ಆ್ಯಪ್ನಗರ

75ನೇ ವಯಸ್ಸಿನಲ್ಲಿ ತಾಯಿಯಾದ ಅಜ್ಜಿ...!

ತಾಯ್ತನ ಎಂಬುದು ಒಂದು ಮಧುರ ಕ್ಷಣ. ಎಲ್ಲಾ ಮಹಿಳೆಯರು ಈ ಕ್ಷಣವನ್ನು ಅತ್ಯಂತ ಖುಷಿಯಿಂದ ಸಂಭ್ರಮಿಸುತ್ತಾರೆ. ಆದರೆ, ರಾಜಸ್ಥಾನದಲ್ಲಿ 75 ವರ್ಷದ ಅಜ್ಜಿಯೊಬ್ಬರು ಈಗ ತಾಯಿಯಾಗಿ ಸುದ್ದಿಯಾಗಿದ್ದಾರೆ...!

Vijaya Karnataka Web 14 Oct 2019, 11:30 am
ಜೈಪುರ : ರಾಜಸ್ಥಾನದಲ್ಲಿ 75ರ ಅಜ್ಜಿಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ...! ಅಚ್ಚರಿಯಾದರು ಇದು ನಿಜ...! ಇಲ್ಲಿನ ಕೋಟಾದ ಈ ಅಜ್ಜಿ ಶನಿವಾರ ಹೆಣ್ಣು ಮಗುವಿಗೆ ಜನ್ಮ ನೀಡಿ ಸುದ್ದಿಯಾಗಿದ್ದಾರೆ. ಐವಿಎಫ್ (ಇನ್ ವಿಟ್ರೋ ಫರ್ಟಿಲೈಸೇಷನ್) ಎಂಬ ಕೃತಕ ಗರ್ಭಧಾರಣಾ ವಿಧಾನದ ಮೂಲಕ ಈ ಅಜ್ಜಿ ತಾಯ್ತನದ ಖುಷಿ ಅನುಭವಿಸುತ್ತಿದ್ದಾರೆ.
Vijaya Karnataka Web baby
ಸಾಂದರ್ಭಿಕ ಚಿತ್ರ


ಆದರೆ, ಕಂದನ ತೂಕ ತೀರ ಕಡಿಮೆ ಇದೆ. ಈ ಕಂದ 600 ಗ್ರಾಂ ತೂಕ ಇದ್ದು ವೈದ್ಯರು ನವಜಾತ ಶಿಶುಗಳ ತೀವ್ರ ನಿಗಾ ಘಟಕ (ಎನ್‌ಐಸಿಯು)ದಲ್ಲಿಟ್ಟು ಚಿಕಿತ್ಸೆ ನೀಡುತ್ತಿದ್ದಾರೆ. ಕೋಟಾದ ಕಿಂಕರ್ ಆಸ್ಪತ್ರೆಯಲ್ಲಿ ಈ ವೃದ್ಧೆಗೆ ಹೆರಿಗೆಯಾಗಿದ್ದು, ಶಿಶು ಇನ್ನೊಂದು ಆಸ್ಪತ್ರೆಯ ಎನ್‌ಐಸಿಯುವಿನಲ್ಲಿದೆ. ಇಲ್ಲಿ ಪರಿಣತ ವೈದ್ಯರ ತಂಡ ಮಗುವಿನ ಆರೋಗ್ಯದ ಮೇಲೆ ತೀವ್ರ ನಿಗಾ ಇಟ್ಟಿದೆ.

Also Read : ನಾಯಿಯನ್ನು ತಿನ್ನಲು ಮನೆಯಂಗಳಕ್ಕೆ ಬಂದ ಚಿರತೆ...!

ಈ ಅಜ್ಜಿ ಈಗಾಗಲೇ ಒಂದು ಮಗುವನ್ನು ದತ್ತು ತೆಗೆದುಕೊಂಡಿದ್ದಾರೆ. ಆದರೆ, ತಾನೊಂದು ಮಗುವಿಗೆ ಜನ್ಮ ನೀಡಬೇಕೆಂಬುದು ಇವರ ಹೆಬ್ಬಯಕೆಯಾಗಿತ್ತು. ಈ ಬಗ್ಗೆ ವೈದ್ಯರನ್ನು ಸಂಪರ್ಕಿಸಿದಾಗ ಐವಿಎಫ್ ತಂತ್ರಜ್ಞಾನದ ಬಗ್ಗೆ ಇವರು ತಿಳಿದುಕೊಂಡಿದ್ದರು. ಹೀಗಾಗಿ, ಇವರಿಗೆ ಮತ್ತೆ ತಾಯ್ತನದ ಕನಸು ಚಿಗುರೊಡೆದಿತ್ತು.

Also Read : ಸೀತೆಯಂತೆ ವೇಷ ತೊಟ್ಟ ಈ ಕಂದನ ಖುಷಿ ನೋಡಿ... : ಮುದ ನೀಡುತ್ತದೆ ವಿಡಿಯೋ

ಆದರೆ, ಇವರಿಗೆ ಅವಧಿ ಪೂರ್ವದಲ್ಲೇ ಅಂದರೆ 6.5 ತಿಂಗಳಲ್ಲೇ ಹೆರಿಗೆಯಾಗಿದೆ. ಅದೂ ಅಲ್ಲದೆ, ದೈಹಿಕವಾಗಿ ಇವರು ತುಂಬಾ ನಿತ್ರಾಣರಾಗಿದ್ದು, ಇವರು ಒಂದೇ ಶ್ವಾಸಕೋಶವನ್ನೂ ಹೊಂದಿದ್ದಾರೆ. ಇದು ಕೂಡಾ ವೈದ್ಯರ ತಂಡಕ್ಕೆ ಸವಾಲಾಗಿತ್ತು ಎಂದು ಹೇಳಿದ್ದಾರೆ ಖಾಸಗಿ ಆಸ್ಪತ್ರೆಯ ವೈದ್ಯ ಅಭಿಲಾಷ ಕಿಂಕರ್.

Also Read : ಈ ಹಂಸಕ್ಕೆ ಪ್ಲಾಸ್ಟಿಕ್ ಕಂಡರೆ ಆಗುವುದಿಲ್ಲ...! : ಇಂಟರ್ನೆಟ್‌ನಲ್ಲಿ `ರಾಜ'ನಾದ ಹಂಸ... : ಇಲ್ಲಿದೆ ವಿಡಿಯೋ

ಏನಿದು ಐವಿಎಫ್ ತಂತ್ರಜ್ಞಾನ...?

ಐವಿಎಫ್ ಕೃತಕ ಗರ್ಭಧಾರಣಾ ವಿಧಾನ. ಈ ತಂತ್ರಜ್ಞಾನದ ಮೂಲಕ ಭ್ರೂಣವನ್ನು ಪ್ರಯೋಗಾಲಯದಲ್ಲಿ ಸೃಷ್ಟಿಸಿ ಬಳಿಕ ತಾಯಿಯ ಗರ್ಭಕ್ಕೆ ಸೇರಿಸಲಾಗುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಟೆಸ್ಟ್ ಟ್ಯೂಬ್ ಬೇಬಿ ಎಂದೂ ಕರೆಯುತ್ತಾರೆ. ಮಕ್ಕಳಿಲ್ಲದವರಿಗೆ ಬಹುತೇಕ ಸಂದರ್ಭದಲ್ಲಿ ಈ ವಿಧಾನ ವರದಾನವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ