ಆ್ಯಪ್ನಗರ

ಮಗನೊಂದಿಗೆ ಆರ್ಮ್ ರೆಸ್ಲಿಂಗ್‌ನಲ್ಲಿ ಸೋಲು!: ಸಿಟ್ಟಿಗೆದ್ದ ಅಪ್ಪನ ಕೃತ್ಯ ಕೇಳಿದ್ರೆ ಶಾಕ್ ಆಗ್ತೀರ!

ಮಗ ತನ್ನನ್ನು ತೋಳ್ಬಲದಲ್ಲಿ ಸೋಲಿಸಿದ ಎಂಬ ಸಿಟ್ಟಿಗೆ ತಂದೆಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಹೀಗಾಗಿ, ಅಪ್ಪ ಮಗನ ಈ ಆಟದಿಂದ ಉಂಟಾಗಿದ್ದ `ಆತಂಕ' ಶಮನಕ್ಕೆ ಕೊನೆಗೆ ಪೊಲೀಸರೇ ಬರಬೇಕಾಗಿತ್ತು.

Vijaya Karnataka Web 8 Jul 2020, 2:27 pm
ಆರ್ಮ್ ರೆಸ್ಲಿಂಗ್ ಎಂಬುದು ಖುಷಿ ಕೊಡುವ ಆಟ. ಸ್ನೇಹಿತರೆಲ್ಲಾ ಸೇರಿದಾಗ ಬಲಾಬಲ ಪ್ರದರ್ಶನಕ್ಕಾಗಿ ಈ ಆಟ ಆಡುವುದಿದೆ. ಅಂತೆಯೇ, ಈ ತಂದೆ ಮತ್ತು ಮಗ ಕೂಡಾ ತೋಳ್ಬಲದ ಕುಸ್ತಿಯಲ್ಲಿ ತೊಡಗಿದ್ದರು. ಆದರೆ, ಕೊನೆಗೆ ನಡೆಯಬಾರದ ಘಟನೆಯೊಂದು ನಡೆದೇ ಹೋಗಿತ್ತು.
Vijaya Karnataka Web Image by Ryan McGuire from Pixabay
| Representative image | Image by Ryan McGuire from Pixabay


Also Read : 13 ವರ್ಷದ ಹಿಂದಿನ ಮುದ್ದಾದ ದೃಶ್ಯ ಸೋದರರಿಂದ ಮರುಸೃಷ್ಟಿ...!

ತಂದೆ ಮಗ ಖುಷಿ ಖುಷಿಯಲ್ಲಿ ಆರ್ಮ್‌ ರೆಸ್ಲಿಂಗ್‌ನಲ್ಲಿ ತೊಡಗಿದ್ದರು. ಆದರೆ, ಮಗ ತಂದೆಯನ್ನು ಪದೇ ಪದೇ ಸೋಲಿಸಿದ್ದ. ಇದರಿಂದ ತಂದೆಗೆ ಇರಿಸುಮುರಿಸಾಗಿತ್ತು. ಅಲ್ಲದೆ, ಸೋಲಿನ ಹತಾಶೆಯಲ್ಲಿ ಕೋಪಗೊಂಡ ತಂದೆ ತನ್ನ ಬಂದೂಕು ತೆಗೆದು ಮನೆಯ ಛಾವಣಿಗೆ ಎರಡು ಸುತ್ತು ಗುಂಡಿನ ದಾಳಿ ನಡೆಸಿದ್ದ. ಹೀಗಾಗಿ, ಅಲ್ಲೊಂದು ಭಯದ ವಾತಾವರಣ ಸೃಷ್ಟಿಯಾಗಿತ್ತು. ತುಂಬಾ ಹೊತ್ತಿನ ತನಕ ಈ ಗಲಾಟೆ ನಡೆದಿದ್ದರಿಂದ ಕೊನೆಗೆ ಪೊಲೀಸರಿಗೆ ಮಾಹಿತಿ ನೀಡಬೇಕಾಗಿತ್ತು. ಅದೃಷ್ಟವಶಾತ್, ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

Also Read : ತಿಂಗಳ ಕ್ವಾರಂಟೈನ್ ಮುಗಿಸಿ ಭೇಟಿಯಾದ ಕ್ಷಣ : ಇದು ಪದಗಳಿಗೆ ನಿಲುಕದ ಸ್ನೇಹಿತರ ಖುಷಿ


55 ವರ್ಷದ ಕರ್ಟಿಸ್ ಝಿಮ್ಮೇರ್‌ಮ್ಯಾನ್ ಈ ಕೃತ್ಯವೆಸಗಿದಾತ. ಈತ ಮದ್ಯಪಾನ ಮಾಡಿ ಬಂದು ತನ್ನ ಅಪ್ರಾಪ್ತ ಪುತ್ರನೊಂದಿಗೆ ಆಟಕ್ಕೆ ಕುಳಿತ್ತಿದ್ದ. ಹೀಗಾಗಿ, ಕೆಲವು ಸಲ ಸೋಲುಂಡ ಬಳಿಕ ಈತ ತನ್ನ ಬಂದೂಕನ್ನು ತೆಗೆದು ದಾಳಿ ಮಾಡಿದ್ದ. ತನ್ನ ಮಗ ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೋಗುತ್ತಿದ್ದಾಗಲೇ ಈತ ದಾಳಿ ಮಾಡಿದ್ದ ಎಂದು ಗೊತ್ತಾಗಿದೆ. ಈ ಬಗ್ಗೆ ಬೂನ್ ಕೌಂಟಿ ಶೆರಿಫ್ ಇಲಾಖೆ ತನ್ನ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದೆ.

Also Read : ಒಂದೇ ಕೊಳದಲ್ಲಿ ನೀರು ಕುಡಿಯುತ್ತಿದೆ ಚಿರತೆ ಮತ್ತು ನೀಲ್‌ಗಾಯ್...!

ನಶೆಯಲ್ಲಿಯೇ ಇದ್ದ ಝಿಮ್ಮೇರ್‌ಮ್ಯಾನ್ ಪೊಲೀಸರು ಬಂದ ಬಳಿಕವೂ ಅವರ ಆದೇಶ ಪಾಲಿಸಲು ನಿರಾಕರಿಸಿದ್ದ. ಮನೆಯಿಂದ ಹೊರಬರುವುದಕ್ಕೆ ಈತ ಒಪ್ಪುತ್ತಲೇ ಇರಲಿಲ್ಲ. ಹೀಗಾಗಿ, ಈತನನ್ನು ಮನೆಯಿಂದ ಕರೆದೊಯ್ಯಲು ಎಂಟು ಗಂಟೆ ಹಿಡಿದಿತ್ತು. ಕೊನೆಗೆ ಯಾವುದೇ ಪ್ರತಿರೋಧವಿಲ್ಲದೆ ಝಿಮ್ಮೇರ್‌ಮ್ಯಾನ್ ಪೊಲೀಸರೊಂದಿಗೆ ಹೆಜ್ಜೆ ಇಟ್ಟಿದ್ದ. ಫೇಸ್‌ಬುಕ್‌ನಲ್ಲಿ ಈ ಘಟನೆಯ ಬಗ್ಗೆ ತಿಳಿದುಕೊಂಡ ಜನರು ಈ ತಂದೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅಧಿಕಾರಿಗಳ ಸಮಯೋಚಿತ ಕ್ರಮದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ