ಆ್ಯಪ್ನಗರ

ನೀರು ಕುಡಿಯುತ್ತಿದ್ದ ಚೀತಾವನ್ನು ಹೊತ್ತೊಯ್ದ ಮೊಸಳೆ! : ಭಯಾನಕ ದೃಶ್ಯವಿದು!

ಇದೊಂದು ಭಯಾನಕ ಬೇಟೆಯ ದೃಶ್ಯ. ಈ ದೃಶ್ಯವನ್ನು ಕಂಡಾಗ ಒಂದು ಕ್ಷಣ ದಿಗಿಲಾಗುತ್ತದೆ...!

Vijaya Karnataka Web 4 Dec 2020, 1:16 pm
ವನ್ಯಜೀವಿಗಳದ್ದು ಸದಾ ಎಲ್ಲರಲ್ಲೂ ಕುತೂಹಲ ಮೂಡಿಸುವಂತಹ ಲೋಕ. ಈ ಪ್ರಾಣಿಗಳ ಜೀವನ ಕ್ರಮ ಕ್ಷಣ ಕ್ಷಣಕ್ಕೂ ಎಲ್ಲರಲ್ಲೂ ಬೆರಗು ಮೂಡಿಸುತ್ತದೆ. ಇದೇ ಕಾರಣಕ್ಕೆ ವನ್ಯಜೀವಿಗಳನ್ನು ನೋಡಲು ಜನರು ತುಂಬಾ ಆಸಕ್ತಿ ವಹಿಸುತ್ತಾರೆ. ಹೀಗೆ ಆಸಕ್ತಿಯಿಂದ ವನ್ಯಲೋಕವನ್ನು ನೋಡುವಾಗ ಒಂದಷ್ಟು ಅಪರೂಪದ ಘಟನೆಗಳೂ ಕಾಣಸಿಗುತ್ತವೆ. ಇಂತಹ ಅಪರೂಪದ ದೃಶ್ಯಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲೂ ಎಲ್ಲರ ಗಮನ ಸೆಳೆಯುತ್ತವೆ. ಇದು ಕೂಡಾ ಅಂತಹದ್ದೇ ಒಂದು ವಿಡಿಯೋ. ನೀವು ವನ್ಯಲೋಕದ ಬಗೆಗಿನ ಕುತೂಹಲಿಗಳಾಗಿದ್ದರೆ ಖಂಡಿತಾ ಈ ದೃಶ್ಯ ನಿಮ್ಮಲ್ಲಿ ಬೆರಗು ಮೂಡಿಸುತ್ತದೆ.
Vijaya Karnataka Web Image by Robert Balog from Pixabay
| Representative image | Image by Robert Balog from Pixabay


Also Read : ವಿವಾಹಕ್ಕೆ 3 ದಿನ ಮುನ್ನ ವಧುವಿಗೆ ಕೊರೊನಾ ಸೋಂಕು! : ಆದರೂ ಡಿಫ್ರೆಂಟ್ ಆಗಿ ನಡೆಯಿತು ಮದುವೆ!

ಇದು ಪ್ರಾಣಿಯ ಅಪರೂಪದ ಬೇಟೆಯ ದೃಶ್ಯ. ಬೇಟೆ ಪ್ರಾಣಿಗಳ ಆಹಾರ ಕ್ರಮ. ಒಂದು ಪ್ರಾಣಿಯನ್ನು ತಿಂದು ಮತ್ತೊಂದು ಪ್ರಾಣಿ ಬದುಕುವುದು ಕಾಡಿನ ಆಹಾರ ಚಕ್ರ ಮತ್ತು ಸಹಜ ಜೀವನ ಪದ್ಧತಿ. ಹೊಂಚು ಹಾಕಿ ಬೇಟೆಯಾಡುವುದರಲ್ಲಿ ಅದೆಷ್ಟೋ ಪ್ರಾಣಿಗಳು ಪಳಗಿರುತ್ತವೆ. ಕೆಲ ಜೀವಿಗಳ ಬೇಟೆಯ ಚಾಕಚಕ್ಯತೆಯನ್ನು ನೋಡಿದಾಗಲೇ ದಿಗಿಲಾಗುತ್ತದೆ. ಇದು ಕೂಡಾ ಅಂತಹದ್ದೇ ಬೆರಗುಗೊಳಿಸುವಂತಹ ಬೇಟೆಯ ದೃಶ್ಯ.


Also Read : ಹೇರ್‌ಕಟ್ ವೇಳೆ ಬಾಲಕನ ಕೆಂಡದಂತಹ ಕೋಪ : ವೈರಲ್ ವಿಡಿಯೋಗೆ ಬಾಲಿವುಡ್ ಹಾಡಿನ ಟಚ್...!

@Saket_Badola ಎಂಬ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಆದ ದೃಶ್ಯವಿದು. ಚೀತಾ ಜಲಮೂಲದ ಬಳಿ ನೀರು ಕುಡಿಯುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಚೀತಾ ನಿಶ್ಚಿಂತೆಯಿಂದ ತನ್ನ ದಾಹ ನೀಗಿಸಿಕೊಳ್ಳುತ್ತಿರುತ್ತದೆ. ಅಲ್ಲಿ ತನಕ ನೀರು ಕೂಡಾ ಶಾಂತವಾಗುತ್ತದೆ. ಆದರೆ, ಅದೊಂದು ಕ್ಷಣದಲ್ಲಿ ಇದ್ದಕ್ಕಿದ್ದಂತೆಯೇ ನೀರಿನ ಬುಗ್ಗೆ ಮೇಲೇಳುತ್ತದೆ. ಆಗಲೇ ಕಣ್ಣಿಗೆ ಕಾಣಿಸುವುದು ಒಂದು ಬೃಹತ್ ಗಾತ್ರದ ಮೊಸಳೆ...! ಹೀಗೆ ಹಾರಿದ ಮೊಸಳೆ ನೋಡ ನೋಡುತ್ತಿದ್ದಂತೆಯೇ ಚೀತಾವನ್ನು ಎಳೆದು ನೀರಿನತ್ತ ಸಾಗುತ್ತದೆ...! ಒಂದು ಕ್ಷಣ ಎಲ್ಲರನ್ನೂ ದಿಗಿಲುಗೊಳಿಸುವಂತಹ ದೃಶ್ಯವಿದು...

Also Read : ಶ್ವಾನದೊಂದಿಗೆ ಮುದ್ದು ಕಂದನ ಗೆಳೆತನ : ಮತ್ತೆ ಮತ್ತೆ ನೋಡಬೇಕೆನಿಸುವ ಸುಂದರ ಸ್ನೇಹವಿದು


ಸದ್ಯ ಈ ವಿಡಿಯೋವನ್ನು ಎಲ್ಲರೂ ಬಲು ಕುತೂಹಲದಿಂದ ನೋಡಿದ್ದಾರೆ. ತಕ್ಷಣಕ್ಕೆ ಈ ದೃಶ್ಯ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತದೆ. ಒಂದಷ್ಟು ಜನ ಚೀತಾದ ಬಗ್ಗೆ ಮರುಕ ವ್ಯಕ್ತಪಡಿಸಿದರೆ, ಇನ್ನೊಂದಷ್ಟು ಜನ ಮೊಸಳೆಯ ಬೇಟೆಯ ಶೈಲಿಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ