ಆ್ಯಪ್ನಗರ

'ವೀಕೆಂಡ್ ವಿತ್ ರಮೇಶ್‌'ಗೆ ರಾಹುಲ್ ದ್ರಾವಿಡ್ ಕರೆತರಲು ಅಭಿಯಾನ

ನಾವು ನಡೆಸಿದ ಸಮೀಕ್ಷೆಯ ಪ್ರಕಾರ ನಿಮ್ಮೆಲ್ಲರ ಇಚ್ಚೆ ಹಾಗೂ ಅಭಿಮಾನದಂತೆ ನಮ್ಮೊಡನೆ ದ್ರಾವಿಡ್ ರವರು ವೀಕೆಂಡ್ ವಿತ್ ರಮೇಶ್ 4 ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎನ್ನುವುದು ನಮ್ಮ ಆಶಯವು ಕೂಡ ಆಗಿರುತ್ತದೆ. ನಾವೆಲ್ಲರೂ ಒಂದಾಗಿ ಒಗ್ಗಟ್ಟಿನಿಂದ #WWRDravid ನೊಂದಿಗೆ ನಿಮ್ಮ ಎಫ್‍ಬಿ ವಾಲ್ ಮೇಲೆ ಷೇರ್ ಮಾಡುವ ಮೂಲಕ ರಾಹುಲ್ ದ್ರಾವಿಡ್‌ರನ್ನು ಸಾಧಕರ ಸೀಟ್‌ಗೆ ಕರೆತರುವ ಪ್ರಯತ್ನ ಮಾಡೋಣ.

Vijaya Karnataka Web 20 Apr 2019, 1:01 pm
ಭಾರತದ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್‌ರನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಕರೆತರಲು ಫೇಸ್‍ಬುಕ್, ಟ್ವಿಟರ್‌ನಲ್ಲಿ ಹೊಸ ಅಭಿಯಾನವನ್ನು ಆರಂಭಿಸಿದೆ ಜೀ ಕನ್ನಡ ವಾಹಿನಿ. ಈ ಬಾರಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಅವರನ್ನು ಕರೆತರಬೇಕು ಎಂಬುದು ಈ ಅಭಿಯಾನದ ಉದ್ದೇಶ.
Vijaya Karnataka Web rahul-dravid


ಈ ಬಗ್ಗೆ ಜೀ ಕನ್ನಡ ವಾಹಿನಿ ಈ ರೀತಿ ಹೇಳಿದೆ, "ನಾವು ನಡೆಸಿದ ಸಮೀಕ್ಷೆಯ ಪ್ರಕಾರ ನಿಮ್ಮೆಲ್ಲರ ಇಚ್ಚೆ ಹಾಗೂ ಅಭಿಮಾನದಂತೆ ನಮ್ಮೊಡನೆ ದ್ರಾವಿಡ್ ರವರು ವೀಕೆಂಡ್ ವಿತ್ ರಮೇಶ್ 4 ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎನ್ನುವುದು ನಮ್ಮ ಆಶಯವು ಕೂಡ ಆಗಿರುತ್ತದೆ. ನಾವೆಲ್ಲರೂ ಒಂದಾಗಿ ಒಗ್ಗಟ್ಟಿನಿಂದ #WWRDravid ನೊಂದಿಗೆ ನಿಮ್ಮ ಎಫ್‍ಬಿ ವಾಲ್ ಮೇಲೆ ಷೇರ್ ಮಾಡುವ ಮೂಲಕ ರಾಹುಲ್ ದ್ರಾವಿಡ್‌ರನ್ನು ಸಾಧಕರ ಸೀಟ್‌ಗೆ ಕರೆತರುವ ಪ್ರಯತ್ನ ಮಾಡೋಣ" ಎಂದಿದೆ.

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು ವೀಕೆಂಡ್ ವಿತ್ ರಮೇಶ್. ಇದೀಗ ನಾಲ್ಕನೇ ಸೀಸನ್ ಆರಂಭವಾಗುತ್ತಿದೆ. ಇದೇ ಏಪ್ರಿಲ್ 20ರಿಂದ ಹೊಸ ಸೀಸನ್ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ರಮೇಶ್ ಅರವಿಂದ್ ನಿರೂಪಣೆಯಲ್ಲಿ ಈ ಕಾರ್ಯಕ್ರಮ ಮೂಡಿಬರಲಿದ್ದು ಪ್ರತಿ ಶನಿವಾರ ಮತ್ತು ಭಾನುವಾರ ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಬಹುದು.

ಈ ಕಾರ್ಯಕ್ರಮಕ್ಕೆ ರಾಹುಲ್ ದ್ರಾವಿಡರನ್ನೂ ಕರೆತರಬೇಕೆಂದು ಅಭಿಮಾನಿಗಳು ಬಯಸಿದ್ದಾರೆ. ಕರ್ನಾಟಕದ ಅಭಿಮಾನಿಗಳಷ್ಟೇ ಅಲ್ಲ, ದೇಶದಾದ್ಯಂತ ಇರುವ ಅಭಿಮಾನಿಗಳು ರಾಹುಲ್ ದ್ರಾವಿದ್ ಈ ಚೇರ್ ಮೇಲೆ ಕೂರಬೇಕು ಎಂಬುದು ನಮ್ಮೆಲ್ಲರ ಆಸೆ ಎಂದಿದ್ದಾರೆ ಅಭಿಮಾನಿಗಳು.

#WWRDravid ಎಂಬ ಹ್ಶಾಶ್ ಟ್ಯಾಗ್ ಬಳಸಿ ಅಭಿಮಾನಿಗಳು ಟ್ವೀಟ್ ಮಾಡುತ್ತಿದ್ದಾರೆ. ರಾಹುಲ್ ದ್ರಾವಿಡ್ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಜೀ ಕನ್ನಡ ವಾಹಿನಿ ಈ ಅಭಿಯಾನ ಆರಂಭಿಸಿದ್ದು ಈ ಬಗ್ಗೆ ಸಾಕಷ್ಟು ಪ್ರತಿಕ್ರಿಯೆಗಳು ಹರಿದುಬರುತ್ತಿವೆ. ಅವರ ಜೀವನ, ಸಾಧನೆ ಹಲವರಿಗೆ ಸ್ಫೂರ್ತಿದಾಯಕ ಅಲ್ಲವೇ?.

ಈ ಹಿಂದಿನ ಸೀಸನ್‌ಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅಂಬರೀಶ್, ಭಾರತಿ, ಜಗ್ಗೇಶ್, ಅರ್ಜುನ್ ಜನ್ಯ, ಪುನೀತ್ ರಾಜ್ ಕುಮಾರ್, ಜಯಂತ್ ಕಾಯ್ಕಿಣಿ, ಗಂಗಾವತಿ ಪ್ರಾಣೇಶ್, ಸುದೀಪ್, ರಾಧಿಕಾ ಪಂಡಿತ್, ಪ್ರಕಾಶ್ ರೈ, ದರ್ಶನ್, ರಕ್ಷಿತ್ ಶೆಟ್ಟಿ, ಗಣೇಶ್ ಮುಂತಾದ ಸಾಧಕರು ತಾವು ನಡೆದು ಬಂದ ಹಾದಿ ಬಗ್ಗೆ ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ