Raja Rani 2: ಬಿಗ್ ಬಾಸ್‌ನಲ್ಲಿ ನನ್ನ ಜರ್ನಿ ಅರ್ಧಕ್ಕೆ ನಿಲ್ಲಲಿಲ್ಲ, ನಾನು ಎಲಿಮಿನೇಶನ್ ಆದೆ ಅಷ್ಟೇ: ರಾಜೀವ್

Vijaya Karnataka Web 6 Jun 2022, 3:06 pm
ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಭಾಗವಹಿಸಿ ಅದ್ಭುತವಾಗಿ ಆಟ ಆಡಿದ್ದ ರಾಜೀವ್ ಅವರು ಪತ್ನಿ ರೇಷ್ಮಾ ಜೊತೆಗೆ 'ರಾಜಾ ರಾಣಿ' ಶೋನಲ್ಲಿ ಭಾಗವಹಿಸುತ್ತಿದ್ದಾರೆ. ರಾಜೀವ್‌ಗೆ ಇದು ಎರಡನೇ ರಿಯಾಲಿಟಿ ಶೋ. ರೇಷ್ಮಾ ಯಾರು? ಅವರ ವೃತ್ತಿ ಏನು ಎಂದು ಅವರೇ ಮಾಧ್ಯಮದ ಮುಂದೆ ಹೇಳಿದ್ದಾರೆ.

Raja Rani 2: ಮದುವೆಯಾಗದಿರುವವರಿಗೆ ಇವರೇ ನಮ್ಮ ಲೈಫ್ ಪಾರ್ಟ್ನರ್ ಅಂತ ಹೇಗೆ ಗೊತ್ತಾಗತ್ತೆ? ವೀಣಾ ಸುಂದರ್ ದಂಪತಿ ಉತ್ತರವೇನು?

'ಉಸಿರೇ ಉಸಿರೇ' ಸಿನಿಮಾದಲ್ಲಿ ನಟಿಸುತ್ತಿರುವ ನಟ ರಾಜೀವ್ ಅವರು ಈ ರಿಯಾಲಿಟಿ ಶೋ ಒಪ್ಪಿದ್ದೇಕೆ? ರಿಯಾಲಿಟಿ ಶೋನಲ್ಲಿ ಪತ್ನಿ ಜೊತೆಗೆ ಭಾಗವಹಿಸೋದು ಹೇಗೆ ಅನಿಸುತ್ತದೆ? ಬಿಗ್ ಬಾಸ್‌ನಲ್ಲಿನ ಜರ್ನಿ ಹೇಗಿತ್ತು?ಈ ರಿಯಾಲಿಟಿ ಶೋನಲ್ಲಿ ಡ್ಯಾನ್ಸ್ ಇದ್ದರೆ ಅದರ ತಯಾರಿ ಮಾಡಿಕೊಂಡಿದ್ದಾರಾ? ರಾಜೀವ್ ಅವರ ಡ್ರೆಸ್‌ಗಳಿಗೆ ರೇಷ್ಮಾ ಡಿಸೈನ್ ಮಾಡುವ ಕುರಿತಂತೆ ರೇಷ್ಮಾ ಹಾಗೂ ರಾಜೀವ್ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ.

Raja Rani 2: ನನ್ನ ಹೆಂಡ್ತಿಯನ್ನು ಬೆನ್ನು ನೋಡಿ ಒಪ್ಪಿದ್ದಲ್ಲ, ಮುಖ ನೋಡಿ ಒಪ್ಪಿದ್ದು, ನಾನು ಒಳ್ಳೆಯ ಹುಡುಗ: 'ಗೀತಾ' ಧಾರಾವಾಹಿ ನಟ ಶೋಭರಾಜ್

'ರಾಜಾ ರಾಣಿ' ಶೋ ಹಿಟ್ ಆದ ನಂತರದಲ್ಲಿ 'ರಾಜಾ ರಾಣಿ ಸೀಸನ್ 2' ಪ್ರಸಾರವಾಗುತ್ತಿದೆ. ನಟಿ ತಾರಾ, ಸೃಜನ್ ಲೋಕೇಶ್ ಅವರು ಈ ಶೋನ ನಿರ್ಣಾಯಕರು. ನಟಿ ಜಾಹ್ನವಿ ರಾಯಲ ಅವರು ಈ ಶೋ ನಿರೂಪಣೆ ಮಾಡುತ್ತಿದ್ದಾರೆ. ಲೋಕೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಈ ರಿಯಾಲಿಟಿ ಶೋ ತಯಾರಾಗುತ್ತಿದೆ.
Loading ...