ಆ್ಯಪ್ನಗರ

`ನನ್ನನ್ನು ಕ್ಷಮಿಸಿ' : ಕ್ಷಮೆಯಾಚನೆ ಪತ್ರ ಬರೆದಿಟ್ಟು 65,000 ರೂ ಮೌಲ್ಯದ ವಸ್ತು ಕದ್ದ ಕಳ್ಳ!

ಇದು ವಿಚಿತ್ರ ಕಳ್ಳನ ಕತೆ. ಈ ಭೂಪ ಕ್ಷಮೆಯಾಚನೆ ಪತ್ರ ಬರೆದಿಟ್ಟು ಸೂಪರ್‌ ಮಾರ್ಕೆಟ್‌ನಲ್ಲಿ ಕಳ್ಳತನ ಮಾಡಿದ್ದಾನೆ.

Vijaya Karnataka Web 12 Oct 2020, 1:09 pm
ಇದನ್ನು ಪ್ರಾಮಾಣಿಕತೆ ಎನ್ನಬೇಕೋ... ಅಸಹಾಯಕತೆ ಎನ್ನಬೇಕೋ... ಅನಿವಾರ್ಯತೆ ಎನ್ನಬೇಕೋ... ಭಂಡ ಧೈರ್ಯ ಎನ್ನಬೇಕೋ... ಕುಚೇಷ್ಟೆ ಎನ್ನಬೇಕೋ ಗೊತ್ತಿಲ್ಲ... ಆದರೆ, ಈ ಎಲ್ಲಾ ಅನುಮಾನಗಳನ್ನು ಮೂಡಿಸುವಂತಹ ಘಟನೆ ಇದು. ಇದು ವಿಚಿತ್ರ ಕಳ್ಳನ ಕತೆ. ಈ ಕಳ್ಳ ಸೂಪರ್‌ ಮಾರ್ಕೆಟ್‌ನಲ್ಲಿ ಕಳ್ಳತನ ಮಾಡಿದ್ದಾನೆ. ಬರೀ ಅಷ್ಟೇ ಅಲ್ಲ, ಕ್ಷಮಾಪಣೆ ಕೇಳಿ ಪತ್ರವನ್ನೂ ಬಿಟ್ಟು ಹೋಗಿದ್ದಾನೆ.
Vijaya Karnataka Web Image by kalhh from Pixabay
| Representative image | Image by kalhh from Pixabay


Also Read : ಒಂದು ಗಂಟೆಯೊಳಗೆ 33 ಖಾದ್ಯಗಳ ತಯಾರಿ : ದಾಖಲೆ ಬರೆದ 10 ವರ್ಷದ ಬಾಲಕಿ!

ಇದು ನಡೆದಿರುವುದು ತಮಿಳುನಾಡಿನ ಚೆನ್ನೈನ ಉಸಲಂಪಟ್ಟಿಯ ಸೂಪರ್‌ಮಾರ್ಕೆಟ್‌ನಲ್ಲಿ. ಉಸಲಂಪಟ್ಟಿ-ಮಧುರೈ ರಸ್ತೆಯಲ್ಲಿ ಈ ಮಳಿಗೆ ಇದ್ದು, 30 ವರ್ಷದ ಎಂ ರಾಂಪ್ರಕಾಶ್ ಇದರ ಮಾಲಿಕರಾಗಿದ್ದಾರೆ. ಈ ಸೂಪರ್‌ ಮಾರ್ಕೆಟ್‌ಗೆ ಬಂದಿದ್ದ ಕಳ್ಳ 65,000 ರೂ. ಮೌಲ್ಯದ ವಸ್ತು ಮತ್ತು 5,000 ರೂ. ನಗದನ್ನು ಹೊತ್ತೊಯ್ದಿದ್ದಾನೆ. ಹೀಗೆ ಕಳ್ಳತನ ಮಾಡುವಾಗ ಇವನಿಗೆ ನಿಜವಾಗಿಯೂ ಮನಃಸಾಕ್ಷಿ ಕಾಡಿತ್ತೋ ಏನೋ ಗೊತ್ತಿಲ್ಲ. ತನ್ನನ್ನು ಕ್ಷಮಿಸುವಂತೆ ಪತ್ರ ಬರೆದಿಟ್ಟು ಈತ ತೆರಳಿದ್ದ.

Also Read : ನಾಸಿಕ್‌ನ ಎತ್ತರದ ಹರಿಹರ್ ಕೋಟೆ ಹತ್ತಿದ 68ರ ವೃದ್ಧೆ : ಉತ್ಸಾಹಕ್ಕೆ ನೆಟ್ಟಿಗರು ಫಿದಾ

ಪತ್ರದಲ್ಲೇನಿದೆ...?
`ನನ್ನನ್ನು ಕ್ಷಮಿಸಿ. ನನಗೆ ಹಸಿವಾಗಿದೆ. ನೀವು ಕೇವಲ ಒಂದು ದಿನದ ಆದಾಯವನ್ನು ಮಾತ್ರ ಕಳೆದುಕೊಂಡಿದ್ದೀರಿ. ಆದರೆ, ಇದು ನನ್ನ ಮೂರು ತಿಂಗಳ ಆದಾಯಕ್ಕೆ ಸಮಯ. ಮತ್ತೊಮ್ಮೆ ನನ್ನ ಕ್ಷಮೆಯಾಚಿಸುತ್ತಿದ್ದೇನೆ' ಎಂದು ಬರೆದಿಟ್ಟು ಹೋಗಿದ್ದಾನೆ ಈ ಕಳ್ಳ. ಮಳಿಗೆ ಮಾಲಿಕ ರಾಂಪ್ರಕಾಶ್ ಮೊನ್ನೆ ಬೆಳಗ್ಗೆ ಮಳಿಗೆ ತೆರೆಯುವಾಗ ಇವರ ಎರಡು ಕಂಪ್ಯೂಟರ್, ಟಿವಿ ಮತ್ತು 5,000 ರೂ ನಗದು ಕಳ್ಳತನವಾಗಿತ್ತು. ಈ ಬಗ್ಗೆ ಇವರು ಪೊಲೀಸರಿಗೆ ದೂರು ಕೊಟ್ಟಿದ್ದರು. ಪೊಲೀಸ್ ತನಿಖೆ ವೇಳೆ ಕಳ್ಳ ವಸ್ತು ಮತ್ತು ನಗದನ್ನು ಮಾತ್ರ ಕದ್ದಿಲ್ಲ, ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಈತ ನಾಶಪಡಿಸಿದ್ದಾನೆ ಎಂದು ಗೊತ್ತಾಗಿದೆ.

Also Read : ಒಂದೇ ಹಕ್ಕಿಯಲ್ಲಿ ಗಂಡು- ಹೆಣ್ಣಿನ `ಗರಿ' ಲಕ್ಷಣ! : ಗಮನ ಸೆಳೆದಿದೆ ಅಪರೂಪದ ಬಾನಾಡಿ...!

ಕದ್ದ ಬಳಿಕ ಹೀಗೆ ಕ್ಷಮೆ ಕೇಳುವ ಪ್ರಕರಣಗಳು ಇದೇ ಮೊದಲೇನು ಅಲ್ಲ. ಈ ಹಿಂದೆ ಕೂಡಾ ಇಂತಹ ಹಲವು ಘಟನೆಗಳು ನಡೆದಿದ್ದವು. ಕೆಲವು ಕಡೆ ಕ್ಷಮೆಯಾಚನೆ ಪತ್ರದೊಂದಿಗೆ ಕದ್ದ ವಸ್ತುಗಳನ್ನು ಮರಳಿಸಿದವರೂ ಇದ್ದಾರೆ. ಇದೇ ವರ್ಷದ ಮೇ ನಲ್ಲಿ ಬರೇಲಿಯ ಮೊಹಮ್ಮದ್ ಇಕ್ಬಾಲ್ ಖಾನ್ ಎಂಬವರು ರಾಜಸ್ಥಾನದ ಭಾರತ್ಪುರದ ಸೇನವಾಲಿ ಗ್ರಾಮದಲ್ಲಿರುವ ಮನೆಯೊಂದರಿಂದ ಸೈಕಲ್ ಕದ್ದಿದ್ದರು. ಇವರು ರಾಜಸ್ಥಾನದಿಂದ ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ವಾಪಸಾಗುತ್ತಿದ್ದ ಲಕ್ಷಾಂತರ ವಲಸೆ ಕಾರ್ಮಿಕರಲ್ಲಿ ಒಬ್ಬರು. ಸೈಕಲ್ ಕದ್ದ ಬಳಿಕ ಇಕ್ಬಾಲ್ ಖಾನ್ `ನಾನು ಕಳ್ಳನಲ್ಲ. ಅಸಹಾಯಕ ಕಾರ್ಮಿಕ ಮತ್ತು ನಡೆಯಲು ಸಾಧ್ಯವಿಲ್ಲದ ವಿಕಲಚೇತನ ಮಗನ ತಂದೆ' ಎಂದು ಕ್ಷಮೆಯಾಚನೆಯ ಪತ್ರವನ್ನು ಸೈಕಲ್ ಕದ್ದ ಜಾಗದಲ್ಲಿಯೇ ಇಟ್ಟು ಹೋಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ