ಆ್ಯಪ್ನಗರ

ಯುವಕನ ಪ್ಯಾಂಟಿನೊಳಗೆ ಸೇರಿಕೊಂಡ ಸರ್ಪ! : 7 ಗಂಟೆಗೂ ಹೆಚ್ಚು ಹೊತ್ತು ನಿಂತೇ ಕಳೆದ ಕಾರ್ಮಿಕ!

ಮಲಗಿದ್ದ ಯುವಕನ ಪ್ಯಾಂಟಿನೊಳಗೆ ನಾಗರಹಾವು ಸೇರಿಕೊಂಡ ವಿಚಿತ್ರ ಘಟನೆ ನಡೆದಿದೆ. ಪರಿಣಾಮ ಆ ಯುವಕ ಭಯದಲ್ಲೇ ಏಳು ಗಂಟೆಗೂ ಹೆಚ್ಚು ಹೊತ್ತು ನಿಂತೇ ಕಳೆದಿದ್ದ...!

Vijaya Karnataka Web 30 Jul 2020, 12:35 pm
ವಿಷ ಸರ್ಪವನ್ನು ದೂರದಲ್ಲಿ ನೋಡಿದಾಗಲೇ ಕೈಕಾಲುಗಳೆಲ್ಲಾ ನಡುಗಿ ಹೋಗುತ್ತದೆ. ಅಂತಹದರಲ್ಲಿ ಅದೇ ಸರ್ಪ ಪ್ಯಾಂಟಿನೊಳಗೆ ಸೇರಿಕೊಂಡರೆ ಪರಿಸ್ಥಿತಿ ಹೇಗಿರಬಹುದು ಊಹಿಸಿಕೊಳ್ಳಿ...! ಸದ್ಯ ಇಂತಹದ್ದೇ ಘಟನೆಯೊಂದು ನಡೆದಿದೆ. ಇದು ನಡೆದಿರುವುದು ಉತ್ತರ ಪ್ರದೇಶದ ಮಿರ್ಜಾಪುರದ ಜಮಾಲ್ಪುರ್ ಗ್ರಾಮದಲ್ಲಿ.
Vijaya Karnataka Web Image by antriksh kumar from Pixabay
| Representative image | Image by antriksh kumar from Pixabay


Also Read : ಬಾಸ್ಕೆಟ್‌ಬಾಲ್‌ನಲ್ಲಿ ಭರ್ಜರಿ ಸ್ಕೋರ್ : ಐವರು ಒಡಹುಟ್ಟಿದವರ ಹಿಂದಿದೆ ರೋಚಕ ಕತೆ

ಇಲ್ಲಿ ಕಾರ್ಮಿಕರ ತಂಡವೊಂದು ವಿದ್ಯುತ್‌ ಸಂಪರ್ಕಕ್ಕೆ ಸಂಬಂಧಿಸಿದ ಕೆಲಸದಲ್ಲಿ ನಿರತವಾಗಿತ್ತು. ಈ ಎಂಟು ಮಂದಿ ಕಾರ್ಮಿಕರ ತಂಡ ಅಲ್ಲೇ ಸಮೀಪದ ಅಂಗನವಾಡಿಯಲ್ಲಿ ಆಶ್ರಯ ಪಡೆಯುತ್ತಿತ್ತು. ರಾತ್ರಿ ಇವರೆಲ್ಲಾ ಇಲ್ಲೇ ಊಟ ಮಾಡಿ ಮಲಗುತ್ತಿದ್ದರು. ಆದರೆ, ಹೀಗೆ ಮಲಗಿದ್ದ ಸಂದರ್ಭದಲ್ಲಿ ತಡರಾತ್ರಿ ನಾಗರಹಾವೊಂದು ಆ ಅಂಗನವಾಡಿಗೆ ಎಂಟ್ರಿ ಕೊಟ್ಟಿತ್ತು. ಹೀಗೆ ಬಂದಿದ್ದ ಹಾವು ಅದೊಬ್ಬ ಕಾರ್ಮಿಕನ ಜೀನ್ಸ್‌ ಪ್ಯಾಂಟಿನೊಳಗೆ ಸೇರಿಕೊಂಡಿತ್ತು...!

Also Read : Hilarious Video : ಹುಲಿಗೇ `ಮೋಸ ಮಾಡಿ' ಜೀವ ಉಳಿಸಿಕೊಂಡ ಬಾತುಕೋಳಿ : ತಮಾಷೆಯಾಗಿದೆ ಈ ವಿಡಿಯೋ

ಆ ಯುವಕನ ಹೆಸರು 28 ವರ್ಷದ ಲವಕೇಶ್ ಕುಮಾರ್. ಇದು ಗೊತ್ತಾಗುತ್ತಿದ್ದಂತೆಯೇ ಪಾಪ ಲವಕೇಶ್ ಕುಮಾರ್ ಭಯದಿಂದ ನಡುಗಿ ಹೋಗಿದ್ದ. ಅಲ್ಲದೆ, ಮಲಗಿದ್ದಾತ ತಕ್ಷಣ ಎದ್ದು ನಿಂತಿದ್ದ. ಹಾಗೆ ಮಾಡಿದರೆ ಹಾವು ಇಲ್ಲಿಂದ ಹೋಗಬಹುದು ಎಂಬ ವಿಶ್ವಾಸದಲ್ಲಿ ಈತ ಎದ್ದಿದ್ದ.

Also Read : Childhood Memories : ಇದು ಎಂದೂ ಮರೆಯಲಾಗದ ಖುಷಿ : ಈ ಆಟವೇ ಬಲು ಸೊಗಸು...

ಜೊತೆಗಾರನ ಪ್ಯಾಂಟಿನೊಳಗೆ ಹಾವು ಸೇರಿಕೊಂಡ ವಿಷಯ ಗೊತ್ತಾದ ತಕ್ಷಣ ಜೊತೆಗಿದ್ದ ಕಾರ್ಮಿಕರು ಸಂಬಂಧಪಟ್ಟವರಿಗೆ ಸುದ್ದಿ ಮುಟ್ಟಿಸಿದ್ದರು. ಹಾವು ರಕ್ಷಿಸುವವರು ಎಲ್ಲರೂ ಬಂದರು. ಜಾಗರೂಕತೆಯಿಂದ ಲವಕೇಶ್ ಕುಮಾರ್ ಪ್ಯಾಂಟಿನೊಳಗಿಂದ ಹಾವನ್ನು ತೆಗೆಯಬೇಕಾಗಿತ್ತು. ಹೀಗಾಗಿ, ಸುಮಾರು ಏಳು ಗಂಟೆಗೂ ಹೆಚ್ಚು ಹೊತ್ತು ಯುವಕ ನಿಂತಲ್ಲೇ ನಿಲ್ಲಬೇಕಾಗಿತ್ತು. ಮುನ್ನೆಚ್ಚರಿಕೆಗಾಗಿ ಆಂಬ್ಯುಲೆನ್ಸ್‌ ಅನ್ನೂ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರೂ ಸ್ಥಳಕ್ಕೆ ಬಂದಿದ್ದರು. ಹೀಗೆ ತುಂಬಾ ಹೊತ್ತಿನ ಪ್ರಯತ್ನದ ಬಳಿಕ ಯುವಕನ ಪ್ಯಾಂಟನ್ನು ಕತ್ತರಿಸಿ ಹಾವು ಹೊರಗೆ ಬರುವಂತೆ ಮಾಡಲಾಗಿತ್ತು. ಅದೃಷ್ಟವಶಾತ್ ಹಾವು ಯುವಕನಿಗೆ ಕಚ್ಚಿರಲಿಲ್ಲ. ಹೀಗಾಗಿ, ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹಾವು ಕೂಡಾ ಯಾವುದೇ ತೊಂದರೆ ಇಲ್ಲದೆ ಬಚಾವ್ ಆಗಿದೆ. ಹೀಗಾಗಿ, ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ