ಆ್ಯಪ್ನಗರ

ಈ ಮಾಲಿಕನ ಬಳಿ ಸಂಬಳ ಕೇಳುವಂತಿಲ್ಲ...! ಕೇಳಿದರೆ ದಾಳಿ ಮಾಡುತ್ತದೆ ಕೆರಳಿದ ಸಿಂಹ...!

ದುಡಿಯುವುದು ಏತಕ್ಕೆ ಹೇಳಿ...? ಬದುಕು ನಿರ್ವಹಣೆಗೆ ತಾನೇ... ಆದರೆ, ಇಲ್ಲೊಂದು ಕಡೆ ದುಡಿದ ಸಂಬಳ ಕೇಳುವಂತಿಲ್ಲ. ಕೇಳಿದರೆ ದಾಳಿ ಮಾಡುತ್ತದೆ ಸಿಂಹ...!

Vijaya Karnataka Web 15 Oct 2019, 11:07 am
ಲಾಹೋರ್ : ಪಾಕಿಸ್ತಾನ ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿದೆ. ಇಲ್ಲಿನ ಜನ ಬದುಕು ನಿರ್ವಹಣೆಗೂ ಕಷ್ಟಪಡುತ್ತಿದ್ದಾರೆ. ಇಂತಹದರಲ್ಲಿ ಧಾರ್ಮಿಕ ಕೇಂದ್ರದ ಜವಾಬ್ದಾರಿ ಹೊತ್ತ ವ್ಯಕ್ತಿಯೊಬ್ಬ ಕೆಲಸಗಾರನಿಗೆ ಸಂಬಳ ಕೊಡದೆ ಕ್ರೌರ್ಯ ಮೆರೆದಿದ್ದಾನೆ. ತಾನು ಕಾಡಿದ್ದು ಮಾತ್ರ ಅಲ್ಲದೆ, ತಾನೇ ಸಾಕಿರುವ ಸಿಂಹದಿಂದಲೂ ದಾಳಿ ಮಾಡಿಸಿದ್ದಾನೆ...!
Vijaya Karnataka Web lion attack
ಸಾಂದರ್ಭಿಕ ಚಿತ್ರ


Also Read : ಗಿಡಗಳನ್ನು ಕಿತ್ತೆಸೆದು ಹೂಕುಂಡ ಕದ್ದು ಓಡುವ ಅಜ್ಜ...!

ಪಂಜಾಬ್ ಪ್ರಾಂತ್ಯದ ಧಾರ್ಮಿಕ ಕೇಂದ್ರವೊಂದರಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಧಾರ್ಮಿಕ ಕೇಂದ್ರದಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡಬೇಕಾಗಿತ್ತು. ಇದಕ್ಕಾಗಿ ಈ ಧಾರ್ಮಿಕ ಕೇಂದ್ರದ ಉಸ್ತುವಾರಿ ಹೊತ್ತಿದ್ದ ಅಲಿ ರಝಾ ಎಂಬಾತ ಮೊಹಮ್ಮದ್ ರಫೀಕ್ ಎಂಬಾತನನ್ನು ಕೆಲಸಕ್ಕೆ ಕರೆದಿದ್ದ. ಕೆಲಸ ಎಲ್ಲಾ ಮುಗಿದ ಮೇಲೆ ರಫೀಕ್ ತನ್ನ ಸಂಬಳ ಕೇಳಿದ್ದ. ಈ ವೇಳೆ ರಝಾ ಈಗ ಕೊಡುತ್ತೇನೆ, ಮತ್ತೆ ಕೊಡುತ್ತೇನೆ ಎಂದು ಸತಾಯಿಸಿದ್ದ. ಇದೇ ತರ ತುಂಬಾ ದಿನ ಆದ ಬಳಿಕ ಇನ್ನೊಂದು ಸಲ ಸಂಬಳ ಕೇಳಲು ಹೋಗಿದ್ದ ರಫೀಕ್ ಮೇಲೆ ರಝಾ ತನ್ನ ಸಾಕು ಸಿಂಹದ ಮೂಲಕ ದಾಳಿ ಮಾಡಿಸಿದ್ದ. ಈ ದಾಳಿಯಿಂದ ರಫೀಕ್ ಮುಖ ಸೇರಿದಂತೆ ದೇಹದ ವಿವಿಧ ಭಾಗಗಳ ಮೇಲೆ ಗಾಯಗಳಾಗಿತ್ತು. ಸಿಂಹದ ದಾಳಿಯ ನೋವಿನಿಂದ ರಫೀಕ್ ಜೋರಾಗಿ ಕಿರುಚಾಡುವುದನ್ನು ಕೇಳಿದ ಅಲ್ಲೇ ಇದ್ದವರು ತಕ್ಷಣ ಬಂದು ಈತನನ್ನು ರಕ್ಷಿಸಿದ್ದರು.

Also Read : ಇಂತಹ ಮಕ್ಕಳು ವಿಶ್ವದಲ್ಲಿ ಇರುವುದು ಮೂವರೇ...!

ಈ ಬಳಿಕ ರಝಾ ಮತ್ತು ರಫೀಕ್ ನಡುವೆ ಸಂಧಾನ ನಡೆದಿತ್ತು. ರಝಾ ಕೂಡಾ ರಫೀಕ್‌ಗೆ ದುಡಿದ ಸಂಬಳ ನೀಡುವುದಾಗಿ ಹೇಳಿದ್ದ. ಜೊತೆಗೆ, ಚಿಕಿತ್ಸೆ ವೆಚ್ಚ ಕೂಡಾ ಭರಿಸುವುದಾಗಿ ಭರವಸೆ ನೀಡಿದ್ದ. ಹೀಗಾಗಿ, ಸಿಂಹದ ದಾಳಿ ಬಗ್ಗೆ ರಫೀಕ್ ಪೊಲೀಸರಿಗೂ ದೂರು ಕೊಟ್ಟಿರಲಿಲ್ಲ.

Also Read : ಯಪ್ಪಾ ದೇವರೇ...! ಹೊಟ್ಟೆ ನೋವೆಂದು ಹೋದ ಯುವಕರಿಬ್ಬರಿಗೆ ಪ್ರೆಗ್ನೆಂಸಿ ಟೆಸ್ಟ್ ಮಾಡಿಸಿ ಎಂದ ಡಾಕ್ಟರ್...!

ಆದರೆ, ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದ ರಝಾ ಹಣ ಕೊಡಲು ಸತಾಯಿಸಲು ಆರಂಭಿಸಿದ್ದ. ಹೀಗಾಗಿ, ನೊಂದ ರಫೀಕ್ ಎರಡು ದಿನಗಳ ಹಿಂದೆ ಪೊಲೀಸರಿಗೆ ದೂರು ಕೊಟ್ಟಿದ್ದು, ಸೆಪ್ಟೆಂಬರ್ 9 ರಂದು ನಡೆದಿದ್ದ ಈ ಘಟನೆ ಈಗ ಬೆಳಕಿಗೆ ಬಂದಿದೆ. ಸದ್ಯ ಪಾಕಿಸ್ತಾನದ ದಂಡ ಸಂಹಿತೆಯ ಸೆಕ್ಷನ್ 324ರ ಅಡಿಯಲ್ಲಿ ಅಲಿ ರಝಾ ವಿರುದ್ಧ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ