ಆ್ಯಪ್ನಗರ

Caught On Camera : ಹಾಡಹಗಲೇ `ಕಳ್ಳ ಬೆಕ್ಕಿನಂತೆ' ಬಂದ ಕಳ್ಳ ಬೆಕ್ಕಿನಿಂದಾಗಿಯೇ ಸಿಕ್ಕಿಬಿದ್ದ!

ಕಳ್ಳನ ಕಿತಾಪತಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ... ಈ ದೃಶ್ಯ ನೋಡಿದಾಗ ನಗುವುಕ್ಕುತ್ತದೆ...

Vijaya Karnataka Web 23 Oct 2020, 9:45 am
ಅಡ್ಡದಾರಿ ಹಿಡಿದವರು ಯಾವಾಗಲಾದರೂ ಒಂದು ಸಲ ಸಿಕ್ಕಿ ಬೀಳಲೇಬೇಕು. ಯಾಕೆಂದರೆ, ಪಾಪ ಕಾರ್ಯ ಮಾಡುವವರಿಗೆ ಎಲ್ಲಾ ಸಂದರ್ಭದಲ್ಲಿ ಅದೃಷ್ಟ ಕೈಹಿಡಿಯುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ನಸೀಬು ಕೆಟ್ಟರೆ ಹಗ್ಗವೂ ಹಾವಾಗಬಹುದು. ಇದು ಕೂಡಾ ಅಂತಹದ್ದೇ ಒಬ್ಬ ಕಳ್ಳನ ದೃಶ್ಯ. ಭರ್ಜರಿ ಕಳ್ಳತನದ ಆಸೆಯಿಂದ ಬಂದಿದ್ದ ಈ ಕಳ್ಳ ಬೆಕ್ಕಿನ ಕಾರಣದಿಂದ ಸಿಕ್ಕಿಬಿದ್ದಿದ್ದಾನೆ...!
Vijaya Karnataka Web Burglar Crawling
| Screengrab from video | Courtesy : Nottinghamshire Police/Facebook


ಇದು ಮಾರ್ಕ್‌ ಲಾಸನ್ ಎಂಬ ಕಳ್ಳನ ಕತೆ. ಇದು ನಡೆದಿರುವುದು ಮಾರ್ಚ್‌ 16ರಂದು. ಆದರೆ, ಈಗ ಪೊಲೀಸ್ ಇಲಾಖೆ ಈ ಕಳ್ಳ ಸಿಕ್ಕಿಬಿದ್ದ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ. ಮಾರ್ಕ್‌ ಲಾಸನ್ ಮಾರ್ಚ್ 16ರಂದು ನಾಟಿಂಗ್ಹ್ಯಾಮ್‌ನ ಮನೆಯೊಂದಕ್ಕೆ ಕಳ್ಳತನಕ್ಕೆಂದು ಬಂದಿದ್ದ. ಹೀಗೆ ಬಂದಿದ್ದ ಈತ ಹೊಂಚು ಹಾಕಿ ಮನೆಯ ಹಿಂದಿನ ಉದ್ಯಾನವನದ ಸುತ್ತ ತೆವಳುತ್ತಾ ತೆವಳುತ್ತಾ ಇನ್ನೊಂದು ಬಾಗಿಲಿನತ್ತ ಬಂದಿದ್ದ... ಈತ ಹೀಗೆ ಅಂಬೆಗಾಡುವ ಶೈಲಿಯಲ್ಲಿ ಬರುವ ದೃಶ್ಯವೇ ತಮಾಷೆಯಾಗಿದೆ...

Also Read : ಅಬ್ಬಬ್ಬಾ! ಭಯದಲ್ಲಿ ರಕ್ಷಿಸಿದವರ ಮೇಲೆಯೇ ದಾಳಿ ಮಾಡಿದ ಜಿಂಕೆ!: ಮುಂದೇನಾಯ್ತು ಗೊತ್ತಾ?

ಮಾರ್ಕ್‌ನ ಈ ಕಿತಾಪತಿಯ ದೃಶ್ಯಗಳೆಲ್ಲಾ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೀಗೆ ಅಂಬೆಗಾಲಿನಲ್ಲಿ ಇನ್ನೊಂದು ಬಾಗಿಲಿನ ಪಕ್ಕಕ್ಕೆ ಬರುವ ಮಾರ್ಕ್‌ಗೆ ಶಾಕ್ ಕಾದಿರುತ್ತದೆ... ಅದೇನೆಂದರೆ, ಬಾಗಿಲಿನ ಒಳಭಾಗದಲ್ಲಿ ಕುಳಿತಿರುವ ಬೆಕ್ಕು ಈತನನ್ನು ನೋಡುತ್ತದೆ. ಸಿಸಿ ಕ್ಯಾಮೆರಾ ದೃಶ್ಯಾವಳಿಯನ್ನು ಸೂಕ್ಷ್ಮವಾಗಿ ನೋಡಿದಾಗ ಬಾಗಿಲಿನ ಕನ್ನಡಿಯಾಚೆಗೆ ಬೆಕ್ಕು ಕುಳಿತಿರುವುದು ಕಾಣುತ್ತದೆ. ಈ ಬೆಕ್ಕನ್ನು ಕಂಡಾಗ ಒಂದು ಕ್ಷಣ ಮಾರ್ಕ್‌ ಕೂಡಾ ಗಲಿಬಿಲಿಗೊಂಡಿದ್ದ. ಇತ್ತ, ಬೆಕ್ಕು ಕಂಡ ಗಡಿಬಿಡಿಯಲ್ಲಿ ಈತನ ಚಲನೆಯಿಂದ ಸೆಕ್ಯೂರಿಟಿ ಅಲಾರಂ ಸದ್ದು ಮಾಡಿತ್ತು. ಇದರಿಂದ ಮನೆಯ ಆವರಣದೊಳಗೆ ಯಾರೋ ಬಂದಿದ್ದಾರೆ ಎಂಬುದು ಮಾಲಿಕರಿಗೂ ತಕ್ಷಣ ಅರಿವಿಗೆ ಬಂದಿತ್ತು. ಸದ್ಯ ಕಳ್ಳ ಮಾರ್ಕ್ ಬೆಕ್ಕನ್ನು ಎದುರುಗೊಳ್ಳುವ ತನಕದ ದೃಶ್ಯವನ್ನು ಈಗ ನಾಟಿಂಗ್ಹ್ಯಾಮ್ಶೈರ್ ಪೊಲೀಸರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.


Also Read : 60 ವರ್ಷದ ದಾಂಪತ್ಯ, ಕೋವಿಡ್-19 ನಿಂದ 7 ತಿಂಗಳು ದೂರ ದೂರ... ದಂಪತಿ ಜೊತೆಯಾಗುವ ದೃಶ್ಯವೇ ಭಾವನಾತ್ಮಕ

ಇದಾದ ಬಳಿಕ ಈತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. `ಆಧುನಿಕ ತಂತ್ರಜ್ಞಾನದಿಂದ ಕಳ್ಳನ ಪ್ರಯತ್ನ ಕೈಗೂಡಲಿಲ್ಲ. ಮನೆಯವರ ಸುರಕ್ಷತೆಗೆ ಮನೆ ಮಾಲಿಕರು ಕೈಗೊಂಡ ತ್ವರಿತ ಕ್ರಮಗಳು ಅಪರಾಧಿಯನ್ನು ತಕ್ಷಣವೇ ಹಿಡಿಯಲು ನಮಗೆ ಅವಕಾಶ ಮಾಡಿಕೊಟ್ಟವು' ಎಂದು ನಾಟಿಂಗ್ಹ್ಯಾಮ್ಶೈರ್ ಪೊಲೀಸರ ಡಿಟೆಕ್ಟಿವ್ ಕಾನ್ಸ್ಟೇಬಲ್ ಕ್ರಿಸ್ಟೋಫರ್ ಕೊಪ್ಲೆ ಮಾಧ್ಯಮಗಳಿಗೆ ಹೇಳಿದ್ದಾರೆ.

Also Read : ಬದುಕಿಗಾಗಿ ಬೀದಿ ಬದಿಯಲ್ಲಿ ಟೀ ಮಾರುವ ವೃದ್ಧ ದಂಪತಿ : ಕಣ್ಣೀರ ಕತೆಗೆ ಮರುಗಿದ ನೆಟ್ಟಿಗರು

ಅಕ್ಟೋಬರ್ 13ರಂದು ನಾಟಿಂಗ್ಹ್ಯಾಮ್ ಕ್ರೌನ್ ನ್ಯಾಯಾಲಯದಲ್ಲಿ ಲಾಸನ್‌ನನ್ನು ಹಾಜರುಪಡಿಸಲಾಗಿದ್ದು, ಆತನಿಗೆ 12 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಸದ್ಯ ಮಾರ್ಕ್‌ ಮನೆ ಬಳಿ ಸುಳಿದಾಡುತ್ತಿರುವ ಈ ವಿಡಿಯೋ ಕಂಡು ನೆಟ್ಟಿಗರಲ್ಲಿ ನಗೆಯುಕ್ಕಿಸಿದೆ. ಅಲ್ಲದೆ, ಹಲವರು ಬಲು ತಮಾಷೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ