ಆ್ಯಪ್ನಗರ

ಈ ನೋವು ಶಾಶ್ವತ : ಎಂಟರೊಳಗೇ ತೋಳದ ಜೀವನ! : ಹೃದಯವನ್ನೇ ಭಾರವಾಗಿಸುವ ದೃಶ್ಯವಿದು

ಈ ದೃಶ್ಯವನ್ನು ನೋಡಿದಾಗ ಹೃದಯ ಭಾರವಾಗುತ್ತದೆ. ಈ ಪ್ರಾಣಿಯ ಕಷ್ಟವನ್ನು ಕಂಡಾಗ ನಾವು ಮನುಷ್ಯರು ವನ್ಯಜೀವಿಗಳಿಗೆಷ್ಟು ಹಿಂಸೆ ನೀಡುತ್ತೇವೆ ಎಂದು ಗೊತ್ತಾಗುತ್ತದೆ.

Vijaya Karnataka Web 1 Dec 2020, 7:10 pm
ಈ ಭೂಮಿಯಲ್ಲಿ ಬದುಕಲು ಪ್ರಾಣಿ ಪಕ್ಷಿಗಳೂ ಮನುಷ್ಯರಷ್ಟೇ ಸಮಾನ ಹಕ್ಕನ್ನು ಹೊಂದಿವೆ. ಆದರೆ, ಬುದ್ಧಿವಂತರೆಂದು ಕರೆಸಿಕೊಳ್ಳುವ ಮನುಷ್ಯರು ಬಹುತೇಕ ಸಂದರ್ಭಗಳಲ್ಲಿ ಪ್ರಾಣಿಗಳನ್ನು ಬಲು ಅಮಾನವೀಯವಾಗಿ ಕಾಣುತ್ತೇವೆ ಎಂಬುದು ಕೂಡಾ ಸತ್ಯ. ಪ್ರಾಣಿಗಳ ಸಹಜ ಆವಾಸ ಸ್ಥಾನ ಕಾಡು ಮನುಷ್ಯರಿಂದಾಗಿ ಕಡಿಮೆಯಾಗಿದೆ. ಅವುಗಳ ಜಾಗವನ್ನು ಆಕ್ರಮಿಸಿಕೊಂಡು ನಾವು ಸುಖವಾಗಿದ್ದೇವೆ. ಆದರೆ, ಪ್ರಾಣಿಗಳು ದಿಕ್ಕೆಟ್ಟು ಹೋಗುತ್ತಿವೆ. ಇವುಗಳ ಬದುಕೇ ಕಷ್ಟಕರವಾಗಿದೆ. ಪರಿಣಾಮ, ನಾಡಿಗೆ ಬಂದು ಅಲ್ಲಿ ಇಲ್ಲಿ ಸೆರೆ ಸಿಕ್ಕ ಪ್ರಾಣಿಗಳು ಮೃಗಾಲಯ ಸೇರುತ್ತವೆ. ಆದರೆ, ಕೆಲವೊಂದು ಸಲ ಮೃಗಾಲಯವೂ ಪ್ರಾಣಿಗಳಿಗೆ ಜೈಲಿನಂತಾಗುವುದಿದೆ. ಇದಕ್ಕೆ ಸಾಕ್ಷಿ ಇಲ್ಲಿದೆ.
Vijaya Karnataka Web Image by Alexas_Fotos from Pixabay
| Representative image | Image by Alexas_Fotos from Pixabay


Also Read : ಹೆಬ್ಬಾವಿನ ಬಾಯಿಯಿಂದ ಮುದ್ದಿನ ಶ್ವಾನದ ಮರಿಯನ್ನು ರಕ್ಷಿಸಿದ ಮಹಿಳೆ: ಭಯಾನಕ ವಿಡಿಯೋ ಇದು

ಇದೊಂದು ತೋಳದ ಹೃದಯ ವಿದ್ರಾವಕ ದೃಶ್ಯ. ಟರ್ಕಿಯ ಮೃಗಾಲಯದಲ್ಲಿ ಸೆರೆಯಾದ ಈ ದೃಶ್ಯವನ್ನು ಕಂಡಾಗ ಬಹುತೇಕರು ಭಾವುಕರಾಗಿದ್ದಾರೆ. ತೋಳವೊಂದು ಸಣ್ಣ ಆವರಣದಲ್ಲಿ ಸಂಕಷ್ಟ ಅನುಭವಿಸುತ್ತಿರುವ ದೃಶ್ಯವಿದು.

Also Read : ಸೀರೆಯುಟ್ಟ ನೀರೆಯ ಬ್ಯಾಕ್‌ಫ್ಲಿಪ್ : ಅದ್ಭುತ ಕೌಶಲ್ಯಕ್ಕೆ ನೆಟ್ಟಿಗರ ಶಹಬ್ಬಾಸ್


ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ತಮ್ಮ @susantananda3 ಎಂಬ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ಕ್ಲಿಪ್‌ನಲ್ಲಿ ತೋಳವೊಂದು ಸಣ್ಣ ಆವರಣದಲ್ಲಿ `ಎಂಟು' ಆಕಾರದಲ್ಲಿ ಓಡಾಡಿಕೊಂಡು ಜೀವನ ಮಾಡುತ್ತಿದೆ. ತಮ್ಮ ಟ್ವೀಟ್‌ನಲ್ಲಿ ಸುಸಂತ ನಂದ ಕಾಡು ಪ್ರಾಣಿಗಳನ್ನು ಸಣ್ಣ ಕಾರಾಗೃಹದಲ್ಲಿ ಬಂಧಿಸಿಡುವುದು ಸರಿಯಲ್ಲ ಎಂದೂ ಉಲ್ಲೇಖಿಸಿದ್ದಾರೆ. `ತೋಳಗಳು ದಿನಕ್ಕೆ 25 ಕಿಮೀ ಪ್ರಯಾಣಿಸುತ್ತವೆ ಮತ್ತು ಇಲ್ಲಿ ಈ ಸಣ್ಣ ಸೀಮಿತ ಜಾಗದಲ್ಲಿ ಸಾಧ್ಯವಾದಷ್ಟು `ಪ್ರಯಾಣ' ಮಾಡಲು ಅದು ಪ್ರಯತ್ನಿಸುತ್ತಿದೆ' ಎಂದು ಸುಸಂತ ನಂದ ಅವರು ಬರೆದುಕೊಂಡಿದ್ದಾರೆ.


Also Read : ತನ್ನ ಕೌಶಲ್ಯದಿಂದಲೇ ಗಮನ ಸೆಳೆದ 14ರ ಪೋರ : ಕರೆ ಮಾಡಿ ಶಹಬ್ಬಾಸ್ ಹೇಳಿದ ಕಮಲಾ ಹ್ಯಾರಿಸ್

ಈ ತೋಳ ಸಾಗಿ ಸಾಗಿ ಆ ದಾರಿ ಎಂಟರ ಆಕಾರ ಪಡೆದಿದೆ. ಅಂದರೆ ಈ ತೋಳ ದಿನಕ್ಕೆ ಅದೆಷ್ಟು ಹೊತ್ತು ನಡೆಯುತ್ತಿರಬಹುದು ಎಂದು ಗೊತ್ತಾಗುತ್ತದೆ. ಮನಸ್ಸಿಗೆ ತೀವ್ರ ನೋವುಂಟು ಮಾಡುವ ದೃಶ್ಯವಿದು. ಸದ್ಯ ಈ ವಿಡಿಯೋವನ್ನು ಕಂಡ ಬಹುತೇಕ ನೆಟ್ಟಿಗರು ಈ ತೋಳ ಮತ್ತು ಮೃಗಾಲಯದಲ್ಲಿರುವ ಪ್ರಾಣಿಗಳ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ