ಆ್ಯಪ್ನಗರ

ಮೋದಿ ಒನ್ ಮ್ಯಾನ್ ಷೋ ಕೆಲಸ ಮಾಡಿದೆ: ಎಚ್‌ಡಿಡಿ

ಉತ್ತರ ಪ್ರದೇಶದಲ್ಲಿ ಮೋದಿ ರೈತರ ಸಾಲ ಮನ್ನಾ ಮಾಡುತ್ತೇನೆ ಅಂತ ಪ್ರಚಾರ ಸಂದರ್ಭದಲ್ಲಿ ಘೋಷಣೆ ಮಾಡಿದ್ದಾರೆ. ಅವರು ಪ್ರಧಾನಿಯಾಗಿ ನೀಡಿರುವ ಎಲ್ಲ ಆಶ್ವಾಸನೆ ಈಡೇರಿಸಿದರೆ 2019ರ ಲೋಕಸಭೆ ಚುನಾವಣೆಯಲ್ಲಿ ಅನುಕೂಲ ಆಗಬಹುದು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ ದೇವೇಗೌಡ ಹೇಳಿದ್ದಾರೆ.

ವಿಕ ಸುದ್ದಿಲೋಕ 11 Mar 2017, 4:53 pm
ಬೆಂಗಳೂರು/ ಹುಬ್ಬಳ್ಳಿ: ಉತ್ತರ ಪ್ರದೇಶದಲ್ಲಿ ಮೋದಿ ರೈತರ ಸಾಲ ಮನ್ನಾ ಮಾಡುತ್ತೇನೆ ಅಂತ ಪ್ರಚಾರ ಸಂದರ್ಭದಲ್ಲಿ ಘೋಷಣೆ ಮಾಡಿದ್ದಾರೆ. ಅವರು ಪ್ರಧಾನಿಯಾಗಿ ನೀಡಿರುವ ಎಲ್ಲ ಆಶ್ವಾಸನೆ ಈಡೇರಿಸಿದರೆ 2019ರ ಲೋಕಸಭೆ ಚುನಾವಣೆಯಲ್ಲಿ ಅನುಕೂಲ ಆಗಬಹುದು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ ದೇವೇಗೌಡ ಹೇಳಿದ್ದಾರೆ.
Vijaya Karnataka Web uttarpradesh assembly election result 2017 modis one man show worked
ಮೋದಿ ಒನ್ ಮ್ಯಾನ್ ಷೋ ಕೆಲಸ ಮಾಡಿದೆ: ಎಚ್‌ಡಿಡಿ


ಈ ಫಲಿತಾಂಶದಿಂದ ದಿಲ್ಲಿಯ ಬಿಜೆಪಿ ನಾಯಕರು 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಸರ್ವ ಪ್ರಯತ್ನ ನಡೆಸುತ್ತಾರೆ ಎನ್ನುವುದನ್ನು ಯಾರು ಬೇಕಿದ್ದರೂ ಊಹಿಸಬಹುದು. ಇನ್ನು ಸಿದ್ದರಾಮಯ್ಯ ಅವರು‌ ಬರುವ ಬಜೆಟ್ ನಲ್ಲಿ ಜನರನ್ನು ಸೆಳೆಯಲು ಯಾವ ಘೋಷಣೆ ಮಾಡುತ್ತಾರೋ ನೋಡೋಣ. ನಾವೇನು ಮಾಡಲು ಸಾಧ್ಯ, ರಾಜ್ಯ ಪ್ರವಾಸ ಮಾಡುತ್ತೇನೆ. ರೈತರ ಪರ ಹೋರಾಟ ಮುಂದುವರಿಸುತ್ತೇನೆ ಎಂದರು.

'ನಾನೂ ರೈತನ ಮಗ. 55 ವರ್ಷ ರಾಜಕಾರಣ ಮಾಡಿದ್ದೇನೆ. ನನ್ನನ್ನೂ ರಾಜಕೀಯವಾಗಿ ಮುಗಿಸಲು ಪ್ರಯತ್ನ ನಡೆಯಿತು.‌ 10 ವರ್ಷದಿಂದ ಕುಮಾರಸ್ವಾಮಿ ಚರಿಷ್ಮಾ ಕೆಡಿಸಲು ಸಾಧ್ಯ ಆಗಿಲ್ಲ.‌ ಅವರು ಆರೋಗ್ಯ ನೋಡಿಕೊಂಡು ರಾಜ್ಯ ಪ್ರವಾಸ ಮಾಡಲಿ. ಪ್ರಾದೇಶಿಕ ಪಕ್ಷದಲ್ಲಿ ಏಳು ಬೀಳು ಇರಬಹುದು. ಆದರೆ ಮುಗಿಸಲು ಆಗಿಲ್ಲ ಎಂದು ಹೇಳಿದರು.

ಉತ್ತರಪ್ರದೇಶ ಮತ್ತುಉತ್ತರಾಖ೦ಡಗಳಲ್ಲಿ ಭಾರಿ ಬಹುಮತದೊ೦ದಿಗೆ ಅಧಿಕಾರಕ್ಕೆ ಬ೦ದಿರುವುದಕ್ಕೆ ಬೆ೦ಗಳೂರಿನ ಬಿಜೆಪಿ ಕಚೇರಿಯಲ್ಲಿರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಸ೦ಭ್ರಮಿಸಿದರು. ಪ್ರಧಾನಮ೦ತ್ರಿ ನರೇ೦ದ್ರ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ

ನಾಯಕತ್ವಕ್ಕೆ ಈ ಯಶಸ್ಸಿನ ಕೀರ್ತಿ ಸಲ್ಲಬೇಕು ಎ೦ದು ಯಡಿಯೂರಪ್ಪ ಅಭಿನಂದಿಸಿದರು.

ಇದು ನರೇಂದ್ರ ಮೋದಿಯವರ ನಾಯಕತ್ವಕ್ಕೆ ಸಿಕ್ಕ ಜನರ ಬೆಂಬಲ.ಉತ್ತರ ಪ್ರದೇಶದ ಇತಿಹಾಸದಲ್ಲಿ ಬಿಜೆಪಿಗೆ ದೊಡ್ಡ ಬಹುಮತ ಸಿಕ್ಕಿದೆ. ಉತ್ತರಾಖಂಡದಲ್ಲಿ ಬಿಜೆಪಿಯನ್ನು ಜನರು ಬೆಂಬಲಿಸಿದ್ದಾರೆ. ಮಣಿಪುರದಲ್ಲಿ ಬಿಜೆಪಿಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಇಡೀ ದೇಶದಲ್ಲಿ ಬಿಜೆಪಿಗೆ ದೊಡ್ಡ ಗೆಲುವು ಸಿಕ್ಕಿದೆ ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

ನೋಟ್‌ಬ್ಯಾನ್‌ಗೆ ಜನರು ಬೆಂಬಲ ಸೂಚಿಸಿದ್ದಾರೆ. ರಾಜ್ಯದ ಎರಡು ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ರಾಜ್ಯದಲ್ಲಿಯೂ ಕರ್ನಾಕದಲ್ಲಿ ಕಾಂಗ್ರೆಸ್ ಮನೆಗೆ ಹೋಗಲಿದೆ. ಈ ಫಲಿತಾಂಶ ರಾಜ್ಯದ ಮೇಲೆಯೂ ಪರಿಣಾಮ ಬೀರಲಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ