ಆ್ಯಪ್ನಗರ

ಸುಮ್ಮನಿದ್ದ ಪ್ರಾಣಿಗಳನ್ನು ಕೆಣಕಬೇಡಿ... ಅಪಾಯ ಕಟ್ಟಿಟ್ಟಬುತ್ತಿ... ಎಚ್ಚರಿಕೆ...!

ಇದು ಎಲ್ಲರಿಗೂ ಪಾಠ... ಪ್ರಾಣಿಗಳೊಂದಿಗೆ ನಾವು ಹೇಗೆ ವರ್ತಿಸಬಾರದು ಎಂಬುದಕ್ಕೂ ಇದು ಉದಾಹರಣೆ...

Vijaya Karnataka Web 21 Oct 2020, 4:58 pm
ಮಾಡಿದ ಪಾಪ ಕಾಡದೇ ಇರದು ಎಂಬ ಮಾತಿದೆ... ಪ್ರಾಣಿಗಳ ವಿಚಾರದಲ್ಲಿ ಜನ ಕೆಲವೊಮ್ಮೆ ವರ್ತಿಸುವ ರೀತಿ ನೋಡಿದಾಗ ಈ ಮಾತು ಇನ್ನಷ್ಟು ಅರ್ಥವಾಗುತ್ತದೆ. ಕೆಲವರಿಗೆ ಪ್ರಾಣಿಗಳನ್ನು ಕೆಣಕುವ ಹವ್ಯಾಸ. ಪ್ರಾಣಿಗಳಿಗೂ ಇಲ್ಲಿ ಬದುಕುವ ಹಕ್ಕಿದೆ ಎಂಬುದನ್ನು ಮರೆಯುವ ಒಂದಷ್ಟು ಜನ ಪ್ರಾಣಿಗಳನ್ನು ಕೆಣಕಿ ತಮಾಷೆ ಮಾಡುತ್ತಾರೆ. ಆದರೆ, ಹೀಗೆ ಮಾಡಿದಾಗ ಒಮ್ಮೊಮ್ಮೆ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂಬುದು ಕೂಡಾ ಸತ್ಯ. ಇದಕ್ಕೆ ಬೇಕಾದಷ್ಟು ಉದಾಹರಣೆಗಳು ಕಾಣಸಿಗುತ್ತವೆ.
Vijaya Karnataka Web Image by F. Muhammad from Pixabay
| Representative image | Image by F. Muhammad from Pixabay


ಇತ್ತೀಚೆಗೆ ವೃದ್ಧರೊಬ್ಬರು ತನ್ನ ಪಾಡಿಗೆ ತಾನು ನಿಂತಿದ್ದ ಗೂಳಿಗೆ ಹೊಡೆದಿದ್ದ ವಿಡಿಯೋ ವೈರಲ್ ಆಗಿತ್ತು. ವೃದ್ಧರಿಂದ ಏಟು ತಿಂದಿದ್ದ ಈ ಗೂಳಿ ಬಳಿಕ ಅವರನ್ನೇ ಎತ್ತಿ ಬಿಸಾಕಿತ್ತು. ಅದೃಷ್ಟವಶಾತ್ ಅಂದು ಈ ವೃದ್ಧರಿಗೆ ಯಾವುದೇ ಅಪಾಯ ಆಗಿರಲಿಲ್ಲ. ಈ ದೃಶ್ಯ ನೋಡಿದ ಬಹುತೇಕರು ಈ ವೃದ್ಧರ ನಡೆಯನ್ನು ಟೀಕಿಸಿದ್ದರು. ಸದ್ಯ ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ಇಂತಹದ್ದೇ ಇನ್ನೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಕ್ಲಿಪ್‌ನಲ್ಲಿ ಕೂಡಾ ಗೂಡಿನಲ್ಲಿದ್ದ ಪ್ರಾಣಿಯನ್ನು ಕೆಣಕಿ ಸಂಕಷ್ಟ ಅನುಭವಿಸಿದ್ದ ವ್ಯಕ್ತಿಯ ದೃಶ್ಯವಿದೆ.

Also Read : One Eyed Shark : ಶಾರ್ಕ್‌ ಹೊಟ್ಟೆಯೊಳಗಿತ್ತು ಒಂದು ಕಣ್ಣಿನ ವಿಚಿತ್ರ ಮರಿ...!

ವ್ಯಕ್ತಿಯೊಬ್ಬ ಶ್ವಾನಗಳಿದ್ದ ಗೂಡಿನ ಬಳಿ ನಡೆದುಕೊಂಡು ಹೋಗುವ ಮೂಲಕ ಈ ವಿಡಿಯೋ ಶುರುವಾಗುತ್ತದೆ. ಹೀಗೆ ಸಾಗುತ್ತಿದ್ದ ವ್ಯಕ್ತಿ ತನ್ನ ಪಾಡಿಗೆ ಸುಮ್ಮನೆ ಮುಂದೆ ಹೋಗಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ, ಗೂಡಿನ ಬಳಿ ಸಾಗುವಾಗ ಈತನಿಗೆ ಅದೇನನಿಸಿತೋ ಏನೋ, ಈತ ಶ್ವಾನಗಳಿಗೆ ಒದೆಯುವುದಕ್ಕೆ ಆರಂಭಿಸಿದ್ದ. ಈತನ ಈ ವರ್ತನೆ ಶ್ವಾನಗಳನ್ನು ಕೆರಳಿಸಿತ್ತು. ಶ್ವಾನಗಳು ಆಕ್ರಮಣಕಾರಿಯಾಗುತ್ತಿದ್ದವು. ಇದನ್ನು ನೋಡುತ್ತಿದ್ದರೂ ಈತ ತನ್ನ ಕೃತ್ಯವನ್ನು ಮುಂದುವರಿಸಿದ್ದ. ಬಹುಶಃ ಶ್ವಾನಗಳು ಗೂಡಿನಲ್ಲಿವೆ ಏನೂ ಮಾಡದು ಎಂಬ ಧೈರ್ಯ ಈತನದ್ದಾಗಿರಬಹುದು. ಆದರೆ, ಪರಿಸ್ಥಿತಿ ಈತ ಅಂದುಕೊಂಡಿದ್ದಷ್ಟು ಸರಳವಾಗಿರಲಿಲ್ಲ. ಯಾಕೆಂದರೆ, ಈತನ ವರ್ತನೆಯಿಂದ ಕೆರಳಿದ್ದ ಶ್ವಾನ ಈತ ಒದೆಯುವಾಗ ಸರಿಯಾದ ಸಮಯ ನೋಡಿ ಆತನ ಕಾಲನ್ನು ಕಚ್ಚಿ ಗಟ್ಟಿ ಹಿಡಿದುಕೊಂಡಿತ್ತು. ಈ ಬಿಗಿ ಹಿಡಿತದಿಂದ ತಪ್ಪಿಸಿಕೊಳ್ಳಲು ಈತ ಪರದಾಡಬೇಕಾಯಿತು.

Also Read : ಈ ಪ್ರೀಮಿಯರ್ ಪದ್ಮಿನಿ ಕಾರನ್ನು ಡ್ರೈವ್ ಮಾಡುತ್ತಿರುವವರು ಯಾರು?: ನೆಟ್ಟಿಗರಲ್ಲಿ ಗೊಂದಲ...!


Also Read : ಸುಮ್ಮನಿದ್ದ ಗೂಳಿಯನ್ನು ಕೆಣಕಿದ ವೃದ್ಧ : ಮತ್ತೆ ನಡೆದದ್ದೆಲ್ಲಾ ನೋವಿನ ಘಟನೆ...

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ. ಜೊತೆಗೆ, ಬಹುತೇಕ ಎಲ್ಲರೂ ಈ ವ್ಯಕ್ತಿಯ ವರ್ತನೆಯನ್ನು ಟೀಕಿಸಿದ್ದಾರೆ. ಈ ವಿಡಿಯೋ ಎಲ್ಲರಿಗೂ ಒಂದು ಪಾಠವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ