ಆ್ಯಪ್ನಗರ

ಎಲೆಕ್ಷನ್ ಮುಗಿದು ವಾರದ ಬಳಿಕ ಜನರಿಗೆ `ವೋಟ್ ಮಾಡಿ' ಎಂದ ಟ್ರಂಪ್ ಪುತ್ರ! : ಟ್ವೀಟ್ ವೈರಲ್

`ವೋಟ್ ಮಾಡಿ' ಹೀಗೊಂದು ಟ್ವೀಟ್‌ನ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಟ್ವೀಟ್ ಮಾಡಿದ್ದು ಬೇರೆ ಯಾರೂ ಅಲ್ಲ ಡೊನಾಲ್ಡ್‌ ಟ್ರಂಪ್ ಪುತ್ರ...!

Vijaya Karnataka Web 11 Nov 2020, 11:08 am
ಅಮೇರಿಕಾದ ಎಲೆಕ್ಷನ್ ಮುಗಿದು, ಫಲಿತಾಂಶ ಕೂಡಾ ಬಂದಿದೆ. ನೂತನ ಅಧ್ಯಕ್ಷ ಜೋ ಬಿಡೆನ್ ಅಧಿಕಾರಕ್ಕೇರಲು ಸಜ್ಜಾಗುತ್ತಿದ್ದಾರೆ. ಆದರೆ, ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಬೆಂಬಲಿಗರ ಪ್ರತಿಭಟನೆ, ಹಗ್ಗಜಗ್ಗಾಟಗಳು ಇನ್ನೂ ಮುಂದುವರಿದಿದೆ. ಹೀಗಾಗಿ, ಅಮೇರಿಕಾದಲ್ಲಿ ಚುನಾವಣಾ ಫಲಿತಾಂಶ ಬಂದು ದಿನ ಕಳೆದರೂ ಸಂಘ‍ರ್ಷಗಳ ಕಾವು ಕಡಿಮೆಯಾಗಿಲ್ಲ. ಇಡೀ ವಿಶ್ವವೇ ಅಮೇರಿಕಾದ ಬೆಳವಣಿಗೆಗಳ ಬಗ್ಗೆ ನೋಡುತ್ತಿದೆ. ಈ ನಡುವೆ, ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಪುತ್ರನ ಒಂದು ಟ್ವೀಟ್ ಈಗ ಮೀಮ್ಸ್‌, ಜೋಕ್ಸ್‌ಗೆ ಆಹಾರವಾಗಿದೆ...!
Vijaya Karnataka Web Image by PublicDomainPictures from Pixabay
| Representative image | Image by PublicDomainPictures from Pixabay


Also Read : ಮುದ್ದು ಅವಳಿ ಮಕ್ಕಳ ಆಟ : ಗುಳ್ಳೆಗಳನ್ನು ಹಾರಿಸಲು ಶತಪ್ರಯತ್ನ : ಮನಸೆಳೆಯುವ ದೃಶ್ಯವಿದು

ಡೊನಾಲ್ಡ್‌ ಟ್ರಂಪ್ ಪುತ್ರ ಎರಿಕ್ ಟ್ರಂಪ್ ಒಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ನಲ್ಲಿ ಎರಿಕ್ 2020ರ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸುವಂತೆ ಜನರನ್ನು ಒತ್ತಾಯಿಸಿದ್ದಾರೆ...! ಚುನಾವಣೆ ನಡೆದು ವಾರದ ಬಳಿಕ ಮಾಡಿರುವ ಈ ಟ್ವೀಟ್ ಈಗ ಸಖತ್ ವೈರಲ್ ಆಗುತ್ತಿದೆ. ಜೊತೆಗೆ, ಎಲ್ಲರೂ ಎರಿಕ್‌ರನ್ನು ಕಿಚಾಯಿಸುತ್ತಿದ್ದಾರೆ...!


Also Read : 3 ತಿಂಗಳ ಪರಿಶ್ರಮ... ಅತೀ ದೊಡ್ಡ `ಜಟಿಲ ದಾರಿ'ಯನ್ನು ಕೈಯಲ್ಲಿಯೇ ರಚಿಸಿದ ಸಾಧಕಿ

ಮಂಗಳವಾರ ಎರಿಕ್ ಈ ಟ್ವೀಟ್ ಮಾಡಿದ್ದರು. ಮಿನ್ನೇಸೋಟದ ಜನರನ್ನು ಉದ್ದೇಶಿಸಿ ಟ್ವೀಟ್ ಮಾಡಲಾಗಿತ್ತು. `ಹೊರ ಬಂದು ಮತ ಚಲಾಯಿಸಿ' ಎಂದು ಎರಿಕ್ ಈ ಟ್ವೀಟ್‌ನಲ್ಲಿ ಒತ್ತಾಯಿಸಿದ್ದರು. ಆದರೆ, ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಇದನ್ನು ಡಿಲೀಟ್ ಮಾಡಲಾಗಿದೆ. ಆದರೆ, ಎಷ್ಟು ಬೇಗ ಟ್ವೀಟ್ ಡಿಲೀಟ್ ಮಾಡಿದರೂ ನೆಟ್ಟಿಗರ ಕಣ್ಣಿನಿಂದ ಎರಿಕ್ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಯಾಕೆಂದರೆ, ಕೆಲವರು ಅದಾಗಲೇ ಈ ಟ್ವೀಟ್‌ನ ಫೋಟೋ‌ ತೆಗೆದಿದ್ದರು. ಅದೂ ಡೊನಾಲ್ಡ್‌ ಟ್ರಂಪ್ ಎರಡನೇ ಪುತ್ರ ಹೀಗೆ ಟ್ವೀಟ್ ಮಾಡುತ್ತಾರೆ ಎಂದರೆ ಖಂಡಿತಾ ಇದು ಎಲ್ಲರ ಗಮನ ಸೆಳೆಯದೆ ಇರಲು ಸಾಧ್ಯವೇ ಇಲ್ಲ. ಹೀಗಾಗಿ, ಎಲ್ಲರೂ ಈ ಟ್ವೀಟ್‌ನ ಫೋಟೋವನ್ನು ಈಗ ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Also Read : ಕಂದನನ್ನು ಪರಿಚಯಿಸಲು ಡಿಸ್ನಿಯ `ದಿ ಲಯನ್ ಕಿಂಗ್' ಮರುಸೃಷ್ಟಿ: ಮನಸೆಳೆಯುವ ದೃಶ್ಯವಿದು


ಎರಿಕ್ ಈಗ ಯಾಕೆ ಈ ಟ್ವೀಟ್ ಮಾಡಿದ್ದರು ಎಂಬ ಪ್ರಶ್ನೆ ಕೂಡಾ ಹಲವರನ್ನು ಕಾಡಿದ್ದು ನಿಜ. ಆದರೆ, ತಾಂತ್ರಿಕ ದೋಷದಿಂದ ಹೀಗಾಗಿರುವ ಸಾಧ್ಯತೆ ಇದೆ. ಯಾಕೆಂದರೆ, ಚುನಾವಣೆಯ ದಿನದಂದು ಎರಿಕ್ ಟ್ರಂಪ್ ಇದೇ ರೀತಿ ಟ್ವೀಟ್‌ಗಳನ್ನು ಪೋಸ್ಟ್‌ ಮಾಡಿ ಜನರಿಗೆ ವೋಟ್ ಮಾಡುವಂತೆ ಒತ್ತಾಯಿಸಿದ್ದರು. ಬಹುಶಃ ಮಿನ್ನೇಸೋಟದ ಚುನಾವಣಾ ದಿನಕ್ಕೆಂದು ಇವರು ಶೆಡ್ಯೂಲ್ಡ್‌ ಅಂದರೆ ಮುಂಚೆಯೇ ನಿಗದಿ ಮಾಡಿಟ್ಟಿದ್ದ ಟ್ವೀಟ್ ತಪ್ಪಾಗಿ ಮಂಗಳವಾರ ಪೋಸ್ಟ್‌ ಆಗಿರುವ ಸಾಧ್ಯತೆ ಇದೆ. ತಾಂತ್ರಿಕ ದೋಷದಿಂದ ಹೀಗೆ ಆಗಿದ್ದರೂ ಸದ್ಯ ನೆಟ್ಟಿಗರಿಗೆ ನಗುವುದಕ್ಕೆ ಈ ಟ್ವೀಟ್ ಕೂಡಾ ಒಂದು ವಸ್ತುವಾಗಿದೆ ಎಂಬುದು ಸತ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ