ಆ್ಯಪ್ನಗರ

ಜೀ ಕನ್ನಡದಲ್ಲಿ ಈ ವಾರಾಂತ್ಯಕ್ಕೆ ಮೂರು ಹೊಸ ಕಾರ್ಯಕ್ರಮಗಳು

ರಿಯಾಲಿಟಿ ಶೋಗಳು, ವಿಭಿನ್ನ ಕಥಾಹಂದರವುಳ್ಳ ಧಾರಾವಾಹಿಗಳ ಮೂಲಕ ಈಗಾಗಲೇ ಕಿರುತೆರೆ ವೀಕ್ಷಕರ ಮೆಚ್ಚುಗೆಯನ್ನು ಜೀ ವಾಹಿನಿ ಪಡೆದುಕೊಂಡಿದೆ. ಇದೀಗ ವಾರಾಂತ್ಯಕ್ಕೆ ಮೂರು ಹೊಸ ಕಾರ್ಯಕ್ರಗಳನ್ನು ವಾಹಿನಿಯು ರೂಪಿಸಿದೆ.

Vijaya Karnataka Web 21 May 2020, 12:48 pm
ಜೀ ಕನ್ನಡ ವಾಹಿನಿಯೂ ಈಗಾಗಲೇ 'ವೀಕೆಂಡ್ ವಿಥ್ ರಮೇಶ್', 'ಸ ರೆ ಗ ಮ ಪ' ಮತ್ತು 'ಡ್ರಾಮಾ ಜೂನಿಯರ್ಸ್', 'ಕಾಮಿಡಿ ಕಿಲಾಡಿಗಳು' ಥರದ ಅನೇಕ ಯಶಸ್ವಿ ಕಾರ್ಯಕ್ರಮಗಳನ್ನು ನೀಡಿದೆ. ಇವು ಎಲ್ಲ ವಯೋಮಾನದ ವೀಕ್ಷಕರಿಗೂ ಇಷ್ಟವಾಗಿವೆ. ಜೀ ಕನ್ನಡ 'ಬಯಸಿದ ಬಾಗಿಲು ತೆಗೆಯೋಣ' ಎಂಬ ಘೋಷವಾಕ್ಯದ ಮೂಲಕ ವಿಶ್ವಾದ್ಯಂತ ಕನ್ನಡಿಗರ ಮನೆ ಮನೆಗೆ ತಲುಪಿದೆ.
Vijaya Karnataka Web zee kannada starts three new programs on this weekend
ಜೀ ಕನ್ನಡದಲ್ಲಿ ಈ ವಾರಾಂತ್ಯಕ್ಕೆ ಮೂರು ಹೊಸ ಕಾರ್ಯಕ್ರಮಗಳು


ಸದ್ಯ ಜೀ ಕನ್ನಡ ಈ ವಾರಾಂತ್ಯಕ್ಕೆ ಮೂರು ಮಹತ್ತರ ಕಾರ್ಯಕ್ರಮಗಳ ಮೂಲಕ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಲು ಸಜ್ಜಾಗಿದೆ. ಈ ಶನಿವಾರ (ಮೇ 23) ಮತ್ತು ಭಾನುವಾರ (ಮೇ 24) ರಾತ್ರಿ 9 ಗಂಟೆಗೆ ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿರುವ ನಿಮ್ಮ ನೆಚ್ಚಿನ ತಾರೆಯರ `ಲಾಕ್ ಡೌನ್ ಡೈರೀಸ್' ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಿದ್ಧಪಡಿಸಲಾಗಿದೆ. ಜನಪ್ರಿಯ ತಾರೆಯರು ತಮ್ಮ ಲಾಕ್‌ಡೌನ್ ಸಮಯವನ್ನು ಹೇಗೆ ಕಳೆಯುತ್ತಿದ್ದಾರೆ ಎಂಬ ಕುತೂಹಲಕಾರಿ ಮಾಹಿತಿಯನ್ನು ಈ ಶೋನಲ್ಲಿ ನೀಡಲಾಗುತ್ತಿದೆ.

ಸರಿಗಮಪ ಕಾರ್ಯಕ್ರಮದ ನಿರೂಪಕಿ ಅನುಶ್ರೀ `ಕಾಫಿ ವಿಥ್ ಅನು' ಎಂಬ ವಿನೂತನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅನುಶ್ರೀ ಅವರು ಖ್ಯಾತನಾಮರೊಂದಿಗೆ ತರಲೆ, ಹಾಸ್ಯ, ಮಾತುಕತೆ ಮಾಡಿ, ತಾರೆಯರ ಕೆಲವು ವಿವರಗಳನ್ನು ಹಂಚಿಕೊಳ್ಳಲಿದ್ದಾರೆ. ಈ ಎರಡೂ ಕಾರ್ಯಕ್ರಮಗಳು ಕನ್ನಡ ಕಿರುತೆರೆಯಲ್ಲಿಯೇ ವಿನೂತನ ಪರಿಕಲ್ಪನೆಯಾಗಿದ್ದು ವೀಕ್ಷಕರನ್ನು ರಂಜಿಸಲಿವೆ ಎಂದು ವಾಹಿನಿ ಹೇಳಿಕೊಂಡಿದೆ. ಶನಿವಾರ (ಮೇ 23) ಮತ್ತು ಭಾನುವಾರ (ಮೇ 24) ರಾತ್ರಿ 9.30ಕ್ಕೆ ಅನುಶ್ರೀ ಅವರೊಂದಿಗೆ ರಮೇಶ್ ಅರವಿಂದ್ ಮತ್ತು ರಚಿತಾ ರಾಮ್ ‘ಕಾಫಿ ವಿಥ್ ಅನು’ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಸರೆಗಮಪ ಕಾರ್ಯಕ್ರಮಕ್ಕೆ 25 ವರ್ಷ
ಸ ರೆ ಗ ಮ ಪ ಕಾರ್ಯಕ್ರಮದ 25ನೇ ವರ್ಷದ ಸಂಭ್ರಮಾಚರಣೆಗೆ ಮೇ 23ರಂದು ಶನಿವಾರ ಸಂಜೆ 4.30ಕ್ಕೆ ಎರಡೂವರೆ ಗಂಟೆಗಳ ಲೈವಥಾನ್ ಡಿಜಿಟಲ್ ಮ್ಯೂಸಿಕ್ ಕನ್ಸರ್ಟ್ಅನ್ನು ವಾಹಿನಿ ಆಯೋಜಿಸಿದೆ. ಭಾನುವಾರ (ಮೇ 24) ಸಂಜೆ 7 ಗಂಟೆಗೆ `ಒಂದೇ ದೇಶ, ಒಂದೇ ರಾಗ' ಈ ಸಂಗೀತ ಕಾರ್ಯಕ್ರಮದ ಪ್ರಸಾರ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ. ಜೀ ಕನ್ನಡದಲ್ಲಿ ಸರಿಗಮಪ ಹಲವು ಸೀಸನ್‌ಗಳಲ್ಲಿ ಕನ್ನಡ ವೀಕ್ಷಕರನ್ನು ರಂಜಿಸಿರುವುದಲ್ಲದೆ ಹಲವು ಉದಯೋನ್ಮುಖ ಗಾಯಕ, ಗಾಯಕಿಯರಿಗೆ ವೇದಿಕೆ ಒದಗಿಸಿ ಅವರು ಗಾಯಕರಾಗಿ ವೃತ್ತಿಜೀವನಕ್ಕೆ ಪ್ರವೇಶ ಪಡೆಯಲು ನೆರವಾಗಿದೆ. ಸರಿಗಮಪದಿಂದ ಇಂದು ಹಲವು ಸ್ಟಾರ್ ಗಾಯಕರಿಗೆ ವೇದಿಕೆಯಾಗಿದೆ.

ನಟಿ ದೀಪಿಕಾ ದಾಸ್ ಅವರಿಗೆ ಸ್ಪರ್ಧೆ ಕೊಟ್ಟು ಗೆದ್ದ 'ನಾಗಿಣಿ 2' ಹೀರೋಯಿನ್ ನಮ್ರತಾ ಗೌಡ!

ಲಾಕ್‌ಡೌನ್ 4.0 ಕಾಲದಲ್ಲಿ ಈ ಡಿಜಿಟಲ್ ಕನ್ಸರ್ಟ್ ಭಾರತವನ್ನು ಕೋವಿಡ್-19ರ ವಿರುದ್ಧ ಹೋರಾಡಲು ಒಗ್ಗೂಡಿಸಲು ಸ್ಫೂರ್ತಿ ತುಂಬಲಿದೆ. ಈ ಸಂಗೀತ ಕಾರ್ಯಕ್ರಮ ಭಾರತದ ಖ್ಯಾತ ಗಾಯಕರನ್ನು ಒಟ್ಟುಗೂಡಿಸಲಿದ್ದು 10 ಜೀ ಫೇಸ್ ಬುಕ್ ಪುಟಗಳಲ್ಲಿ 350ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಲೈವ್ ಸ್ಟ್ರೀಮ್ ಮಾಡಲಿದ್ದೇವೆ ಎಂದು ವಾಹಿನಿ ತಿಳಿಸಿದೆ.

'ಲಕುಮಿ' ಧಾರಾವಾಹಿಯ ನಟಿ ನವ್ಯಾ ಸ್ವಾಮಿ ಈಗ ಏನು ಮಾಡುತ್ತಿದ್ದಾರೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ