ಆ್ಯಪ್ನಗರ

Shocking News : ನೊಣವನ್ನು ಓಡಿಸಲು ಹೋಗಿ ಮನೆಯನ್ನೇ ಸುಟ್ಟ ವೃದ್ಧ...!

ವೃದ್ಧರೊಬ್ಬರು ನೊಣವನ್ನು ಓಡಿಸಲು ಹೋಗಿ ತನ್ನ ಮನೆಯಲ್ಲೇ ಬೆಂಕಿ ಆಕಸ್ಮಿಕ ಸಂಭವಿಸುವುದಕ್ಕೆ ಕಾರಣರಾಗಿದ್ದಾರೆ. ಅಚಾನಕ್ಕಾಗಿ ಸಂಭವಿಸಿದ ಈ ದುರ್ಘಟನೆಯಿಂದ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.

Vijaya Karnataka Web 8 Sep 2020, 10:50 am
ಕಿಚ್ಚ ಸುದೀಪ್ ಅಭಿನಯದ, ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ `ಈಗ' ಚಿತ್ರದ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತಿದೆ. ಕೊಲೆಯಾಗಿದ್ದ ಹೀರೋ ನೊಣದ ರೂಪದಲ್ಲಿ ಬಂದು ಸೇಡು ತೀರಿಸಿಕೊಳ್ಳುವ ಕತೆ ಇದು. ಹಗೆ ತೀರಿಸಲು ಬಂದಿದ್ದ ನೊಣದ ಕೋಪಕ್ಕೆ ತುತ್ತಾಗುವ ವಿಲನ್ ಪಾತ್ರವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದವರು ಕಿಚ್ಚ ಸುದೀಪ್. ಈ ಕಾಡುವ ನೊಣವನ್ನು ಹಿಮ್ಮೆಟ್ಟಿಸುವ ಸಾಕಷ್ಟು ಪ್ರಯತ್ನಗಳು ಬಹುತೇಕ ಸಂದರ್ಭದಲ್ಲಿ ಈ ವಿಲನ್ ಪಾತ್ರವನ್ನೇ ಕಾಡುತ್ತದೆ. ಹೀಗಾಗಿ, ಒಂದಷ್ಟು ಅನಾಹುತಗಳೂ ಸಂಭವಿಸುತ್ತವೆ. ನೊಣದ ಕಾಟ, ಖಳಪಾತ್ರದ ಸಂಕಟ ತೆರೆ ಮೇಲೆ ಎಲ್ಲರನ್ನೂ ರಂಜಿಸಿತ್ತು.
Vijaya Karnataka Web Image by adege from Pixabay
| Representative image | Image by adege from Pixabay


ಸದ್ಯ ಇದೇ ರೀತಿಯ ಸನ್ನಿವೇಶವನ್ನು ನೆನಪಿಸುವಂತಹ ಘಟನೆಯೊಂದು ನಡೆದಿದೆ. ಅಂದರೆ, ನೊಣವನ್ನು ಓಡಿಸಲು ಹೋಗಿ ಇಲ್ಲೊಂದು ಕಡೆ ಮನೆಗೇ ಬೆಂಕಿ ಬಿದ್ದಿದೆ. ಆದರೆ, ಈ ನೊಣ ಸೇಡು ತೀರಿಸಲು ಬಂದದ್ದಲ್ಲ ಮತ್ತು ಈ ನೊಣವನ್ನು ಕೊಲ್ಲಲು ಹೊರಟವರು ವಿಲನ್ ಕೂಡಾ ಅಲ್ಲ...! ಅಚಾನಕ್ಕಾಗಿ ಸಂಭವಿಸಿದ ಘಟನೆ ಇದು. ಆದರೆ, `ಈಗ' ಚಿತ್ರದ ಸನ್ನಿವೇಶವನ್ನು ನೆನಪಿಸುವಂತೆಯೇ ಈ ಮನೆಯ ಒಂದಷ್ಟು ಭಾಗ ಭಸ್ಮವಾಗಿದೆ...!

Also Read : ತನ್ನ ಕಣ್ಣಿನೊಳಗೆ ತನ್ನದೇ ಬಿಂಬ...! : ಆನಿಮೇಟರ್ ಸೃಷ್ಟಿಸಿದ್ದಾರೆ ಅದ್ಭುತ...!

ಇದು ನಡೆದಿರುವುದು ಫ್ರಾನ್ಸ್‌ನಲ್ಲಿ. ಇಲ್ಲೊಬ್ಬರು 80ರ ವೃದ್ಧ ಡೋರ್ಡೋಗ್ನೆನಲ್ಲಿರುವ ತಮ್ಮ ಮನೆಯಲ್ಲಿ ಊಟಕ್ಕೆ ಸಿದ್ಧ ಮಾಡುತ್ತಿದ್ದರು. ಈ ವೇಳೆ, ನೊಣವೊಂದು ಇವರನ್ನು ಕಾಡುತ್ತಿತ್ತು. ಹೀಗಾಗಿ, ಈ ನೊಣವನ್ನು ಓಡಿಸುವ ಸಲುವಾಗಿ ಪಾಪದ ಈ ವೃದ್ಧ ಎಲೆಕ್ಟ್ರಿಕ್ ಬ್ಯಾಟನ್ನು ಬಳಸಿದ್ದರು.

Also Read : ಸೂಟ್ ಮತ್ತು ಶಾರ್ಟ್ಸ್‌ ತೊಟ್ಟು ಆನ್‌ಲೈನ್ ಮೀಟಿಂಗ್ : ನಕ್ಕು ಸುಸ್ತಾದ ಸಹೋದ್ಯೋಗಿಗಳು!

ಈ ಬ್ಯಾಟನ್ನು ಬೀಸಿದಾಗ ಕೀಟಗಳು ಸಾಯುತ್ತಿದ್ದವು. ಆದರೆ, ಈ ಕ್ಷಣದಲ್ಲಿ ಇಲ್ಲಿ ನಡೆಯಬಾರದ ಘಟನೆಯೊಂದು ನಡೆದಿತ್ತು. ಅದೇನೆಂದರೆ, ಅದ್ಹೇಗೋ ಈ ವೃದ್ಧ ಇದ್ದ ಮನೆಯ ಅಡುಗೆ ಗ್ಯಾಸ್ ಸಿಲಿಂಡರ್ ಲೀಕ್ ಆಗುತ್ತಿತ್ತು. ಇದು ಇವರಿಗೆ ಗೊತ್ತಿರಲಿಲ್ಲ. ಇವರು ಬ್ಯಾಟ್ ಬೀಸುತ್ತಾ ಮುಂದೆ ಸಾಗುತ್ತಿದ್ದಂತೆಯೇ ಗ್ಯಾಸ್‌ನಿಂದಾಗಿ ಎಲೆಕ್ಟ್ರಿಕ್ ಬ್ಯಾಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಅಡುಗೆ ಮನೆಗೇ ಬೆಂಕಿ ಹೊತ್ತಿಕೊಂಡಿತ್ತು...! ಪರಿಣಾಮ, ಈ ಮನೆಯ ಅಡುಗೆ ಕೋಣೆಯ ಛಾವಣಿ ಸಂಪೂರ್ಣ ಬೆಂಕಿಗಾಹುತಿಯಾಗಿತ್ತು. ಅದೃಷ್ಟವಶಾತ್ ಈ ಘಟನೆಯಲ್ಲಿ ವೃದ್ಧ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಬಳಿಕ ಇವರನ್ನು ತಪಾಸಣೆಗಾಗಿ ಲಿಬೋರ್ನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

Also Read : ಮೊಮ್ಮಗನೊಂದಿಗೆ ಕುಕೀಸ್ ತಯಾರಿಸುವ ಅಜ್ಜಿ: ಮುಂದೇನಾಯ್ತು ಗೊತ್ತಾ? : ನೋಡಿದರೆ ನಕ್ಕು ಸುಸ್ತಾಗ್ತೀರಿ!

ಆದರೆ, ಅಜ್ಜನ ಈ ಪ್ರಯತ್ನದಲ್ಲಿ ನೊಣ ಸತ್ತೋಯ್ತಾ ಇಲ್ವಾ ಗೊತ್ತಿಲ್ಲ. ಆದರೆ, ಪಾಪ ಅವರ ಮನೆ ಮಾತ್ರ ಸಾಕಷ್ಟು ಹಾನಿಗೊಳಗಾಗಿತ್ತು. ಈ ಕತೆ ಕೇಳಿ ಎಲ್ಲರೂ ಮರುಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ