ಆ್ಯಪ್ನಗರ

ಮರಿಗಳೊಂದಿಗಿದ್ದ ತಾಯಿ ಹಕ್ಕಿ ಬಳಿ ಬಂದ ಹೆಬ್ಬಾವು! ಅಯ್ಯೋ... ಈ ದೃಶ್ಯವನ್ನು ನೋಡಿದಾಗ ಕಣ್ಣೀರೇ ಬರುತ್ತದೆ...!

ಈ ದೃಶ್ಯವನ್ನು ನೋಡಿದಾಗ ನಿಜಕ್ಕೂ ಕಣ್ಣೀರು ಬರುತ್ತದೆ... ತಾಯಿ ಪ್ರೀತಿ ಎಂತಹದ್ದು ಎಂಬುದಕ್ಕೂ ಇದು ಸಾಕ್ಷಿಯಾಗಿದೆ.

Vijaya Karnataka Web 22 Oct 2020, 4:56 pm
ತಾಯಿ ಉಸಿರು ನೀಡುವವಳು... ಇವಳು ಬರೀ ಜನ್ಮ ಮಾತ್ರ ಕೊಡುವುದಿಲ್ಲ, ಅಗತ್ಯ ಬಿದ್ದಾಗ ತನ್ನ ಪ್ರಾಣವನ್ನೇ ಮಕ್ಕಳಿಗೆ ನೀಡುತ್ತಾಳೆ... ಇದಕ್ಕೆ ಬೇಕಾದಷ್ಟು ಸಾಕ್ಷಿಗಳು ಕಾಣಸಿಗುತ್ತವೆ. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಸದಾ ತಾಯಿಯ ಪ್ರೀತಿಯ ಆಳವನ್ನು ಸಾರುವ ಅನೇಕ ವಿಡಿಯೋಗಳು ಕಾಣಸಿಗುತ್ತವೆ. ಈ ಎಲ್ಲಾ ವಿಡಿಯೋಗಳು ಕ್ಷಣಾರ್ಧದಲ್ಲಿ ನಮ್ಮ ಮನಸ್ಸು ಕಲಕುತ್ತವೆ. ಇಂತಹ ಮನ ಕಲಕುವ ವಿಡಿಯೋಗಳ ಸಾಲಿಗೆ ಇನ್ನೊಂದು ವಿಡಿಯೋ ಸೇರ್ಪಡೆಯಾಗಿದೆ. ಈ ವಿಡಿಯೋ ನೋಡಿದಾಗ ಹೃದಯ ಭಾರವಾಗುತ್ತದೆ. ನಮಗೇ ಗೊತ್ತಿಲ್ಲದಂತೆ ಕಣ್ಣೀರು ಕೆನ್ನೆ ಸವರಿ ಬಿದ್ದಿರುತ್ತದೆ.
Vijaya Karnataka Web Image by Karsten Paulick from Pixabay
| Representative image | Image by Karsten Paulick from Pixabay


ಇದು ಹಕ್ಕಿಯೊಂದರ ಕರುಣಾಜನಕ ದೃಶ್ಯ. ಈ ತಾಯಿ ತನ್ನ ದೊಡ್ಡ ಸಂಸಾರದೊಂದಿಗೆ ಖುಷಿಯಾಗಿ ಇದ್ದಳು. ಪುಟ್ಟ ಪುಟ್ಟ ಮಕ್ಕಳು ಅವಳ ಸುತ್ತಾ ಓಡಾಡುತ್ತಾ ಅಮ್ಮನ ಹೃದಯಕ್ಕೂ ಖುಷಿ ತಂದಿದ್ದವು. ಆದರೆ, ಇವಳ ಖುಷಿ ಅಲ್ಪಾಯುಷಿಯಾಗಿತ್ತು. ಯಾಕೆಂದರೆ, ರಕ್ಕಸ ಬೇಟೆಗಾರನ ದೃಷ್ಟಿ ಈ ಖುಷಿಯ ಸಂಸಾರದ ಮೇಲೆ ಬಿದ್ದಿತ್ತು... ಆ ಮೇಲೆ ನಡೆದದ್ದೆಲ್ಲಾ ನೋವಿನ ದೃಶ್ಯ...

Also Read : ಅಬ್ಬಬ್ಬಾ! ಭಯದಲ್ಲಿ ರಕ್ಷಿಸಿದವರ ಮೇಲೆಯೇ ದಾಳಿ ಮಾಡಿದ ಜಿಂಕೆ!: ಮುಂದೇನಾಯ್ತು ಗೊತ್ತಾ?

ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಧಾ ರಾಮನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಹೃದಯ ವಿದ್ರಾವಕ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪ್‌ ಹಕ್ಕಿ ತನ್ನ ಮರಿಗಳೊಂದಿಗೆ ಒಂದು ಸಣ್ಣ ಗುಂಡಿಯೊಳಗೆ ಇರುವ ದೃಶ್ಯದಿಂದ ಆರಂಭವಾಗುತ್ತದೆ. ಇದಾದ ಬಳಿಕ ಈ ಸೀನ್‌ನಲ್ಲಿ ಕಾಣಿಸಿಕೊಳ್ಳುವುದು ದೊಡ್ಡ ಹೆಬ್ಬಾವು. ಹೀಗೆ ಬರುವ ಹೆಬ್ಬಾವು ಸೀದಾ ಹಕ್ಕಿಗಳಿದ್ದ ಗುಂಡಿಯೊಳಗೆ ತಲೆ ಹಾಕುತ್ತದೆ. ಈ ವೇಳೆ, ತಾಯಿ ಹಕ್ಕಿ ಗಲಿಬಿಲಿಗೊಳ್ಳುತ್ತಾಳೆ. ಆದರೆ, ಇಂತಹ ಸಂದರ್ಭದಲ್ಲೂ ಮರಿಗಳ ಸುರಕ್ಷತೆಯ ಬಗ್ಗೆ ಯೋಚಿಸುವ ತಾಯಿ ಮೊದಲು ತನ್ನ ಮರಿಗಳನ್ನು ರಕ್ಷಿಸುತ್ತಾಳೆ... ತನ್ನ ಜೀವದ ಬಗ್ಗೆ ಇವಳು ಅರೆಕ್ಷಣವೂ ಯೋಚಿಸುವುದೇ ಇಲ್ಲ...

Also Read : ಮೀನಿನ ಆಸೆಯಲ್ಲಿ ಗಾಳ ಹಾಕಿದರೆ ಸಿಕ್ಕಿದ್ದು ದೊಡ್ಡ ಮೊಸಳೆ! : ಮುಂದೇನಾಯ್ತು ಗೊತ್ತಾ?


Also Read : ಮರಣ ಹೊಂದುವ ಮೊದಲೇ ತನ್ನ ನಿಧನವಾರ್ತೆಯನ್ನು ತಾನೇ ಬರೆದ ವ್ಯಕ್ತಿ : ಎಲ್ಲರನ್ನೂ ಭಾವುಕರನ್ನಾಗಿಸಿದ ಪತ್ರ


ಈಕೆಯ ತ್ಯಾಗವನ್ನು ನೋಡಿದಾಗಲೇ ಕಣ್ಣೀರು ಬರುತ್ತದೆ. ತಾಯಿಯ ಪ್ರೀತಿ ಎಷ್ಟು ಆಳ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾಗಿಲ್ಲ. ಇದೆ ಕಾರಣಕ್ಕೆ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರನ್ನೂ ಭಾವುಕರನ್ನಾಗಿಸಿದೆ. ಬಹುಶಃ ಈ ದೃಶ್ಯ ನೋಡಿ ನಿಮ್ಮ ಹೃದಯವೂ ಭಾರವಾಗಿರಬಹುದು..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ