ಆ್ಯಪ್ನಗರ

ಈಜಲು ಹೋಗಿದ್ದ ವ್ಯಕ್ತಿಯ ಮೂತ್ರಕೋಶ ಸೇರಿತ್ತು ಜಿಗಣೆ...!

ಈಜಲು ಹೋಗಿದ್ದ ವೃದ್ಧರೊಬ್ಬರು ಜಿಗಣೆ ಕಾರಣದಿಂದ ಸಂಕಷ್ಟಕ್ಕೀಡಾಗಿದ್ದರು. ಸಹಿಸಲಸಾಧ್ಯವಾದ ಹೊಟ್ಟೆನೋವಿನ ಕಾರಣದಿಂದ ಆಸ್ಪತ್ರೆಗೆ ಹೋದಾಗಲೇ ಗೊತ್ತಾಗಿದ್ದು ಆಘಾತಕಾರಿ ಸತ್ಯ...!

Vijaya Karnataka Web 26 Jun 2020, 12:12 pm
ಕಾಂಬೋಡಿಯಾದ ವ್ಯಕ್ತಿಯೊಬ್ಬರು ಕೊಳದಲ್ಲಿ ಈಜಲು ಹೋಗಿದ್ದರು. ಖುಷಿಯಲ್ಲಿ ಈಜಿ ಮನೆಗೆ ಹೋದ ಇವರಿಗೆ ಸಣ್ಣದಾಗಿ ಹೊಟ್ಟೆ ನೋವು ಶುರುವಾಗಿತ್ತು. ರಾತ್ರಿ ಶೌಚಾಲಯಕ್ಕೆ ಹೋದಾಗ ತಡೆಯಲಾರದಂತಹ ನೋವು ಕಾಡಲಾರಂಭಿಸಿತ್ತು. ಹೀಗಾಗಿ, ತಕ್ಷಣ ಇವರನ್ನು ಮನೆಯವರು ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ, ವೈದ್ಯರು ಪರೀಕ್ಷೆ ನಡೆಸಿದಾಗ ಗೊತ್ತಾಗಿದ್ದು ಆಘಾತಕಾರಿ ಅಂಶ. ಅದೇನೆಂದರೆ, ಈ ವ್ಯಕ್ತಿಯ ಮೂತ್ರಕೋಶದೊಳಗೆ ಇಂಬಳ ಅರ್ಥಾತ್ ಜಿಗಣೆ ಸೇರಿಕೊಂಡಿತ್ತು...! ಈಜಲು ಹೋಗಿದ್ದಾಗ ಕೊಳದಲ್ಲಿ ಇದ್ದ ಇಂಬಳ ಈ ವ್ಯಕ್ತಿಯ ಜನನಾಂಗದ ಮೂಲಕ ಮೂತ್ರಕೋಶ ಸೇರಿತ್ತು...!
Vijaya Karnataka Web Image by Darko Djurin from Pixabay
| Representative image | Image by Darko Djurin from Pixabay


Also Read : ಶ್ವಾನಗಳೂ ಕ್ಷಮೆ ಕೇಳುತ್ತವೆ! : ಸೋದರನ ತಿಂಡಿ ಕದ್ದು ಕ್ಷಮೆ ಕೇಳಿ ಎಲ್ಲರ `ಹೃದಯ ಕದ್ದ' ಮಿತ್ರ!

ಹೀಗೆ ಮೂತ್ರಕೋಶ ಸೇರಿದ್ದ ಜಿಗಣೆ ರಕ್ತ ಹೀರಲು ಆರಂಭಿಸಿದ್ದರಿಂದ ಹೊಟ್ಟೆ ನೋವು ಶುರುವಾಗಿತ್ತು. ಈ ವೃದ್ಧರ ಸ್ಥಿತಿ ಕಂಡ ವೈದ್ಯರು ತಕ್ಷಣ ಇಂಬಳ ದೇಹದೊಳಗೆ ಯಾವ ಭಾಗಗಳಲ್ಲಿ ಗಾಯ ಮಾಡಿದೆ ಎಂದು ತಿಳಿದುಕೊಳ್ಳಲು ಸ್ಕ್ಯಾನ್ ನಡೆಸಿದರು. ಬಳಿಕ ಬೈಪೋಲಾರ್ ರೆಸೆಕ್ಟೊಸ್ಕೋಪ್ ಎಂಬ ಉಪಕರಣವನ್ನು ಬಳಸಿ ಈ ಇಂಬಳವನ್ನು ಕೊಂದ ವೈದ್ಯರು ಅದನ್ನು ದೇಹದಿಂದ ಹೊರ ತೆಗೆದಿದ್ದಾರೆ.

Also Read : ಪಾರ್ಸೆಲ್ ಮನೆ ಬಾಗಿಲಿನಲ್ಲಿಟ್ಟು ಓಡಿದ ಮಹಿಳೆ! : ಈಕೆಯನ್ನು ಮೆಚ್ಚಿದ ನೆಟ್ಟಿಗರು!

ಈ ಇಂಬಳ ಈ ವ್ಯಕ್ತಿಯ ಸುಮಾರು 500 ಮಿಲಿಲೀಟರ್‌ಗಿಂತ ಹೆಚ್ಚು ರಕ್ತ ಹೀರಿತ್ತು. ಹೀಗಾಗಿ, ಇದನ್ನು ದೇಹದಿಂದ ಹೊರ ತೆಗೆಯುವ ಪ್ರಕ್ರಿಯೆ ಕೊಂಚ ಕಷ್ಟಕರವಾಗಿತ್ತು ಎಂದು ಪ್ರಖ್ಯಾತ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

Also Read : ಮಕ್ಕಳು ರಸ್ತೆಯಲ್ಲಿ ಆಡುವುದನ್ನು ನಿಲ್ಲಿಸಲು ಬಂದ ಪೊಲೀಸರೇ ಮಕ್ಕಳೊಂದಿಗೆ ಆಡಿದ್ದರು!

ಮಳೆಗಾಲದಲ್ಲಿ ಕೊಳಗಳಿಗೆ ಈಜಲು ಹೋಗುವವರು ಕೊಂಚ ಎಚ್ಚರಿಕೆಯಿಂದ ಇರಬೇಕು ಎಂದು ಈ ವ್ಯಕ್ತಿಗೆ ಚಿಕಿತ್ಸೆ ನೀಡಿರುವ ಕ್ಯಾಲ್ಮೆಟ್ ಆಸ್ಪತ್ರೆಯ ವೈದ್ಯರು ಕಿವಿಮಾತು ಹೇಳಿದ್ದಾರೆ. `ಮಳೆಗಾಲದಲ್ಲಿ ನೀರಿನಲ್ಲಿ ಜಿಗಣೆ ಸೇರಿದಂತೆ ಇತರ ಕೀಟಗಳ ಸಂಖ್ಯೆ ಜಾಸ್ತಿ ಇರುತ್ತದೆ. ಹೀಗಾಗಿ, ದೇಹದಲ್ಲಿ ಸಣ್ಣ ರೀತಿಯ ನೋವು ಕಂಡು ಬಂದರೂ ತಕ್ಷಣ ವೈದ್ಯರ ಸಲಹೆ ಪಡೆದುಕೊಳ್ಳಿ' ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆ ಬಳಿಕ ಈ ರೋಗಿ ಚೇತರಿಸಿಕೊಂಡಿದ್ದು, ಸದ್ಯ ಮನೆಗೆ ತೆರಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ