ಆ್ಯಪ್ನಗರ

ಮೊಬೈಲ್ ಫೋನ್ ಚಾರ್ಜಿಗಿಟ್ಟು ಹೆಡ್‌ಫೋನ್ ಹಾಕಿಕೊಂಡು ಮ್ಯಾಚ್ ನೋಡುತ್ತಿದ್ದ ವ್ಯಕ್ತಿ ದುರ್ಮರಣ...!

ಈಗೀಗ ಮೊಬೈಲ್ ಫೋನ್ ಚಾರ್ಜಿಗಿಟ್ಟು ಮಾತನಾಡುವುದು, ಚಾರ್ಜಿಗಿಟ್ಟಾಗಲೇ ಹೆಡ್‌ಫೋನ್ ಹಾಕಿಕೊಂಡು ಮೊಬೈಲ್ ಫೋನ್ ನೋಡುವುದು ಹೆಚ್ಚಾಗುತ್ತಿದೆ. ಆದರೆ, ಈ ಅಭ್ಯಾಸ ನಿಮಗೂ ಇದ್ದರೆ ಅದನ್ನು ಈಗಿಂದಲೇ ನಿಲ್ಲಿಸುವುದು ಒಳ್ಳೆಯದು...!

Vijaya Karnataka Web 15 Nov 2019, 6:41 pm
ಬ್ಯಾಂಕಾಕ್ : ಸ್ಮಾಟ್ ಫೋನ್ ಬಂದ ಮೇಲೆ ಈಗ ಎಲ್ಲರೂ ಮನುಷ್ಯರೊಂದಿಗೆ ಇರುವುದಕ್ಕಿಂತ ಹೆಚ್ಚು ಫೋನಿನ ಜೊತೆಗೇ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಫೋನ್ ಊಟ, ನಿದ್ದೆಗಿಂತಲೂ ಹೆಚ್ಚು ಎಂಬಂತಾಗಿದೆ. ಆದರೆ, ಇದರಿಂದ ಆಗುವ ಅನಾಹುತಗಳಿವೆಯಲ್ವಾ...? ಅದನ್ನು ಊಹಿಸಲೇ ಆಗುವುದಿಲ್ಲ. ಒಮ್ಮೊಮ್ಮೆ ಇದು ಜೀವವನ್ನೇ ತೆಗೆದು ಬಿಡುತ್ತದೆ...!
Vijaya Karnataka Web phone
ಸಾಂದರ್ಭಿಕ ಚಿತ್ರ


ಥೈಲ್ಯಾಂಡಿನಲ್ಲಿ ವ್ಯಕ್ತಿಯೊಬ್ಬರು ಇದೇ ಸ್ಮಾಟ್ ಫೋನಿನ ಕ್ರೇಝ್‌ಗೆ ಬಲಿಯಾಗಿದ್ದಾರೆ. ಥೈಲ್ಯಾಂಡಿನ ಸಮುತ್ ಪ್ರಕಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರಾತ್ರಿ ಇವರು ಬೆಡ್ ಮೇಲೆ ಮಲಗಿಕೊಂಡು ಸ್ಮಾರ್ಟ್‌ ಫೋನ್ ಚಾರ್ಜಿಗಿಟ್ಟು ಹೆಡ್‌ಫೋನ್ ಹಾಕಿಕೊಂಡು ಫುಟ್ಬಾಲ್ ಮ್ಯಾಚ್ ನೋಡುತ್ತಿದ್ದರು. ಈ ವೇಳೆ, ವಿದ್ಯುತ್ ಶಾಕ್ ಹೊಡೆದು ಇವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. 40 ವರ್ಷದ ಸೋಮಚೈ ಸಿಂಗ್‌ಕಾರ್ನ್ ಮೃತ ದುರ್ದೈವಿ.

Also Read : ತಂದೆಗಾಗಿ ಆಸ್ಪತ್ರೆಯಲ್ಲಿ ಮದುವೆಯಾದ ಜೋಡಿ...!

ಕೋಣೆಯಲ್ಲಿಮಲಗಿ ಮೊಬೈಲ್ ಫೋನ್ ನೋಡುತ್ತಿದ್ದ ಸೋಮಚೈ ಸಿಂಗ್‌ಕಾರ್ನ್ ಮೃತಪಟ್ಟ ವಿಷಯ ಗೊತ್ತಾಗಿದ್ದು ಮರುದಿನ ಬೆಳಗ್ಗೆ. ರೆಸ್ಟೋರೆಂಟಿನಲ್ಲಿ ಬಾಣಸಿಗರಾಗಿದ್ದ ಸೋಮಚೈ ಸಿಂಗ್‌ಕಾರ್ನ್ ಅವರನ್ನು ಅವರ ಸ್ನೇಹಿತ ಬೆಳಗ್ಗೆ ಎಬ್ಬಿಸಲು ಬಂದಾಗ ಇವರು ಯಾವುದೇ ರೀತಿಯ ಪ್ರತಿಕ್ರಿಯೆ ತೋರಿಸಲಿಲ್ಲ. ಇದರಿಂದ ಆತಂಕಗೊಂಡ ಸ್ನೇಹಿತ ತಕ್ಷಣ ತನ್ನ ಮಾಲಿಕನಿಗೆ ವಿಷಯ ತಿಳಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಹೋದ ಮೇಲೆಯೇ ಸೋಮಚೈ ಮೃತಪಟ್ಟಿರುವ ವಿಷಯ ಇವರಿಗೆಲ್ಲಾ ಗೊತ್ತಾಗಿದ್ದು.

Also Read : ಐಸ್ ಕ್ರೀಮ್ ಕದಿಯುವ ದೃಶ್ಯ ಟಿವಿಯಲ್ಲಿ ಲೈವ್ ಆಗಿ ಪ್ರಸಾರ : ನಗೆಯುಕ್ಕಿಸುತ್ತದೆ ಈ ವಿಡಿಯೋ

ಸೋಮಚೈ ಅವರ ಭುಜ ಮತ್ತು ಕತ್ತಿನ ಭಾಗದಲ್ಲಿ ವಿದ್ಯುತ್ ಶಾಕ್‌ನಿಂದಾದ ಸುಟ್ಟ ಗಾಯಗಳಾದ ಗುರುತುಗಳಾಗಿತ್ತು. ಸ್ನೇಹಿತ ಹೇಳುವ ಪ್ರಕಾರ, ಸೋಮಚೈಗೆ ದಿನಾಲೂ ಮಲಗುವ ಮುನ್ನ ಫುಟ್ಬಾಲ್ ಮ್ಯಾಚ್ ನೋಡುವ ಅಥವಾ ಮ್ಯೂಸಿಕ್ ಕೇಳುವ ಅಭ್ಯಾಸ ಇತ್ತಂತೆ.

Also Read : 3 ಮೊಟ್ಟೆಗೆ 1,672 ರೂಪಾಯಿ...! : ಮ್ಯೂಸಿಕ್ ಡೈರೆಕ್ಟರ್ ತಬ್ಬಿಬ್ಬು...!

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಕೋಣೆಯಲ್ಲಿ ಬಿಯರ್ ಬಾಟಲಿ ಮತ್ತು ಕೋಕಾ ಕೋಲಾ ಸಿಕ್ಕಿದೆ. ಬಳಿಕ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಸೋಮಚೈ ವಿದ್ಯುದ್ಘಾತದಿಂದಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ಸತ್ಯಾಂಶ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅತಿಯಾದ ಮೊಬೈಲ್ ಫೋನ್ ಬಳಕೆ ಒಳ್ಳೆಯದಲ್ಲ. ಅದರಲ್ಲೂ ಫೋನ್ ಚಾರ್ಜಿಗಿಟ್ಟು ಮಾತನಾಡುವುದು, ಹಾಡು ಕೇಳುವುದು ಯಾವತ್ತಿದ್ದರೂ ಅಪಾಯವೇ... ಹೀಗಾಗಿ, ಇಂತಹ ಅಭ್ಯಾಸಗಳೇನಾದರೂ ಇದ್ದರೆ ಶೀಘ್ರ ಅದನ್ನು ಬದಲಾಯಿಸಿಕೊಳ್ಳುವುದು ಎಲ್ಲರಿಗೂ ಒಳಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ