಶ್ ಅರವಿಂದ್ ನಿರೂಪಣೆಯಲ್ಲಿ ಈ ಕಾರ್ಯಕ್ರಮ ಮೂಡಿಬರಲಿದ್ದು ಪ್ರತಿ ಶನಿವಾರ ಮತ್ತು ಭಾನುವಾರ ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಬಹುದು.

Vijaya Karnataka Web 10 Apr 2019, 9:11 pm
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು ವೀಕೆಂಡ್ ವಿತ್ ರಮೇಶ್. ಇದೀಗ ನಾಲ್ಕನೇ ಸೀಸನ್ ಆರಂಭವಾಗುತ್ತಿದೆ. ಇದೇ ಏಪ್ರಿಲ್ 20ರಿಂದ ಹೊಸ ಸೀಸನ್ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ರಮೇಶ್ ಅರವಿಂದ್ ನಿರೂಪಣೆಯಲ್ಲಿ ಈ ಕಾರ್ಯಕ್ರಮ ಮೂಡಿಬರಲಿದ್ದು ಪ್ರತಿ ಶನಿವಾರ ಮತ್ತು ಭಾನುವಾರ ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಬಹುದು.
Vijaya Karnataka Web ramesh


ಕನ್ನಡ ಕಿರುತೆರೆ ವೀಕ್ಷಕರನ್ನು ಅಪಾರವಾಗಿ ಸೆಳೆದ ಕಾರ್ಯಕ್ರಮಗಳಲ್ಲಿ 'ವೀಕೆಂಡ್ ವಿತ್ ರಮೇಶ್' ಸಹ ಒಂದು. ಅದೆಷ್ಟೋ ಮಂದಿ ಸಾಧಕರನ್ನು ಪರಿಚಯಿಸಿತು. ಅವರು ನಡೆದು ಬಂದ ಹಾದಿ, ತಲುಪಿದ ಗುರಿಯನ್ನು ವೀಕ್ಷಕರಿಗೆ ಮನ ತಟ್ಟುವಂತೆ ಕಾರ್ಯಕ್ರಮ ಮೂಡಿಬಂದಿದೆ. ಅದೆಷ್ಟೋ ಮಂದಿ ವೀಕ್ಷಕರಲ್ಲಿ ಹೊಸ ಸ್ಫೂರ್ತಿ ತುಂಬಿದೆ. ಇದೀಗ ನಾಲ್ಕನೇ ಸೀಸನ್ ಆರಂಭವಾಗುತ್ತಿದೆ.

ಈ ಶೋನ ಮೊದಲ ಅತಿಥಿ, ಸಾಧಕರ ಸೀಟಿನಲ್ಲಿ ಕೂರುತ್ತಿರುವವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ. ಈಗಾಗಲೆ ವೀರೇಂದ್ರ ಹೆಗ್ಗಡೆ ಅವರ ಭಾಗದ ಚಿತ್ರೀಕರಣವನ್ನು ವಾಹಿನಿ ಮುಗಿಸಿದೆ. ಈ ಬಾರಿ ಹೆಸರು ಮಾಡಿರುವ, ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಎಲೆ ಮರೆ ಕಾಯಿಗಳಂತಿರುವ ಜನ ಸಾಮಾನ್ಯರನ್ನೂ ಸಾಧಕರ ಸೀಟಿನ ಮೇಲೆ ಕೂರಿಸಲಿದ್ದಾರೆ ನಿರೂಪಕ ರಮೇಶ್ ಅರವಿಂದ್.

ಈ ಹಿಂದಿನ ಸೀಸನ್‌ಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅಂಬರೀಶ್, ಭಾರತಿ, ಜಗ್ಗೇಶ್, ಅರ್ಜುನ್ ಜನ್ಯ, ಪುನೀತ್ ರಾಜ್ ಕುಮಾರ್, ಜಯಂತ್ ಕಾಯ್ಕಿಣಿ, ಗಂಗಾವತಿ ಪ್ರಾಣೇಶ್, ಸುದೀಪ್, ರಾಧಿಕಾ ಪಂಡಿತ್, ಪ್ರಕಾಶ್ ರೈ, ದರ್ಶನ್, ರಕ್ಷಿತ್ ಶೆಟ್ಟಿ, ಗಣೇಶ್ ಮುಂತಾದ ಸಾಧಕರು ತಾವು ನಡೆದು ಬಂದ ಹಾದಿ ಬಗ್ಗೆ ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ